Biggest lake of karnata is SOOLEKERE. It is in Davangeri Dist. . Read detail at
ಕೆರೆಕರೆ
-ಟಿ. ಶಿವಕುಮಾರ್
ಆಂಧ್ರಪ್ರದೇಶದ
ಕಂಭಂಕೆರೆ
ಹೊರತುಪಡಿಸಿದರೆ
ದಕ್ಷಿಣ ಭಾರತದ
ಎರಡನೇ ಅತಿದೊಡ್ಡ
ಕೆರೆ ಎಂಬ ಹೆಗ್ಗಳಿಕೆ
ಇರುವುದು
ದಾವಣಗೆರೆ ಜಿಲ್ಲೆ
ಚನ್ನಗಿರಿ ತಾಲೂಕಿನ
ಸೂಳೆಕೆರೆಗೆ.
ಇದು ಕರ್ನಾಟಕದ
ಪ್ರಾಚೀನ
ತಂತ್ರಜ್ಞಾನದ
ಹೆಮ್ಮೆ.
ಹಿರೇಹಳ್ಳಕ್ಕೆ
ಎರಡು ಗುಡ್ಡಗಳ
ಮಧ್ಯೆ
ಒಂದು ಬೃಹತ್
ಒಡ್ಡು ಕಟ್ಟಿ ಹಾಕಿ
ನೀರು ನಿಲ್ಲಿಸಿರುವ
ಆ ಕೆರೆಯ ಸುತ್ತಳತೆ
65 ಕಿಲೋಮೀಟರ್.
ಅದರ ಅಚ್ಚುಕಟ್ಟು
ಪ್ರದೇಶ
ಎರಡು ಸಾವಿರ
ಹೆಕ್ಟೇರ್.
ಇಷ್ಟೊಂದು
ವಿಸ್ತಾರದ ಕೆರೆ
ನೋಡುಗರ ಕಣ್ಣಿಗೆ
ಸಾಗರದಂತೆ
ಕಾಣುತ್ತದೆ.
ಎರಡು ಬೆಟ್ಟಗಳ
ನಡುವೆ
ಸುಮಾರು 950 ಅಡಿ
ಉದ್ದದ ಏರಿ. ಏರಿಯ
ಅಗಲ ಒಂದೆಡೆ 60
ಅಡಿಗಳಾದರೆ,
ಇನ್ನೊಂದೆಡೆ 80
ಅಡಿಗಳಷ್ಟಿದೆ.
ಐತಿಹಾಸಿಕ ಹಿನ್ನೆಲೆ
ಕೆರೆಯ ನಿರ್ಮಾಣದ
ಹಿಂದೆ ಅಚ್ಚರಿಯ
ಸಂಗತಿಗಳಿವೆ. ಇವು
ಇತಿಹಾಸಕ್ತರಿಗೆ
ಹೆಚ್ಚಿನ ಸಂಶೋಧನೆಗೆ
ಆಕರಗಳನ್ನು
ಒದಗಿಸುತ್ತವೆ. ಈ
ಪ್ರದೇಶದಲ್ಲಿ ಹಿಂದೆ
ಸ್ವರ್ಗವತಿ ಎಂಬ
ಪಟ್ಟಣ ಇತ್ತೆಂಬ
ಐತಿಹ್ಯ.
ವಿಕ್ರಮರಾಯನೆಂಬ
ರಾಜ ಆಳುತ್ತಿದ್ದ,
ನೂತನಾದೇವಿ ಆತನ
ಪತ್ನಿ. ಈ ದಂಪತಿಗೆ
ಶಾಂತಲಾದೇವಿ
(ಶಾಂತಮ್ಮ) ಎಂಬ
ಒಬ್ಬಳೇ ಮಗಳು.
ಅವಳು
ಯವ್ವನಾವಸ್ಥೆಗೆ
ಬಂದಾಗ ಒಮ್ಮೆ
ತಂದೆಯ ಅನುಮತಿ
ಪಡೆಯದೆ
ಕಾರ್ಯನಿಮಿತ್ತ ನೆರೆಯ
ಊರಿಗೆ ಹೋಗಿ
ಅರಮನೆಗೆ
ಹಿಂತಿರುಗುತ್ತಾಳೆ.
ಆಕೆಯ
ನಡವಳಿಕೆಯನ್ನು
ತಂದೆ ವಿಕ್ರಮರಾಯ
ಆಕ್ಷೇಪಿಸಿ
ನಿಂದಿಸುತ್ತಾನೆ.
ನಡತೆಗೆಟ್ಟವಳು (
ಸೂಳೆ) ಎಂದು
ಜರಿಯುತ್ತಾನೆ.
ತಂದೆಯ ಬೈಗುಳ
ಕೇಳಿ ನೊಂದ
ಶಾಂತಲಾದೇವಿ
ಆರೋಪ
ಮುಕ್ತಳಾಗಲು
ಒಂದು ಕೆರೆ
ನಿರ್ಮಿಸಲು ಸಂಕಲ್ಪ
ಮಾಡುತ್ತಾಳೆ.
ಸ್ವರ್ಗವತಿ ಪಟ್ಟಣದ
ವೇಶ್ಯೆಯರು
ವಾಸಿಸುತ್ತಿದ್ದ
ಪ್ರದೇಶ ಕೆರೆ
ನಿರ್ಮಾಣಕ್ಕೆ ಸೂಕ್ತ
ಎಂದು ನಾಮಕರಣ
ಮಾಡುವುದಾದರೆ ಆ
ಪ್ರದೇಶವನ್ನು ಬಿಟ್
ಟುಕೊಡುವುದಾಗಿ
ಅವರು
ಹೇಳುತ್ತಾರೆ.
ಅವರ ಬೇಡಿಕೆಯಂತೆ
ಒಪ್ಪಿದ ರಾಜಪುತ್ರಿ
ಅಲ್ಲಿ ಕೆರೆ ನಿರ್ಮಾಣ
ಮಾಡಿದಳು
ಎಂಬುದು ಇತಿಹಾಸ
.
ನೀರಿನ ಮೂಲ
ಅದೇನೆ ಇರಲಿ,
ಇಲ್ಲಿನ ಐತಿಹ್ಯದಂತೆ
ಸೂಳೆ ಶುಭ್ರ
ಮನಸ್ಸಿನ
ಶ್ರೇಷ್ಠಳು.
ತ್ಯಾಗ ಸಂಕೇತದ
ದೈವೀಸಮಾನಳೆಂಬ
ಪೂಜ್ಯಭಾವನೆ ಇದೆ.
ಸೂಳೆಕೆರೆಯ ಬಗ್ಗೆ
ಚಿಕ್ಕ ಚಿಕ್ಕ
ಸಮೃದ್ಧ ಜಾನಪದ
ಗೀತೆಗಳಲ್ಲದೆ,
ಕನಿಷ್ಠ
ಮೂರು ಗ್ರಂಥಸ್ಥ
ಕಾವ್ಯಗಳು
ಹುಟ್ಟಿಕೊಂಡಿವೆ.
ಕೆರೆ ವಿಸ್ತಾರವಾದ
ಬೆಟ್ಟ ಸಾಲುಗಳ
ಪ್ರದೇಶದಲ್ಲಿದೆ.
ಸುತ್ತಲಿನ
ನೂರಾರು
ಹಳ್ಳಿಗಳಲ್ಲಿ
ಬೀಳುವ ಮಳೆ
ನೀರು ಕೆರೆಗೆ
ಹರಿದುಬರುತ್ತದೆ.
ಹಳೇ ಮೈಸೂರು
ರಾಜ್ಯದ ಬ್ರಿಟಿಷ್
ಎಂಜಿನಿಯರ್ ಸ್ಯಾಂಕಿ
ಅವರು ಈ ಪ್ರದೇಶ
ಕೆರೆ ನಿರ್ಮಾಣಕ್ಕೆ
ಸೂಕ್ತವಲ್ಲ.
ಹಿಂದಿನ ಕಾಲದ
ನೀರಾವರಿ
ತಂತ್ರಜ್ಞರ
ಚಾಣಾಕ್ಷತೆಯಿಂದ ಈ
ಕೆರೆ
ನಿರ್ಮಾಣವಾಗಿದೆ.
ಅದು ಅಚ್ಚರಿಯ
ಸಂಗತಿ ಎಂದು
ಹೇಳಿರುವುದು
ಗಮನಾರ್ಹ. ಕೆರೆಯ
ಉತ್ತರದಲ್ಲಿ ಸಿದ್ದನ
ತೂಬು ಹಾಗೂ ಬಸವ
ತೂಬು ಎಂಬ
ಎರಡು ನಾಲೆಗಳಿವೆ.
ಈ ಕೆರೆ
ಸುಮಾರು 15ರಿಂದ
20 ಹಳ್ಳಿಗಳ ಕೃಷಿ
ಭೂಮಿಗೆ (2000 ಎಕರೆ)
ನೀರಾವರಿ ಸೌಲಭ್ಯ
ಒದಗಿಸಿದೆ.
ಚಿತ್ರದುರ್ಗ
ನಗರಕ್ಕೆ ಕುಡಿಯುವ
ನೀರು
ಪೂರೈಸುತ್ತಿದೆ.
ತುಂಬಿದ ಕೆರೆಯ
ಅಲೆಗಳು ಕಡಲ
ಅಲೆಗಳಂತೆ ದಡಕ್ಕೆ
ಅಪ್ಪಳಿಸುವುದು
ನೋಡಲು
ಪರಮಾದ್ಭುತ.
ದಾವಣಗೆರೆ-
ಚನ್ನಗಿರಿ
ಮಾರ್ಗದಲ್ಲಿರುವ ಈ
ಕೆರೆಯ
ಸೌಂದರ್ಯವನ್ನೊಮ್ಮೆ
ಆಸ್ವಾದಿಸಿ ನೋಡಿ.
ಇನ್ನೇನಿದೆ?
ಕೆರೆಯ ಪೂರ್ವ
ದಿಕ್ಕಿಗೆ ಹೊಯ್ಸಳ
ಮತ್ತು ಕೆಳದಿ
ವಾಸ್ತುಶೈಲಿಯ
ಸಿದ್ದೇಶ್ವರ
ದೇಗುಲವಿದೆ. ಇದರ
ಆವರಣದಲ್ಲಿ
ಶಾಂತವ್ವನ
ದೇಗುಲವೂ ಇದೆ.
ಕೆರೆಯ
ಅಂಚಿನಲ್ಲೊಂದು
ಆಕರ್ಷಕ
ಕಲ್ಲು ಮಂಟಪ.
ಇಲ್ಲಿಂದ ಕೆರೆ
ವೀಕ್ಷಣೆ
ಮನಮೋಹಕ.
ಮೀನುಗಾರಿಕೆಗೂ ಈ
ಕೆರೆಯ ಕೊಡುಗೆ
ಅಪಾರ.
ವಿಶೇಷವೆಂದರೆ,
ಬೆಳದಿಂಗಳಲ್ಲಿ
ಹಾಲಿನಂತೆ ನೀರ
ಮೇಲೆಲ್ಲ
ಚೆನ್ನಾಡುವ
ಚಂದ್ರನ
ಬೆಳಕು ಹೆಚ್ಚು ಮುದ
ನೀಡುತ್ತದೆ.
ಸೂರ್ಯೋದಯ,
ಸೂರ್ಯಾಸ್ತಗಳ
ವೇಳೆಗಳೂ ಅಷ್ಟೇ
ರಂಗಾಗಿರುತ್ತದೆ.
-: ಕನ್ನಡಪ್ರಭ
-ಟಿ. ಶಿವಕುಮಾರ್
ಆಂಧ್ರಪ್ರದೇಶದ
ಕಂಭಂಕೆರೆ
ಹೊರತುಪಡಿಸಿದರೆ
ದಕ್ಷಿಣ ಭಾರತದ
ಎರಡನೇ ಅತಿದೊಡ್ಡ
ಕೆರೆ ಎಂಬ ಹೆಗ್ಗಳಿಕೆ
ಇರುವುದು
ದಾವಣಗೆರೆ ಜಿಲ್ಲೆ
ಚನ್ನಗಿರಿ ತಾಲೂಕಿನ
ಸೂಳೆಕೆರೆಗೆ.
ಇದು ಕರ್ನಾಟಕದ
ಪ್ರಾಚೀನ
ತಂತ್ರಜ್ಞಾನದ
ಹೆಮ್ಮೆ.
ಹಿರೇಹಳ್ಳಕ್ಕೆ
ಎರಡು ಗುಡ್ಡಗಳ
ಮಧ್ಯೆ
ಒಂದು ಬೃಹತ್
ಒಡ್ಡು ಕಟ್ಟಿ ಹಾಕಿ
ನೀರು ನಿಲ್ಲಿಸಿರುವ
ಆ ಕೆರೆಯ ಸುತ್ತಳತೆ
65 ಕಿಲೋಮೀಟರ್.
ಅದರ ಅಚ್ಚುಕಟ್ಟು
ಪ್ರದೇಶ
ಎರಡು ಸಾವಿರ
ಹೆಕ್ಟೇರ್.
ಇಷ್ಟೊಂದು
ವಿಸ್ತಾರದ ಕೆರೆ
ನೋಡುಗರ ಕಣ್ಣಿಗೆ
ಸಾಗರದಂತೆ
ಕಾಣುತ್ತದೆ.
ಎರಡು ಬೆಟ್ಟಗಳ
ನಡುವೆ
ಸುಮಾರು 950 ಅಡಿ
ಉದ್ದದ ಏರಿ. ಏರಿಯ
ಅಗಲ ಒಂದೆಡೆ 60
ಅಡಿಗಳಾದರೆ,
ಇನ್ನೊಂದೆಡೆ 80
ಅಡಿಗಳಷ್ಟಿದೆ.
ಐತಿಹಾಸಿಕ ಹಿನ್ನೆಲೆ
ಕೆರೆಯ ನಿರ್ಮಾಣದ
ಹಿಂದೆ ಅಚ್ಚರಿಯ
ಸಂಗತಿಗಳಿವೆ. ಇವು
ಇತಿಹಾಸಕ್ತರಿಗೆ
ಹೆಚ್ಚಿನ ಸಂಶೋಧನೆಗೆ
ಆಕರಗಳನ್ನು
ಒದಗಿಸುತ್ತವೆ. ಈ
ಪ್ರದೇಶದಲ್ಲಿ ಹಿಂದೆ
ಸ್ವರ್ಗವತಿ ಎಂಬ
ಪಟ್ಟಣ ಇತ್ತೆಂಬ
ಐತಿಹ್ಯ.
ವಿಕ್ರಮರಾಯನೆಂಬ
ರಾಜ ಆಳುತ್ತಿದ್ದ,
ನೂತನಾದೇವಿ ಆತನ
ಪತ್ನಿ. ಈ ದಂಪತಿಗೆ
ಶಾಂತಲಾದೇವಿ
(ಶಾಂತಮ್ಮ) ಎಂಬ
ಒಬ್ಬಳೇ ಮಗಳು.
ಅವಳು
ಯವ್ವನಾವಸ್ಥೆಗೆ
ಬಂದಾಗ ಒಮ್ಮೆ
ತಂದೆಯ ಅನುಮತಿ
ಪಡೆಯದೆ
ಕಾರ್ಯನಿಮಿತ್ತ ನೆರೆಯ
ಊರಿಗೆ ಹೋಗಿ
ಅರಮನೆಗೆ
ಹಿಂತಿರುಗುತ್ತಾಳೆ.
ಆಕೆಯ
ನಡವಳಿಕೆಯನ್ನು
ತಂದೆ ವಿಕ್ರಮರಾಯ
ಆಕ್ಷೇಪಿಸಿ
ನಿಂದಿಸುತ್ತಾನೆ.
ನಡತೆಗೆಟ್ಟವಳು (
ಸೂಳೆ) ಎಂದು
ಜರಿಯುತ್ತಾನೆ.
ತಂದೆಯ ಬೈಗುಳ
ಕೇಳಿ ನೊಂದ
ಶಾಂತಲಾದೇವಿ
ಆರೋಪ
ಮುಕ್ತಳಾಗಲು
ಒಂದು ಕೆರೆ
ನಿರ್ಮಿಸಲು ಸಂಕಲ್ಪ
ಮಾಡುತ್ತಾಳೆ.
ಸ್ವರ್ಗವತಿ ಪಟ್ಟಣದ
ವೇಶ್ಯೆಯರು
ವಾಸಿಸುತ್ತಿದ್ದ
ಪ್ರದೇಶ ಕೆರೆ
ನಿರ್ಮಾಣಕ್ಕೆ ಸೂಕ್ತ
ಎಂದು ನಾಮಕರಣ
ಮಾಡುವುದಾದರೆ ಆ
ಪ್ರದೇಶವನ್ನು ಬಿಟ್
ಟುಕೊಡುವುದಾಗಿ
ಅವರು
ಹೇಳುತ್ತಾರೆ.
ಅವರ ಬೇಡಿಕೆಯಂತೆ
ಒಪ್ಪಿದ ರಾಜಪುತ್ರಿ
ಅಲ್ಲಿ ಕೆರೆ ನಿರ್ಮಾಣ
ಮಾಡಿದಳು
ಎಂಬುದು ಇತಿಹಾಸ
.
ನೀರಿನ ಮೂಲ
ಅದೇನೆ ಇರಲಿ,
ಇಲ್ಲಿನ ಐತಿಹ್ಯದಂತೆ
ಸೂಳೆ ಶುಭ್ರ
ಮನಸ್ಸಿನ
ಶ್ರೇಷ್ಠಳು.
ತ್ಯಾಗ ಸಂಕೇತದ
ದೈವೀಸಮಾನಳೆಂಬ
ಪೂಜ್ಯಭಾವನೆ ಇದೆ.
ಸೂಳೆಕೆರೆಯ ಬಗ್ಗೆ
ಚಿಕ್ಕ ಚಿಕ್ಕ
ಸಮೃದ್ಧ ಜಾನಪದ
ಗೀತೆಗಳಲ್ಲದೆ,
ಕನಿಷ್ಠ
ಮೂರು ಗ್ರಂಥಸ್ಥ
ಕಾವ್ಯಗಳು
ಹುಟ್ಟಿಕೊಂಡಿವೆ.
ಕೆರೆ ವಿಸ್ತಾರವಾದ
ಬೆಟ್ಟ ಸಾಲುಗಳ
ಪ್ರದೇಶದಲ್ಲಿದೆ.
ಸುತ್ತಲಿನ
ನೂರಾರು
ಹಳ್ಳಿಗಳಲ್ಲಿ
ಬೀಳುವ ಮಳೆ
ನೀರು ಕೆರೆಗೆ
ಹರಿದುಬರುತ್ತದೆ.
ಹಳೇ ಮೈಸೂರು
ರಾಜ್ಯದ ಬ್ರಿಟಿಷ್
ಎಂಜಿನಿಯರ್ ಸ್ಯಾಂಕಿ
ಅವರು ಈ ಪ್ರದೇಶ
ಕೆರೆ ನಿರ್ಮಾಣಕ್ಕೆ
ಸೂಕ್ತವಲ್ಲ.
ಹಿಂದಿನ ಕಾಲದ
ನೀರಾವರಿ
ತಂತ್ರಜ್ಞರ
ಚಾಣಾಕ್ಷತೆಯಿಂದ ಈ
ಕೆರೆ
ನಿರ್ಮಾಣವಾಗಿದೆ.
ಅದು ಅಚ್ಚರಿಯ
ಸಂಗತಿ ಎಂದು
ಹೇಳಿರುವುದು
ಗಮನಾರ್ಹ. ಕೆರೆಯ
ಉತ್ತರದಲ್ಲಿ ಸಿದ್ದನ
ತೂಬು ಹಾಗೂ ಬಸವ
ತೂಬು ಎಂಬ
ಎರಡು ನಾಲೆಗಳಿವೆ.
ಈ ಕೆರೆ
ಸುಮಾರು 15ರಿಂದ
20 ಹಳ್ಳಿಗಳ ಕೃಷಿ
ಭೂಮಿಗೆ (2000 ಎಕರೆ)
ನೀರಾವರಿ ಸೌಲಭ್ಯ
ಒದಗಿಸಿದೆ.
ಚಿತ್ರದುರ್ಗ
ನಗರಕ್ಕೆ ಕುಡಿಯುವ
ನೀರು
ಪೂರೈಸುತ್ತಿದೆ.
ತುಂಬಿದ ಕೆರೆಯ
ಅಲೆಗಳು ಕಡಲ
ಅಲೆಗಳಂತೆ ದಡಕ್ಕೆ
ಅಪ್ಪಳಿಸುವುದು
ನೋಡಲು
ಪರಮಾದ್ಭುತ.
ದಾವಣಗೆರೆ-
ಚನ್ನಗಿರಿ
ಮಾರ್ಗದಲ್ಲಿರುವ ಈ
ಕೆರೆಯ
ಸೌಂದರ್ಯವನ್ನೊಮ್ಮೆ
ಆಸ್ವಾದಿಸಿ ನೋಡಿ.
ಇನ್ನೇನಿದೆ?
ಕೆರೆಯ ಪೂರ್ವ
ದಿಕ್ಕಿಗೆ ಹೊಯ್ಸಳ
ಮತ್ತು ಕೆಳದಿ
ವಾಸ್ತುಶೈಲಿಯ
ಸಿದ್ದೇಶ್ವರ
ದೇಗುಲವಿದೆ. ಇದರ
ಆವರಣದಲ್ಲಿ
ಶಾಂತವ್ವನ
ದೇಗುಲವೂ ಇದೆ.
ಕೆರೆಯ
ಅಂಚಿನಲ್ಲೊಂದು
ಆಕರ್ಷಕ
ಕಲ್ಲು ಮಂಟಪ.
ಇಲ್ಲಿಂದ ಕೆರೆ
ವೀಕ್ಷಣೆ
ಮನಮೋಹಕ.
ಮೀನುಗಾರಿಕೆಗೂ ಈ
ಕೆರೆಯ ಕೊಡುಗೆ
ಅಪಾರ.
ವಿಶೇಷವೆಂದರೆ,
ಬೆಳದಿಂಗಳಲ್ಲಿ
ಹಾಲಿನಂತೆ ನೀರ
ಮೇಲೆಲ್ಲ
ಚೆನ್ನಾಡುವ
ಚಂದ್ರನ
ಬೆಳಕು ಹೆಚ್ಚು ಮುದ
ನೀಡುತ್ತದೆ.
ಸೂರ್ಯೋದಯ,
ಸೂರ್ಯಾಸ್ತಗಳ
ವೇಳೆಗಳೂ ಅಷ್ಟೇ
ರಂಗಾಗಿರುತ್ತದೆ.
-: ಕನ್ನಡಪ್ರಭ
Comments
Post a Comment