ಇಸ್ರೋ ದಿಂದ IRNSS1C ಉಪಗ್ರಹ ಉಡಾವಣೆ
ಐಆರ್ಎನ್ಎಸ್ಎಸ್ 1 ಸಿ ಉಡಾವಣೆಗೆ ಶುರುವಾಗಿದೆ
ಕೌಂಟ್ಡೌನ್:ಇಸ್ರೋ
ಚೆನ್ನೈ, ಅ.13-
ಮಂಗಳಯಾನ
ಅಭಿಯಾನದ
ಬೆನ್ನಲ್ಲೇ ಈಗ
ಮತ್ತ
ಸಿದ್ಧವಾಗಿರುವ
ಭಾರತೀ
ಬಾಹ್ಯಾಕಾಶ
ಸಂಶೋಧನಾ ಸ
(ಇಸ್ರೋ)ಯ ದಿಕ್ಸೂಚಿ ಉಪಗ್ರಹ ಐಆರ್ಎನ್ಎಸ್ಎಸ್ 1 ಸಿ ಉಡಾವಣೆಗೆ
ಇಂದು ಮುಂಜಾನೆಯಿಂದ 67 ಗಂಟೆಗಳ
ಕೌಂಟ್ಡೌನ್ ಆರಂಭಿಸಿದೆ. ಸ್ವದೇಶಿ ನಿರ್ಮಿತ
ಪಿಎಸ್ಎಲ್ವಿ-26 ಉಡಾವಣಾ ವಾಹಕದ ಮೂಲಕ ಆಂಧ್ರಪ್ರದೇಶದ
ಶ್ರೀ ಹರಿಕೋಟಾದ ಉಡ್ಡಯನ ನೆಲೆಯಿಂದ
ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿ
ಕೊಡಲಾಗುವುದು ಎಂದು ಇಸ್ರೋ ಮೂಲಗಳು ತಿಳಿಸಿವೆ.
ಐಆರ್ಎನ್ಎಸ್ಎಸ್ 1 ಸಿ
ಉಪಗ್ರಹವನ್ನು ಅ.10ರಂದೇ ಉಡಾಯಿಸಬೇಕಾಗಿತ್ತು. ಆದರೆ
ಹಲವು ತಾಂತ್ರಿಕ ಅಡಚಣೆಗಳಿಂದಾಗಿ
ಉಡಾವಣೆಯನ್ನು ಮುಂದೂಡಲಾಗಿತ್ತು. ಇದೀಗ
ಅಕ್ಟೋಬರ್ 16ಕ್ಕೆ ಉಡಾವಣಾ ಮುಹೂರ್ತ ನಿಗದಿಯಾಗಿದೆ
ಎಂದು ಮೂಲಗಳು ತಿಳಿಸಿವೆ.
ಮಾರ್ಸ್ ಆರ್ಬಿಟರ್ ಮಿಷನ್ (ಎಂಒಎಂ) ಯಶಸ್ವಿಯಾಗಿ
ಅಂಗಾರಕನ ಅಂಗಳ ತಲುಪಿದ ಖುಷಿಯಲ್ಲಿರುವ
ಇಸ್ರೋ ವಿಜ್ಞಾನಿಗಳು, ಇದೀಗ ಅಮೆರಿಕದ ಜಿಪಿಎಸ್
ಮಾದರಿಯಲ್ಲಿಯೇ ದೇಶೀ ನಿರ್ಮಿತ ದಿಕ್ಸೂಚಿ ವ್ಯವಸ್ಥೆ
ಸಿದ್ಧಪಡಿಸಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ
ಮುಂದಿಟ್ಟಿರುವ ಇಸ್ರೋ ಈ ಕಾರ್ಯಕ್ಕಾಗಿ ಒಟ್ಟು 7
ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧಾರ ಮಾಡಿದೆ. ಈ
ಹಿನ್ನೆಲೆಯಲ್ಲಿ ಈಗಾಗಲೇ 2 ಉಪಗ್ರಹಗಳನ್ನು ಹಾರಿ ಬಿಡಲಾಗಿದ್ದು ,
ಅವು ಯಶಸ್ವಿಯಾಗಿವೆ. ಐಆರ್ಎನ್ಎಸ್ಎಸ್ 1 ಸಿ 1,425.4 ಕೆ.ಜಿ
ತೂಕವಿದ್ದು , ಅ.16ರ ಮುಂಜಾನೆ 1.32ಕ್ಕೆ ಗಗನಕ್ಕೆ
ಚಿಮ್ಮಲಿದೆ ಎಂದು ಮೂಲಗಳು ಹೇಳಿವೆ.
Comments
Post a Comment