ದೇಶದ ಮೊಟ್ಟಮೊದಲ ಹೈಸ್ಪೀಡ್ ರೈಲು ನ.೧೦ರಿಂದ ಆರಂಭ
ನವದೆಹಲಿ, ಅ.30- ದೇಶದ ಮೊಟ್ಟಮೊದಲ ಹಾಗೂ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ರೈಲು ಮುಂಬರುವ ನ.10ರಿಂದ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಿದೆ. ದೆಹಲಿ-ಆಗ್ರ ನಡುವೆ ಸಂಚರಿಸಲಿರುವ ಈ ಹೈಸ್ಪೀಡ್ ರೈಲು ಪ್ರತಿ ಗಂಟೆ 160 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ನ.10ರಿಂದ ಪ್ರಾಯೋಗಿಕ ಸಂಚಾರ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಪೂರ್‍ತಲ ರೈಲ್ವೆ ಕೋಚ್ ಪ್ಯಾಕ್ಟರಿಯಲ್ಲಿ ಒಟ್ಟು 14 ಬೋಗಿಗಳ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ಪ್ರಾರಂಭವಾಗಿದ್ದು, ಶರಾಬ್ಧಿ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲಿಗೆ ಅಳವಡಿಸಿರುವ ಬೋಗಿಗಳಿಗಿಂತಲೂ ಅತ್ಯಾಧುನಿಕ ಕೋಚ್ ಅಳವಡಿಸಲಾಗಿದೆ. ಒಂದು ಬೋಗಿಯ ವೆಚ್ಚ ಸುಮಾರು 2.25ಕೋಟಿಯಿಂದ 2.50ಕೋಟಿ ರೂ. ವೆಚ್ಚ ತಗುಲಲಿದೆ.
ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ಮಾಹಿತಿ ಒದಗಿಸುವುದು, ಸ್ವಯಂ ಪ್ರೇರಿತವಾಗಿ ಬಾಗಿಲು ತೆಗೆಯುವುದು ಮತ್ತು ಹಾಕುವುದು, ಬೆಂಕಿ ಅನಾಹುತದಿಂದ ತಡೆಗಟ್ಟುವುದು ಸೇರಿದಂತೆ ಮತ್ತಿತರ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಎಂದು ರೈಲ್ವೆ ಕೋಚ್ ಪ್ಯಾಕ್ಟರಿಯ ಜನರಲ್ ಮ್ಯಾನೇಜರ್ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.
ಶತಾಬ್ಧಿ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲಿಗೆ ಅಳವಡಿಸಲಾಗಿರುವ ಬೋಗಿಗಳನ್ನೇ ಮೊದಲು ಅಳವಡಿಕೆ ಮಾಡಲಾಗುವುದು. ರೈಲು ಸಂಚರಿಸುವ ಮಾರ್ಗಗಳ ಮಣ್ಣಿಗೆ ಅನುಗುಣವಾಗಿ ಇದನ್ನು ತಯಾರಿಸಲಾಗಿದೆ. 160ಕಿ.ಮೀ.ನಿಂದ 200 ಕಿ.ಮೀ. ವೇಗದಲ್ಲಿ ಸಂಚರಿಸುವಂತೆ ಈ ಬೋಗಿಗಳು ತಯಾರಿಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.
Comments
Post a Comment