2014ನ್ನು 'ಕಮಾಂಡೋ ವರ್ಷ'ವೆಂದು ಘೋಷಿಸಲು ಸರ್ಕಾರ ನಿರ್ಧಾರ
ನವದೆಹಲಿ, ಅ.5- ಭಯೋತ್ಪಾದಕರ ದುಷ್ಕೃತ್ಯಗಳನ್ನು ಹಿಮ್ಮೆಟ್ಟಲು ಹಾಗೂ ಗಣ್ಯರಿಗೆ ಭದ್ರತೆ ಒದಗಿಸುತ್ತಿರುವ ರಾಷ್ಟ್ರೀಯ ಭದ್ರತಾ ಪಡೆ ಯೋಧರ ಜೀವನ ಮಟ್ಟ ಸುಧಾರಿಸಲು ಮುಂದಾಗಿರುವ ಕೇಂದ್ರ ಸರ್ಕಾರ, 2014ನ್ನು ಕಮಾಂಡೋ ವರ್ಷವೆಂದು ಘೋಷಿಸಲು ಅಗತ್ಯವಾದ ತಯಾರಿಗಳನ್ನು ನಡೆಸಿದೆ. ಸದ್ಯಕ್ಕೆ ಎನ್‍ಎಸ್‍ಜಿ ಪಡೆಗೆ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಯೋಧರನ್ನು ಆಯ್ದುಕೊಂಡು ಎರವಲು ಸೇವೆ ಪಡೆಯಲಾಗುತ್ತಿದೆ. ಭಯೋತ್ಪಾದಕರು ದಾಳಿ ಮಾಡಿದಾಗ ಅದನ್ನು ಪ್ರತಿರೋಧಿಸಲು ಎನ್‍ಎಸ್‍ಜಿ ಕಮಾಂಡೋಗಳನ್ನು ಅಕಾಡಕ್ಕೆ ಇಳಿಸಲಾಗುತ್ತದೆ. ಪ್ರಾಣದ ಹಂಗು ತೊರೆದು ಯೋಧರು ಉಗ್ರರ ಗುಂಡಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ಇನ್ನೂ ಬೆದರಿಕೆ ಇರುವ ಗಣ್ಯರಿಗೆ ಝಡ್ ಪ್ಲಸ್ ಭದ್ರತೆ ಒದಗಿಸುವುದು ಈ ಯೋಧರ ಕೆಲಸವಾಗಿದೆ. ಆದರೆ ಈ ಯೋಧರ ಜೀವನ ಮಟ್ಟ ಇನ್ನಷ್ಟು ಸುಧಾರಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
2008ರ ಮುಂಬೈ ದಾಳಿಯ ನಂತರ ಎನ್‍ಎಸ್‍ಜಿ ಕಂಮಾಂಡೋಗಳ ಅಗತ್ಯತೆ ಹೆಚ್ಚಾಗಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹರ್ಯಾಣದ ಮನಿಸಾರ್‍ನಲ್ಲಿ ಎನ್‍ಸ್‍ಜಿ ಪಡೆಯ ಕೇಂದ್ರ ಸ್ಥಾನದ ಜೊತೆಗೆ ಮುಂಬೈ, ಕೋಲ್ಕತ್ತಾ, ಚೆನೈ, ಹೈದರಾಬಾದ್ ಸೇರಿದಂತೆ ನಾಲ್ಕು ಕಡೆ ಘಟಕಗಳನ್ನು ಸ್ಥಾಪಿಸಿದೆ. ಈ ಘಟಕಗಳಲ್ಲಿನ ಮೂಲ ಸೌಲಭ್ಯಗಳನ್ನು ಸುಧಾರಿಸುವುದು ಹಾಗೂ ಕೇಂದ್ರದಲ್ಲಿನ ಸೈನಿಕರ ಬ್ಯಾರಕ್‍ಗಳ ಗುಣಮಟ್ಟ ಹೆಚ್ಚಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಜೊತೆಗೆ ಯೋಧರ ಮನೆ ಬಾಡಿಗೆ ಭತ್ಯೆ ಹೆಚ್ಚಳ. ರ್ಯಾಚರಣೆಯಲ್ಲಿನ ಮೃತಪಟ್ಟ ಯೋಧರ ಕುಟುಂಬಗಳಿಗೆ ನೀಡಲಾಗುವ ಪೂರ್ಣ ಪ್ರಮಾಣದ ವೇತನ ಒಳಗೊಂಡು ಇನ್ನಷ್ಟು ಅನುದಾನ ನೀಡಿ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ.
ಈ ವರ್ಷ ಕಮಾಂಡೋಗಳ ವರ್ಷವೆಂದು ಘೋಷಿಸಲು ತಯಾರಿ ನಡೆದಿದ್ದು ಅದೇ ಸಂದರ್ಭದಲ್ಲಿ ಎನ್‍ಎಸ್‍ಜಿ ಯೋಧರ ಜೀವನ ಮಟ್ಟ ಸುಧಾರಣೆಗೂ ಆಧ್ಯತೆ ನೀಡುವುದಾಗಿ ಎನ್‍ಎಸ್‍ಜಿ ಪಡೆಯ ಮುಖ್ಯಸ್ಥ ಜೆ.ಎನ್.ಚೌದರಿ ಹೇಳಿದ್ದಾರೆ
Comments
Post a Comment