೧೨ವರ್ಷಕ್ಕೊಮ್ಮೆ ಹೂ ಬಿಟ್ಟು ನಶಿಸುವ ಹಾರ್ಲೆ(ಪಶ್ಚಿಮ ಘಟ್ಟದಲ್ಲಿ ನೀಲಿ ರಂಗೋಲಿ)


ಮಲೆನಾಡಿನ ವಿಶೇಷತೆಗಳು ಹಲವು. ಇಲ್ಲಿನ ಗಿರಿ ತೊರೆ
ಹಳ್ಳ ಕೊಳ್ಳಗಳನ್ನೊಳ
ಗೊಂಡ ಪ್ರಕತಿ, ಮಳೆಗಾಲದಲ್ಲಿ ಮೈದಳೆಯುವ
ಜಲಪಾತಗಳು...ಹೀಗೆ ಪಟ್ಟಿ ದೊಡ್ಡದಿದೆ.
ಇಂತಹ ವಾತಾವರಣದ ನಡುವೆ ಭೂಮಿಯ ಒಡಲಿನಿಂದ
ಸಸ್ಯವಾಗಿ ಬೆಳೆದು 12 ವರ್ಷಗಳಿಗೆ ಒಮ್ಮೆ
ಹೂ ಬಿಟ್ಟು ಮುಂದಿನ ಪೀಳಿಗೆಗೆ ಬೀಜೋತ್ಪತ್ತಿ
ಮಾಡಿ ತನ್ನ ಜೀವಿತ
ಅವಧಿಯನ್ನು ಪೂರ್ಣಗೊಳಿಸಿಕೊಳ್ಳುವ
ಹಾರ್ಲೆ ಎಂಬ ಗಿಡ ವಿಶೇಷವಾದುದು.
ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಘಟ್ಟ
ಪ್ರದೇಶಗಳಾದ ದೇವರಮನೆ, ಬೈರಾಪುರ, ಮೂಲರ ಹಳ್ಳಿ, ಗುತ್ತಿಹಳ್ಳಿ,
ಕೋಗಿಲೆ, ಮರಗುಂದ ಮುಂತಾದ ಗಿರಿಶಿಖರಗಳಲ್ಲಿ ಈ ವರ್ಷ
ಪ್ರಕೃತಿನಿರ್ಮಿತ ಹಾರ್ಲೆಯ ಹೂದೋಟ
ನಿರ್ಮಾಣಗೊಂಡಿದೆ. ಪ್ರಕೃತಿಯ ಈ ಸೂಜಿಗ
ಸ್ಥಳೀಯರು, ಪರಿಸರ ಪ್ರಿಯರನ್ನು ತನ್ನತ್ತ
ಸೆಳೆಯುತ್ತಿವೆ.
ಹಾರ್ಲೆ ಗಿಡ ಹಲವು ವೈಶಿಷ್ಠಗಳನ್ನು ಹೊಂದಿದೆ.
ಬಿದಿರಿನದ್ದು 60 ವರ್ಷಗಳ ಜೀವಿತಾವಧಿಯಾದರೆ
ಇದರದ್ದು 12 ವರ್ಷಗಳು. ಅತೀ ಹೆಚ್ಚು ಮಳೆ
ಬೀಳುವ ಬೆಟ್ಟಗುಡ್ಡಗಳಲ್ಲಿ ಹುಟ್ಟುವ ಈ ಗಿಡ 12
ವರ್ಷಗಳಿಗೊಮ್ಮೆ
ಹೂ ಬಿಟ್ಟು ಇಡೀ ಬೆಟ್ಟವನ್ನೇ ಸುಂದರ
ಉದ್ಯಾನವನವನ್ನಾಗಿಸುತ್ತದೆ. ಇದನ್ನು ನೋಡಲೆಂದೇ ರಾಜ್ಯದ
ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದೆ. ಈ
ವರ್ಷವೂ ಹಾರ್ಲೆ ಹೂವಿನ ಉದ್ಯಾನ
ವೀಕ್ಷಿಸಲು ಸಾವಿರಾರು ಮಂದಿ ಪರಿಸರ
ಪ್ರಿಯರು ಆಗಮಿಸುತ್ತಿದ್ದಾರೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು