ಅನಂತಮೂರ್ತಿ ಜೀವನಚಿತ್ರ

Updated: 22 Aug 2014 09:23:57 PM IST
 ಜನನ​: ಡಿಸೆಂಬರ್ 21, 1932
ಮೇಳಿಗೆ ಗ್ರಾಮ, ತೀರ್ಥಹಳ್ಳಿ ತಾಲೂಕು
ಶಿವಮೊಗ್ಗ ಜಿಲ್ಲೆ
ವಿದ್ಯಾಭ್ಯಾಸ
* ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿ.ಎಚ್.ಡಿ. (ಬರ್ಮಿಂಗ್ ಹ್ಯಾಮ್ ವಿ.ವಿ. ಯುನೈಟೆಡ್ ಕಿಂಗ್ ಡಂ), 1966
* ಇಂಗ್ಲಿಷ್ ಎಂ.ಎ., ಮೈಸೂರು ವಿಶ್ವವಿದ್ಯಾಲಯ, 1956
* ಬಿ.ಎ. ಆನರ್ಸ್, ಮಹಾರಾಜ ಕಾಲೇಜು, ಮೈಸೂರು
ವೃತ್ತಿ ಅನುಭವಗಳು
* ಕುಲಪತಿ, ಕೇಂದ್ರೀಯ ವಿಶ್ವವಿದ್ಯಾಲಯ, ಗುಲ್ಬರ್ಗ, 2001
* ಸಂದರ್ಶಕ ಪ್ರಾಧ್ಯಾಪಕ, ಕಾರ್ನೆಲ್ ವಿವಿ, 2000
* ಸಂದರ್ಶಕ ಪ್ರಾಧ್ಯಾಪಕ, ಪೆನ್ವಿಲ್ವೇನಿಯಾ ವಿವಿ, 2000
* ಸನಿವಾಸ ಲೇಖಕ (ರೈಟರ್ ಇನ್ ರೆಸಿಡೆನ್ಸ್), ಟೆಕ್ಸಾಸ್ ವಿವಿ, ಆಸ್ಟಿನ್, 1995
* ಅಧ್ಯಕ್ಷರು, ಇಂಡಿಯನ್ ಅಕಾಡೆಮಿ (ದೆಹಲಿ) 1993-98
* ಅಧ್ಯಕ್ಷರು, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (ದೆಹಲಿ) 1992-93
* ಸಂದರ್ಶಕ ಪ್ರಾಧ್ಯಾಪಕ, ಜವಾಹರಲಾಲ್ ನೆಹರು ವಿವಿ, ದೆಹಲಿ, 1993
* ಪ್ರೊಫೆಸರ್, ಇಂಗ್ಲಿಷ್ ವಿಭಾಗ, ಮೈಸೂರು ವಿವಿ, 1980-92
* ಸಂದರ್ಶಕ ಪ್ರಾಧ್ಯಾಪಕ, ಟ್ಯೂಬಿಂಗನ್ ವಿವಿ, ಜರ್ಮನಿ, 1992
* ಉಪಕುಲಪತಿ, ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ, ಕೇರಳ 1987-91
* ಫುಲ್ ಬ್ರೈಟ್ ಸಂದರ್ಶಕ ಪ್ರಾಧ್ಯಾಪಕ, ಅಯೋವಾ ವಿವಿ, 1986-87
* ಸಂದರ್ಶಕ ಲೇಖಕ, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ, 1985
* ಸಂದರ್ಶಕ ಪ್ರಾಧ್ಯಾಪಕ, ಶಿವಾಜಿ ವಿವಿ, ಕೊಲ್ಲಾಪುರ, 1982
* ಸಂದರ್ಶನ ಪ್ರಾಧ್ಯಾಪಕ, ಟಫ್ಟ್ಸ್ ವಿವಿ, 1978
* ಸಂದರ್ಶಕ ಪ್ರಾಧ್ಯಾಪಕ, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ, 1975
* ರೀಡರ್, ಇಂಗ್ಲೀಷ್ ವಿಭಾಗ,ಮೈಸೂರು ವಿವಿ, 1970-80
* ರೀಡರ್, ಇಂಗ್ಲಿಷ್ ವಿಭಾಗ, ಪ್ರಾದೇಶಿಕ ಶಿಕ್ಷಣ ಕಾಲೇಜು, ಮೈಸೂರು, 1967-70
* ಇಂಗ್ಲಿಷ್ ಉಪನ್ಯಾಸಕ, 1956-63
ಫೆಲೋಶಿಪ್ ಮತ್ತು ಪ್ರಶಸ್ತಿಗಳು
* ಬಷೀರ್ ಪುರಸ್ಕಾರಂ, ಕೇರಳ, 2012
* ಗೌರವ ಡಾಕ್ಟರೇಟ್, ಕೇಂದ್ರಿಯ ವಿಶ್ವವಿದ್ಯಾಲಯ, ಗುಲ್ಬರ್ಗ, 2012
* ಗೌರವ ಡಾಕ್ಟರೇಟ್, ಕಲ್ಕತ್ತಾ ವಿಶ್ವವಿದ್ಯಾಲಯ, 2012
* ರವೀಂದ್ರನಾಥ ಟ್ಯಾಗೋರ್ ಸ್ಮಾರಕ ಪದಕ, ಕಲ್ಕತ್ತಾ ವಿಶ್ವವಿದ್ಯಾಲಯ, 2012
* ಸಂದರ್ಶಕ ಪ್ರಾಧ್ಯಾಪಕ, ಎಜುರೈಟ್ ಯೋಜನೆ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಕೊಟ್ಟಾಯಂ, ಕೇರಳ 2010
* ಫಕೀರ್ ಮೋಹನ್ ಸೇನಾಪತಿ ರಾಷ್ಟ್ರೀಯ ಪುರಸ್ಕಾರ, ಒರಿಸ್ಸಾ, 2012
* ಗಣಕ್ ಸೃಷ್ಟಿ ಪ್ರಶಸ್ತಿ, ಕೋಲ್ಕತ್ತ, 2002
* ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ, ಕೆಳದಿ ಗ್ರಾಮ, 2002
* ವಾಕ್ಪತಿ ಪ್ರಶಸ್ತಿ, ಕೇಂದ್ರಿಯ ಉಚ್ಚ ಶಿಕ್ಷಣ ಸಂಸ್ಥಾನಂ, ಸಾರಾನಾಥ್, ವಾರಣಾಸಿ, 2002
* ಬಾಪುರೆಡ್ಡಿ ಪುರಸ್ಕಾರಂ, ಹೈದರಾಬಾದ್, 2001
* ಪದ್ಮಭೂಷಣ, ಭಾರತ ಸರ್ಕಾರ, 1998
* ಶಿಖರ್ ಸಮ್ಮಾನ್, ಹಿಮಾಚಲ ಪ್ರದೇಶ ಸರ್ಕಾರ, 1995
* ಗೌರವ ಡಿ.ಲಿಟ್, ರವೀಂದ್ರ ಭಾರತಿ ವಿ.ವಿ, ಕಲ್ಕತ್ತ 1995
* ಜ್ಞಾನಪೀಠ ಪ್ರಶಸ್ತಿ, 1994
* ಮಾಸ್ತಿ ಪ್ರಶಸ್ತಿ, 1994
* ಸೌಹಾರ್ದ ಪ್ರಶಸ್ತಿ, 1990
* 'ಬರ' ಚಿತ್ರಕ್ಕಾಗಿ ಅತ್ಯುತ್ತಮ ಕಥಾ ಪ್ರಶಸ್ತಿ, ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮ, 1989
* ಸಮಾಜಭೂಷಣ ಪ್ರಶಸ್ತಿ, ಅದಮಾರು ಮಠ,ಉಡುಪಿ, 1988
* ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರ, 1984
* ಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, 1983
* 'ಘಟಶ್ರಾದ್ಧ' ಸಿನಿಮಾಕ್ಕೆ ಅತ್ಯುತ್ತಮ ಕಥಾ ಪ್ರಶಸ್ತಿ, ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮ, 1978
* ಫೆಲೋಶಿಪ್, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ, 1975
* ವಿಸಿಟಿಂಗ್ ರೈಟರ್, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ, 1975
* ಸೃಜನಶೀಲ ಸಾಹಿತ್ಯಕ್ಕಾಗಿ ಹೋಮಿ ಭಾಭಾ ಫೆಲೋಶಿಪ್, 1972-74
* 'ಸಂಸ್ಕಾರ' ಚಿತ್ರಕ್ಕಾಗಿ ಅತ್ಯುತ್ತಮ ಕಥಾ ಪ್ರಶಸ್ತಿ, 1970
* ಉನ್ನತ ಅಧ್ಯಯನಕ್ಕಾಗಿ ಕಾಮನ್ ವೆಲ್ತ್ ಫೆಲೋಶಿಪ್, ಯುನೈಟೆಡ್ ಕಿಂಗ್ ಡಂ, 1963-66
* ಕೃಷ್ಣರಾವ್ ಚಿನ್ನದ ಪದಕ (ಎಂ.ಎ) ಮೈಸೂರು ವಿ.ವಿ., 1956
ವಿಚಾರ ಸಂಕಿರಣಗಳು, ಉಪನ್ಯಾಸಗಳು ಮತ್ತು ಪ್ರವಾಸ
* ಇಂಡಿಯಾ ಆ್ಯಸ್ ಎ ನೇಷನ್ ಅಂಡ್ ಎ ಸೊಸೈಟಿ, ಲಕ್ಷ್ಮಿ ನಿಜಾಮುದ್ದೀನ್  ಸ್ಮಾರಕ ಉಪನ್ಯಾಸ, 2012
* ಗ್ರೋಯಿಂಗ್ ಅಪ್ ಆ್ಯಸ್ ಎ ರೈಟರ್ ರೀಜನಲ್ ಇಂಡಿಯನ್ ಲ್ಯಾಂಗ್ವೇಜ್, ರಾಧಾಕೃಷ್ಣನ್ ಸ್ಮಾರಕ ಉಪನ್ಯಾಸ, 2012
* ರವೀಂದ್ರನಾಥ್ ಎ ವಾಯ್ಸ್ ಫ್ರಮ್ ಏಷ್ಯಾ, ಯುನೆಸ್ಕೊ ಉಪನ್ಯಾಸ, ಪ್ಯಾರಿಸ್, 2011
* ಫೆಸ್ಟಿವಲ್ ಆಫ್ ಲೆಟರ್ಸ್, ಲೋಹಿಯಾ ಶತಮಾನೋತ್ಸವದ ಉದ್ಘಾಟನೆ, ಸಾಹಿತ್ಯ ಅಕಾಡೆಮಿ, ದೆಹಲಿ, 2010
* ರಾಧಾಕೃಷ್ಣನ್ ಸ್ಮಾರಕ ಉಪನ್ಯಾಸಕಗಳು, ಆಲ್ ಸೌಲ್ಸ್ ಕಾಲೇಜ್, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, 2007-08
ಕನ್ನಡ ಕೃತಿಗಳು
* 'ಸಮಸ್ತ ಕಾವ್ಯ' (ಆರು ದಶಕಗಳ ಕಾವ್ಯ), ಅಭಿನವ, ಬೆಂಗಳೂರು, ೨೦೧೨
* 'ಪ್ರೀತಿ ಮೃತ್ಯು ಮತ್ತು ಭಯ' (ಕಾದಂಬರಿ), ಅಂಕಿತ ಪುಸ್ತಕ, ಬೆಂಗಳೂರು, (ಬರೆದದ್ದು ೧೯೫೬), ಪ್ರಕಟವಾದದ್ದು ೨೦೧೨'
* 'ಪಚ್ಚೆ ರೆಸಾರ್ಟ್', (ಪದ್ಯಗಳು ಮತ್ತು ಸಣ್ಣ ಕತೆಗಳು), ಅಭಿನವ, ಬೆಂಗಳೂರು, ೨೦೧೧
* 'ಆಚೀಚೆ' (ಲೇಖನಗಳು), ಅಭಿನವ, ಬೆಂಗಳೂರು, ೨೦೧೧
* 'ರುಚಿಕರ ಕಹಿ ಸತ್ಯಗಳ ಕಾಲ' (ಅಂಕಣ ಬರಹಗಳು) ವಸಂತ ಪ್ರಕಾಶನ, ಬೆಂಗಳೂರು, ೨೦೧೧
* 'ಶತಮಾನದ ಕವಿ ರಿಲ್ಕೆ' ಅಭಿನವ, ಬೆಂಗಳೂರು, ೨೦೦೯
* 'ಅಭಾವ' (ಕವನಗಳು), ಅಭಿನವ, ಬೆಂಗಳೂರು, ೨೦೦೯
* 'ಶತಮಾನದ ಕವಿ ವರ್ಡ್ಸ್ ವರ್ತ್', ಅಭಿನವ, ಬೆಂಗಳೂರು, ೨೦೦೯
* 'ಮತ್ತೆ ಮತ್ತೆ ಬ್ರೆಕ್ಟ್' ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ೨೦೦೯
* 'ಹತ್ತು ಸಮಸ್ತರ ಜೊತೆ' (ಸಂದರ್ಶನಗಳು), ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ೨೦೦೯
* 'ಕಾಲಮಾನ' (ಲೇಖನಗಳು), ಅಭಿನವ, ಬೆಂಗಳೂರು, ೨೦೦೯
* 'ಸದ್ಯ ಮತ್ತು ಶಾಶ್ವತ' (ಲೇಖನಗಳು), ಅಂಕಿತ ಪುಸ್ತಕ, ಬೆಂಗಳೂರು, ೨೦೦೮
* 'ಶತಮಾನದ ಕವಿ ಯೇಟ್ಸ್', ಅಭಿನವ, ಬೆಂಗಳೂರು, ೨೦೦೮
* 'ಮಾತು ಸೋತ ಭಾರತ'(ಲೇಖನಗಳು), ಅಭಿನವ, ಬೆಂಗಳೂರು, ೨೦೦೭
* 'ಋಜುವಾತು' (ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯ ಕುರಿತ ಲೇಖನಗಳು), ಅಂಕಿತ ಪುಸ್ತಕ, ಬೆಂಗಳೂರು, ೨೦೦೭
* 'ವಾಲ್ಮೀಕಿಯ ನೆವದಲ್ಲಿ' (ಲೇಖನಗಳು), ಅಭಿನವ, ಬೆಂಗಳೂರು, ೨೦೦೬
* 'ದಿವ್ಯ'(ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೨೦೦೧
* 'ಐದು ದಶಕದ ಕತೆಗಳು', ಅಕ್ಷರ ಪ್ರಕಾಶನ, ಹೆಗ್ಗೋಡು,೨೦೦೧
* 'ಇಲ್ಲಿಯವರೆಗಿನ ಕವಿತೆಗಳು', ಪ್ರಿಸಂ ಬುಕ್ಸ್ ಪ್ರೈ.ಲಿ., ಬೆಂಗಳೂರು, ೨೦೦೧
* 'ಕನ್ನಡ, ಕರ್ನಾಟಕ' (ಆಯ್ದ ಲೇಖನಗಳು), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೦೧
* 'ಯುಗ ಪಲ್ಲಟ' (ಲೇಖನಗಳು), ಅಭಿನವ, ಬೆಂಗಳೂರು, ೨೦೦೧
* 'ಬೆತ್ತಲೆ ಪೂಜೆ ಯಾಕೆ ಕೂಡದು' (ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೬
* 'ಸೂರ್ಯನ ಕುದುರೆ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೪
* 'ಭವ' (ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೪
* 'ದಾವ್ ದ ಜಿಂಗ್' (ಅನುವಾದ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೫
* 'ಮಿಥುನ' (ಕವಿತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೨
* 'ಪೂರ್ವಾಪರ' (ವಿಮರ್ಶಾ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೨
* 'ಅಜ್ಜನ ಹೆಗಲ ಸುಕ್ಕುಗಳು' (ಕವಿತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೯
* 'ಎರಡು ದಶಕಗಳ ಕತೆಗಳು' ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೯
* 'ಆಕಾಶ ಮತ್ತು ಬೆಕ್ಕು' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೩
* 'ಸಮಕ್ಷಮ' (ರಾಜಕೀಯ, ಸಂಸ್ಕೃತಿ, ಸಮಾಜ ಮತ್ತು ಸಾಹಿತ್ಯ ಕುರಿತ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೨
* 'ಅವಸ್ಥೆ' (ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೮
* 'ಭಾರತೀಪುರ' (ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೪
* 'ಪ್ರಜ್ನೆ ಮತ್ತು ಪರಿಸರ' (ವಿಮರ್ಶಾ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೪
* 'ಸನ್ನಿವೇಶ' (ವಿಮರ್ಶಾ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೪
* 'ಕನ್ನಡ ಕಾವ್ಯ' (ಸಂಪಾದಕ), ನ್ಯಾಷನಲ್ ಬುಕ್ ಟ್ರಸ್ಟ್, ದೆಹಲಿ, ೧೯೭೨
* 'ಆವಾಹನೆ' (ನಾಟಕ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೧
* 'ಸಂಸ್ಕಾರ' (ಕಾದಂಬರಿ), ಮನೋಹರ ಗ್ರಂಥಮಾಲೆ, ಧಾರವಾಡ, ೧೯೬೫
(ಈ ಕಾದಂಬರಿಯು ಇಂಗ್ಲಿಷ್, ರಷ್ಯನ್, ಫ್ರೆಂಚ್, ಉರ್ದು, ತಮಿಳು ಮತ್ತು ಗುಜರಾತಿಗೂ ಅನುವಾದಗೊಂಡಿದೆ)
* 'ಮೌನಿ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೬೭
* 'ಪ್ರಶ್ನೆ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೬೨
* 'ಎಂದೆಂದೂ ಮುಗಿಯದ ಕತೆ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೫೫



 


Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು