*2014ರ ವಿಶ್ವ ವನ್ಯಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದ ಕನ್ನಡಿಗ
ಬೆಂಗಳೂರು, ಅ.23- ಇಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ ಪ್ರತಿಷ್ಠಿತ ನ್ಯಾಚುರಲ್ ಹಿಸ್ಟರಿ ಮ್ಯೂಜಿಯಂ ಆಯೋಜಿಸಿದ್ದ ವನ್ಯ ಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಕರ್ನಾಟಕದ ರವಿಪ್ರಕಾಶ್ ಅವರು ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದು ದೂರದೂರಿನಲ್ಲಿ ಕನ್ನಡದ ಕಂಪು ಪಸರಿಸುವಂತೆ ಮಾಡಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯವರಾದ ರವಿಪ್ರಕಾಶ್ ಅವರು 2014ರ ವಿಶ್ವ ವನ್ಯ ಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಪಶ್ಚಿಮಘಟ್ಟದಲ್ಲಿ ಅಪರೂಪವೆನಿಸಿರುವ ಹಸಿರುಹಾವು ಛಾಯಾಚಿತ್ರಕ್ಕೆ ಮೊದಲ ಬಹುಮಾನ ಬಂದಿದೆ. ಇದಕ್ಕಾಗಿ ಸಂಸ್ಥೆ 1250 ಪೌಂಡ್ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಿದೆ. ವಿಶ್ವದ ವಿವಿಧ ದೇಶಗಳಿಂದ ಸ್ಪರ್ಧೆಗೆ ಬಂದಿದ್ದ ಛಾಯಾಚಿತ್ರಗಳನ್ನು ಹಿಂದಿಕ್ಕಿ ರವಿಪ್ರಕಾಶ್ ತೆಗೆದಿದ್ದ ಹಸಿರುಹಾವು ಛಾಯಾಚಿತ್ರವನ್ನು ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಜಿಯಂ ಸಂಸ್ಥೆಯು ಆಯ್ಕೆ ಮಾಡಿದೆ.
Comments
Post a Comment