ಅಮೆರಿಕದ ಅತ್ಯುತ್ತಮ ಯುವವಿಜ್ಞಾನಿ
*** ಭಾರತೀಯ ಮೂಲದ 'ಸಾಹಿಲ್' ಅಮೆರಿಕದ ಅತ್ಯುತ್ತಮ ಯುವ ವಿಜ್ಞಾನಿ ***
ವಾಷಿಂಗ್ಟನ್(ಅಕ್ಟೋಬರ್ 23): ಪರಿಸರಕ್ಕೆ ಮಾರಕವಾದ ಕಾರ್ಬನ್ ಡೈಆಕ್ಸೈಡನ್ನ ವಿದ್ಯುತ್'ಗೆ ಪರಿವರ್ತಿಸಿ ಬೆಳಕು ನೀಡುವ ಬ್ಯಾಟರಿ ಆವಿಷ್ಕರಿಸಿದ 14 ವರ್ಷದ ಸಾಹಿಲ್ ದೋಶಿ ಈಗ ಅಮೆರಿಕದ ಕಣ್ಮಣಿಯಾಗಿದ್ದಾನೆ. ಭಾರತೀಯ ಮೂಲದ ಈ ಬಾಲಕ ಅಮೆರಿಕದ ಅತ್ಯುತ್ತಮ ಯುವ ವಿಜ್ಞಾನಿ ಪ್ರಶಸ್ತಿಯ ಗೌರವ ಗಿಟ್ಟಿಸಿದ್ದಾನೆ. ಪರಿಸರ ಉಳಿಸುವ ಈತನ "ಪೊಲ್ಲುಸೆಲ್" ಸಾಧನದ ಬಗ್ಗೆ ಅಮೆರಿಕದ ವಿಜ್ಞಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವರ್ಷದ "ಡಿಸ್ಕವರಿ ಎಜುಕೇಶನ್ 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್" ಸ್ಪರ್ಧೆಯಲ್ಲಿ ಸಾಹಿಲ್ ಭಾಗವಹಿಸಿ ತನ್ನ ಚಮತ್ಕಾರ ತೋರಿದ್ದಾನೆ.
ಪೆನ್'ಸಿಲ್ವೇನಿಯಾ ರಾಜ್ಯದ ಪಿಟ್ಸ್'ಬರ್ಗ್ ನಗರದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಾಹಿಲ್ ದೋಷಿ ಕಂಡುಹಿಡಿದಿರುವ ಪೊಲ್ಲುಸೆಲ್ ಬ್ಯಾಟರಿ ಮುಂದಿನ ದಿನಗಳಲ್ಲಿ ವಿಶ್ವಾದ್ಯಂತ ಮನೆಮನೆಗಳಲ್ಲಿ ವಿದ್ಯುತ್ ಮೂಲವಾಗುವ ಸಾಧ್ಯತೆ ಇದೆ. ಈತನ ಸಾಧನೆಗೆ ಅತ್ಯುತ್ತಮ ಬಾಲ ವಿಜ್ಞಾನಿ ಎಂಬ ಗೌರವದ ಜೊತೆಗೆ 25 ಸಾವಿರ ಡಾಲರ್ ಹಣ ಹಾಗೂ ವಿದ್ಯಾರ್ಥಿ ಸಾಹಸ ಪ್ರವಾಸದ ಗಿಫ್ಟನ್ನೂ ನೀಡಲಾಗಿದೆ.
ಭಾರತೀಯ ಮೂಲದವರಾದ ಜೈಕುಮಾರ್ ಮತ್ತು ಮೈತ್ರಿ ಅಂಬಾಟಿಪುಂಡಿ ಈ ಸ್ಪರ್ಧೆಯಲ್ಲಿ 3 ಮತ್ತು 5ನೇ ಸ್ಥಾನ ಗಿಟ್ಟಿಸಿದ್ದು ವಿಶೇಷ. ಮಲಿನ ವಸ್ತುಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುವ ಏರ್ ಪ್ಯೂರಿಫಿಕೇಶನ್ ಸಿಸ್ಟಮನ್ನ ಜೈಕುಮಾರ್ ಆವಿಷ್ಕರಿಸಿದ್ದಾನೆ.
ಮಾಹಿತಿಯ ಮೂಲ:- ಸುವರ್ಣ ನ್ಯೂಸ್ 24X7))
Comments
Post a Comment