CPC 2014 KEY ANSWERS
ಸಾಧನಾ ಕೋಚಿಂಗ್ ಸೆಂಟರ್, ಶಿಕಾರಿಪುರ.
1. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು?
ಡಿ) ಚಾಲುಕ್ಯರು
2. ಹೊಯ್ಸಳರ ರಾಜಧಾನಿ ಯಾವುದು?
ಸಿ) ದ್ವಾರಸಮುದ್ರ
3. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?
ಡಿ) ರಜಿಯಾ ಬೇಗಂ
4. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು?
ಎ) ಜಲಾಲ್-ಉದ್-ದೀನ್ ಮಹಮದ್
5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ?
ಸಿ) ಸರ್ ಎಂ ವಿಶ್ವೇಶ್ವರಯ್ಯ
6. ______________ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ.
ಬಿ) ಶ್ರೀ ವಿಜಯ
7. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.?
ಎ) ಕಾರ್ಬನ್ 14 ಮತ್ತು ಪೊಟ್ಯಾಷಿಯಂ
8.ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ?
ಸಿ) ಹಿಂದೂಸ್ಥಾನಿ ಸಂಗೀತ
9.ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :
ಎ) ಚಾಂದ್ ಬರ್ದಾಯಿ 1. ವಿಕ್ರಮಾಂಕದೇವಚರಿತ
ಬಿ) ಬಿಲ್ಹಣ 2. ಅರ್ಥಶಾಸ್ತ್ರ
ಸಿ) ಕಲ್ಹಣ 3. ಪೃಥ್ವಿರಾಜರಾಸೋ
ಡಿ) ಕೌಟಿಲ್ಯ 4. ರಾಜತರಂಗಿಣಿ
ಉತ್ತರ: ಡಿ) ಎ-3, ಬಿ-1, ಸಿ-4, ಡಿ-2
10. ಈ ಕೆಳಗೆ ಹೆಸರಿಸಿರುವ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಾಗಿರುವುದಿಲ್ಲ?
ಎ) ಬಾದಾಮಿ
11. ಭಾರತ ಸಂವಿಧಾನದ 24ನೇ ವಿಧಿಯ ಪ್ರಕಾರ ಎಷ್ಟು ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಲಾಗಿದೆ?
ಡಿ) 14 ವರ್ಷ
12. ನಮ್ಮ ಸಂವಿಧಾನದ ಯಾವ ವಿಧಿಯು ಅಸ್ಪೃಷ್ಯತಾ ಆಚರಣೆಯನ್ನು ತೊಡೆದು ಹಾಕಿದೆ?
ಸಿ) 17 ನೇ ವಿಧಿ
13. ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ?
ಡಿ) ಚೀನಾ
14. ಹಿಮಾಲಯ ಪರ್ವತ ಶ್ರೇಣಿಯು ಪಶ್ಚಿಮದಲ್ಲಿ __________ ದಿಂದ ಪ್ರಾರಂಭವಾಗುತ್ತದೆ?
ಬಿ) ಪಾಮಿರ್ ಗ್ರಂಥಿ
15. ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ _______________ ಇದೆ.
ಎ) ಅರಬ್ಬೀ ಸಮುದ್ರ
16. ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ ಯಾವುದು?
ಬಿ) ನಗರ ಯೋಜನೆ
17. ಜೈನ ಧರ್ಮದ ಮೊತ್ತಮೊದಲ ತೀರ್ಥಂಕರ ಯಾರು?
ಸಿ) ವೃಷಭನಾಥ
18. ಬೌದ್ಧ ಧರ್ಮವನ್ನು ಹರಡಲು ಅಫಘಾನಿಸ್ಥಾನ, ಬರ್ಮಾ, ಶ್ರೀಲಂಕಾ ಮತ್ತು ಯೂರೋಪಿಗೆ ನಿಯೋಗಗಳನ್ನು ಕಳುಹಿಸಿದ ದೊರೆ ಯಾರು?
ಡಿ) ಅಶೋಕ
19. ಪ್ರಾಚೀನ ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ ಯಾರು?
ಬಿ) ಆರ್ಯಭಟ
20. _________ ರವರು ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತನಾಮರಾಗಿದ್ದಾರೆ?
ಎ) ಮಾಸ್ಟರ್ ಹಿರಣ್ಣಯ್ಯ
21. ಈ ಕೆಳಗಿನವುಗಳಲ್ಲಿ ಯಾವುದು ವಾಣಿಜ್ಯ ಬೆಳೆ?
ಸಿ) ರಬ್ಬರ್
22. ಈ ಕೆಳಗಿನವುಗಳಲ್ಲಿ ಯಾವುದು ಅಣು ಖನಿಜ?
ಡಿ) ಯುರೇನಿಯಂ
23. ಮರ್ಮಗೋವಾ ಬಂದರು ಯಾವ ರಾಜ್ಯದಲ್ಲಿದೆ?
ಎ) ಗೋವಾ
24. ಪ್ರಪಂಚದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
ಬಿ) ಬ್ರೆಜಿಲ್
25. 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ
ಎ) 121 ಕೋಟಿ
26. ಈ ಕೆಳಕಂಡವರಲ್ಲಿ ಯಾರು ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕರಗಿರುತ್ತಾರೆ?
ಬಿ) ನಾಗಾಭರಣ
27.ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಭಂದಿಸಿದಂತೆ ಈ ಕೆಳಕಂಡ ಯಾವ ವ್ಯಕ್ತಿಯೂ ಕ್ರಾಂತಿಕಾರಿ ಆಗಿರಲಿಲ್ಲ?
ಡಿ) ದಾದಾಭಾಯ್ ನವರೋಜಿ
28.ಗಾಂಧೀಜಿಯವರ ಪ್ರಸಿದ್ದ ' ಉಪ್ಪಿನ ಸತ್ಯಾಗ್ರಹ ' ಅಥವಾ ' ದಂಡಿ ಸತ್ತಯಾಗ್ರಹ 'ವು ಯಾವ ವರ್ಷ ಆರಂಭವಾಯಿತು?
ಎ) 1930
29.ಸುಭಾಷ್ ಚಂದ್ರಬೋಸ್ ರವರು-----ಎಂದು ಪ್ರಖ್ಯಾತರಾಗಿದ್ದರು?
ಬಿ) ನೇತಾಜಿ
30.ಬಾಂಬೆ ಶಾಸನಸಭೆಗೆ ರಾಜೀನಾಮೆ ನೀಡಿ,ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿದವರು ಯಾರು?
ಸಿ) ಅಂದಾನಪ್ಪ ದೊಡ್ಡಮೇಟಿ
31. A x B = C ಆಗಿದ್ದು A=7 ಮತ್ತು C=0 ಆದರೆ, B=?
ಡಿ) 0
32. ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ. 5, 12, 4, 13, 3, 14, -
ಬಿ) 2
33. ಪೋಕ್ರಾನ್ ಯಾವ ರಾಜ್ಯದಲ್ಲಿದೆ?
ಸಿ) ರಾಜಸ್ಥಾನ
34. ನವೆಂಬರ್ 2013 ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರಿಗೆ ಯಾವ ಪ್ರಶಸ್ತಿ ಲಭಿಸಿತು?
ಬಿ) ಭಾರತರತ್ನ
35. ಬಯೋಕಾನ್ ಸಂಸ್ಥೆಯ ಸಂಸ್ಥಾಪಕರು ಯಾರು?
ಎ) ಕಿರಣ್ ಮಜುಂದಾರ್ ಷಾ
36. ನೈರುತ್ಯ ಮಾನ್ಸೂನ್ ಮಳೆಗಾಲ ________ ಅವಧಿಯಲ್ಲಿ ಬರುತ್ತದೆ.
ಡಿ) ಜೂನ್ ನಿಂದ ಸೆಪ್ಟೆಂಬರ್
37. ಯಾವ ಮಣ್ಣು ಹತ್ತಿ ಬೆಳೆಗೆ ಬಹು ಸೂಕ್ತವಾಗಿರುತ್ತದೆ?
ಬಿ) ಕಪ್ಪು ಮಣ್ಣು
38. ಕರ್ನಾಟಕದ ಯಾವ ಪ್ರದೇಶವನ್ನು 'ಯುನೆಸ್ಕೋ' ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿದೆ?
ಸಿ) ಪಶ್ಚಿಮ ಘಟ್ಟಗಳು
39. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
ಎ) ಕಾಂಜಿರಂಗ ನ್ಯಾಷನಲ್ ಪಾರ್ಕ್ 1) ಪಶ್ಚಿಮ ಬಂಗಾಳ
ಬಿ) ಸುಂದರಬನ 2) ಗುಜರಾತ್
ಸಿ) ಹಜಾರಿಬಾಗ್ ನ್ಯಾಷನಲ್ ಪಾರ್ಕ್ 3) ಅಸ್ಸಾಂ
ಡಿ) ಗಿರ್ ನ್ಯಾಷನಲ್ ಪಾರ್ಕ್ 4) ಬಿಹಾರ
ಉತ್ತರ: ಡಿ) ಎ-3, ಬಿ-1, ಸಿ-4, ಡಿ-2
40. ವಿವಿಧೋದ್ದೇಶ ನದಿಕಣಿವೆ ಯೋಜನೆಯ ಉದ್ದೇಶ
ಡಿ) ಮೇಲ್ಕಂಡ ಎಲ್ಲವೂ
41. ಸುನೀತಾ ವಿಲಿಯಮ್ಸ್ ರವರು ಯಾವ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದಾರೆ?
ಸಿ) ನಾಸಾ
42.UNESCO ವನ್ನು ಬಿಡಿಸಿ ಬರೆಯಿರಿ.
ಎ) ಯುನೈಟೆಡ್ ನೇಷನ್ಸ್ ಎಜುಕೇಷನಲ್ ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಜೇಷನ್
43.ವಿಮಾನಗಳಲ್ಲಿ ಕಂಡುಬರುವ 'ಬ್ಲಾಕ್ ಬಾಕ್ಸ್' ನ ನಿಜವಾದ ಬಣ್ಣ ಯಾವುದು?
ಸಿ) ಕಿತ್ತಳೆ ಬಣ್ಣ
44. ಚೀನಾ ದೇಶದ ಅಧಿಕೃತ ಭಾಷೆ ಯಾವುದು?
ಬಿ) ಮಂಡಾರಿನ್
45. ರಾಫೆಲ್ ನಡಾಲ್ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
ಎ) ಟೆನಿಸ್
46. 9 18 27
8 16 ?
ಸಿ) 24
47. 10 ಜನರು 20 ಮನೆಗಳನ್ನು 30 ದಿನಗಳಲ್ಲಿ ಪೂರೈಸಿದರೆ, 5 ಜನರು 10 ಮನೆಗಳನ್ನು ನಿರ್ಮಿಸಲು ಎಷ್ಟುದಿನ ಬೇಕಾಗುವುದು?
ಡಿ) 30 ದಿನಗಳು
48. X ಎಂಬಾತನು ಗಣಿತದಲ್ಲಿ ಪಡೆದ ಅಂಕಗಳ ಮೂರನೇ ಒಂದು ಭಾಗದಷ್ಟು ಅಂಕಗಳನ್ನು ಹಿಂದಿ ಭಾಷೆಯಲ್ಲಿ ಪಡೆದಿರುತ್ತಾನೆ. ಅವನು ಈ ಎರಡೂ ವಿಷಯಗಳನ್ನು ಸೇರಿಸಿ ಗಳಿಸಿದ ಒಟ್ಟು ಅಂಕಗಳು 120 ಆಗಿದ್ದಲ್ಲಿ ಆತನು ಹಿಂದಿ ಭಾಷೆಯಲ್ಲಿ ಪಡೆದ ಅಂಕಗಳೆಷ್ಟು?
ಡಿ) 30
49. ಬಿಟ್ಟ ಸ್ಥಳ ಭರ್ತಿ ಮಾಡಿ. 3x3=18, 4x4=32, 5x5=50 ಆದರೆ 6x6=?
ಬಿ) 72
50. ಸಾಂಕೇತಿಕ ಭಾಷೆಯಲ್ಲಿ A ಯು C, C ಯು E ಮತ್ತು D ಯು F ಆದರೆ X ಯು
ಸಿ) Z
51. ವಾತಾವರಣದ ತಾಪದ ಬದಲಾವಣೆಗೆ ಅನುಗುಣವಾಗಿ ತಮ್ಮ ದೇಹದ ತಾಪವನ್ನು ಬದಲಾಯಿಸಿಕೊಳ್ಳುವ ಶೀತರಕ್ತ ಪ್ರಾಣಿಗಳ ವರ್ಗವನ್ನು ಏನೆಂದು ಕರೆಯುತ್ತಾರೆ?
ಬಿ) ಪೈಸಿಸ್ (Pisces)
52. ಈ ಕೆಳಗಿನವುಗಳಲ್ಲಿ ಯಾವುದು ಹಾರಬಲ್ಲ ಸಸ್ತನಿಯಾಗಿರುತ್ತದೆ?
ಎ) ಬಾವಲಿ
53. ಬಿದಿರು ಅತ್ಯಂತ ಎತ್ತರದ
ಬಿ) ಹುಲ್ಲು
54. ಎಬೋಲಾ ಸೋಂಕು ಯಾವುದರಿಂದ ಉಂಟಾಗುತ್ತದೆ?
ಸಿ) ವೈರಾಣು
55. ಯಾವುದು ಬಣ್ಣವಿಲ್ಲದ, ವಾಸನೆ ಇಲ್ಲದ ವಿಷಕಾರಿ ಅನಿಲ?
ಡಿ) ಕಾರ್ಬನ್ ಮೊನಾಕ್ಸೈಡ್
56. ವಿಶ್ವ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
ಡಿ) ನ್ಯೂಯಾರ್ಕ್ (ಯು.ಎಸ್.ಎ.)
57. ಭಾರತದ ಉಪರಾಷ್ಟ್ರಪತಿಯವರು ____________ ರವರಿಂದ ಆರಿಸಲ್ಪಡುತ್ತಾರೆ.
ಬಿ) ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು
58. ಯಾರು ರಾಜ್ಯಸಭೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ?
ಸಿ) ಉಪ ರಾಷ್ಟ್ರಪತಿ
59. ಲೋಕಸಭೆಗೆ ಆಯ್ಕೆಯಾಗಲು ಇರುವ ಕನಿಷ್ಠ ವಯೋಮಾನ ________ ವರ್ಷಗಳು.
ಬಿ) 25
60. ಈ ಕೆಳಗಿನ ಯಾವ ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ?
ಸಿ) ನೌಕರಿಯ ಹಕ್ಕು
61. ಇಸ್ರೋ ಸಂಸ್ಥೆಯ ಪ್ರಸಕ್ತ ಮುಖ್ಯಸ್ಥರು ಯಾರು?
ಎ) ಕೆ. ರಾಧಾಕೃಷ್ಣನ್
62. 2014 ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ವಿಭಾಗದ 50 ಮೀ. ಪಿಸ್ತೂಲು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪಡೆದವರು ಯಾರು?
ಡಿ) ಜೀತು ರಾಯ್
63. 'ಭಾರತ ರತ್ನ' ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?
ಸಿ) ಸಿ. ರಾಜಗೋಪಾಲಾಚಾರಿ
64. ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿ ಯಾರು?
ಎ) ಚಂದ್ರಶೇಖರ ಕಂಬಾರ
65. 'ಸಂಸ್ಕಾರ' ಪುಸ್ತಕವನ್ನು ಬರೆದ ಲೇಖಕರು ಯಾರು?
ಸಿ) ಯು.ಆರ್.ಅನಂತಮೂರ್ತಿ
66. ಗಡಿ ಭದ್ರತಾ ಪಡೆ (BSF) ಇದೊಂದು,
ಡಿ) ಯಾವುದೂ ಅಲ್ಲ
67. ಗ್ರಾಮೀಣ ಪ್ರದೇಶಗಳಲ್ಲಿ _________ ಒಂದು ಸ್ವಚ್ಛ, ಮಾಲಿನ್ಯ ರಹಿತ ಮತ್ತು ಅಗ್ಗವಾದ ಶಕ್ತಿಯ ಆಕರವಾಗಿದೆ.
ಎ) ಬಯೋಗ್ಯಾಸ್
68. ಶಬ್ದವನ್ನು ಅಳೆಯುವ ಮಾನಕ್ಕೆ ಏನೆಮದು ಕರೆಯುತ್ತಾರೆ?
ಸಿ) ಡೆಸಿಬಲ್
69. ಈ ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆಯ ಅನಿಲ ಆಗಿರುವುದಿಲ್ಲ.
ಡಿ) ಆಮ್ಲಜನಕ
70. ಅತಿಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು?
ಎ) ಆಮೆ
71. ಭಾರತದ ಸರ್ವೋಚ್ಚ ನ್ಯಾಯಾಲಯದ ಇಂದಿನ ಮುಖ್ಯ ನ್ಯಾಯಮೂರ್ತಿಗಳು ಯಾರು?
ಡಿ) ಹೆಚ್.ಎಲ್.ದತ್ತು
72. ಭಾರತ ಸರ್ಕಾರದ ಇಂದಿನ ಹಣಕಾಸು ಸಚಿವರು ಯಾರು?
ಬಿ) ಅರುಣ್ ಜೇಟ್ಲಿ
73. ಈ ಕೆಳಗೆ ಹೆಸರಿಸಿರುವ ಯಾವ ಕ್ರೀಡಾಪಟುವಿಗೆ 2014ನೇ ಸಾಲಿನಲ್ಲಿ 'ಅರ್ಜುನ ಪ್ರಶಸ್ತಿ' ಬಂದಿರುತ್ತದೆ?
ಸಿ) ಗಿರೀಶ್ ಹೆಚ್.ಎನ್.
74. 'ಲುಫ್ತಾನ್ಸಾ ಏರ್ ಲೈನ್ಸ್' ಯಾವ ದೇಶದ ವಿಮಾನಯಾನ ಸಂಸ್ಥೆ?
ಡಿ) ಜರ್ಮನಿ
75. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದವರು ಯಾರು?
ಎ) ಚಾವುಂಡರಾಯ
76. ಹೊಂದಿಸಿ ಬರೆಯಿರಿ:
ಎ) ಅಲ್ಯುಮಿನಿಯಂ 1) ಬಳ್ಳಾರಿ
ಬಿ) ಕಬ್ಬಿಣ 2) ಹಾಸನ
ಸಿ) ಚಿನ್ನ 3) ಬೆಳಗಾವಿ
ಡಿ) ಕ್ರೋಮಿಯಂ 4) ರಾಯಚೂರು
ಉತ್ತರ : ಡಿ) ಎ-3, ಬಿ-1, ಸಿ-4, ಡಿ-2
77. ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಯಾವ ಸಮಸ್ಯೆ ಉಂಟಾಗುತ್ತದೆ.
ಬಿ) ಸರಳ ಗಾಯಿಟರ್
78. ಪಿಟ್ಯೂಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ ಇರುತ್ತದೆ?
ಎ) ತಲೆ
79. ಜೀವ ವಿಕಾಸದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ ವಿಜ್ಞಾನಿ ಯಾರು?
ಸಿ) ಚಾರ್ಲ್ಸ್ ಡಾರ್ವಿನ್
80. ಭಾರತೀಯ ರಿಸರ್ವ್ ಬ್ಯಾಂಕ್ ನ ಈಗಿನ ಮುಖ್ಯಸ್ಥರು ಯಾರು?
ಬಿ) ಡಾ. ರಘುರಾಮ್ ಜಿ. ರಾಜನ್
81. ಕರ್ನಾಟಕದ ಇಂದಿನ ರಾಜ್ಯಪಾಲರು ಯಾರು?
ಸಿ) ವಜುಭಾಯ್ ವಾಲ
82. ರಮೇಶನು ತನ್ನ ಕಾರಿನಲ್ಲಿ 'ಎ' ನಗರದಿಂದ 'ಬಿ' ನಗರಕ್ಕೆ ಗಂಟೆಗೆ ಸರಾಸರಿ 40 ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ್ದು, 'ಎ' ನಗರದಿಂದ 'ಬಿ' ನಗರಕ್ಕಿರುವ ದೂರ 60 ಕಿ.ಮೀ. ಆಗಿರುತ್ತದೆ. ಹಾಗಾದರೆ ರಮೇಶನು ತನ್ನ ಕಾರಿನಲ್ಲಿ 'ಎ' ನಗರದಿಂದ 'ಬಿ' ನಗರಕ್ಕೆ ತಲುಪಲು ತೆಗೆದುಕೊಂಡ ಸಮಯ
ಬಿ) 90 ನಿಮಿಷಗಳು
83. ಈ ಸರಣಿಯ ಮುಂದಿನ ಸರಣಿಯನ್ನು ಬರೆಯಿರಿ, ACE, BDF, CEG, _____
ಎ) DFH
84. ಪೈಥಾಗೊರಾಸ್ ಪ್ರಮೇಯದ ವ್ಯಾಖ್ಯಾನ,
ಬಿ) ಒಂದು ಲಂಬಕೋನ ತ್ರಿಭುಜದಲ್ಲಿ, ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.
85. ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ ಎಷ್ಟು?
ಸಿ) 30
86. ದ.ರಾ.ಬೇಂದ್ರೆಯವರ ಯಾವ ಕೃತಿಗೆ 'ಜ್ಞಾನಪೀಠ ಪ್ರಶಸ್ತಿ' ಲಭಿಸಿದೆ?
ಬಿ) ನಾಕುತಂತಿ
87. 2014 ನೇ ಸಾಲಿನ ಏಷ್ಯನ್ ಗೇಮ್ಸ್ ಎಲ್ಲಿ ನಡೆಯಿತು?
ಡಿ) ಇಂಚಿಯಾನ್ (ದಕ್ಷಿಣ ಕೊರಿಯಾ)
88. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರವರ ಕಾವ್ಯನಾಮ ಯಾವುದು?
ಬಿ) ಕುವೆಂಪು
89. ಈ ಕೆಳಗೆ ಹೆಸರಿಸಿರುವ ಯಾರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿದೆ?
ಎ) ಡಾ. ರಾಜ್ ಕುಮಾರ್
90. ಈ ಕೆಳಕಂಡ ಯಾವ ದೇಶಗಳಲ್ಲಿ 2015 ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ನಡೆಯಲಿದೆ?
ಸಿ) ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
91. ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?
ಎ) ಎಸ್. ನಿಜಲಿಂಗಪ್ಪ
92. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏನೆಂದು ಮರುನಾಂಕರಣ ಮಾಡಲಾಗಿದೆ?
ಡಿ) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
93. ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
ಎ) ಜಿನೆವಾ (ಸ್ವಿಡ್ಜರ್ ಲ್ಯಾಂಡ್)
94. ರಕ್ತದ ಒತ್ತಡವನ್ನ ಅಳೆಯುವ ಉಪಕರಣ ಯಾವುದು?
ಡಿ) ಸಿಗ್ಮೋಮಾನೋಮೀಟರ್
95. 1843 ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಪತ್ರಿಕೆ ಯಾವುದು?
ಸಿ) ಮಂಗಳೂರು ಸಮಾಚಾರ
96. ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?
ಸಿ) ಇಮ್ಮಡಿ ಪುಲಕೇಶಿ
97. 'ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?
ಡಿ) ವಿಶ್ವನಾಥನ್ ಆನಂದ್
98. ಟಿಪ್ಪು ಸುಲ್ತಾನನು ಬ್ರಿಟಿಷರೊಂದಿಗೆ ಯುದ್ಧದಲ್ಲಿ ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
ಬಿ) 1799
99. 'ಮೈಸೂರು ಸಂಸ್ಥಾನ'ವನ್ನು 'ಕರ್ನಾಟಕ' ಎಂದು ಮರುನಾಮಕರಣ ಮಾಡಲ್ಪಟ್ಟ ವರ್ಷ ಯಾವುದು?
ಎ) 1973
100. 'ಗೋಲ್ಡನ್ ಚಾರಿಯೇಟ್' ಎಂದು ______________ ನ್ನು ಹೆಸರಿಸಲಾಗಿದೆ.
ಸಿ) ರೈಲು
ಸಿ) 30
86. ದ.ರಾ.ಬೇಂದ್ರೆಯವರ ಯಾವ ಕೃತಿಗೆ 'ಜ್ಞಾನಪೀಠ ಪ್ರಶಸ್ತಿ' ಲಭಿಸಿದೆ?
ಬಿ) ನಾಕುತಂತಿ
87. 2014 ನೇ ಸಾಲಿನ ಏಷ್ಯನ್ ಗೇಮ್ಸ್ ಎಲ್ಲಿ ನಡೆಯಿತು?
ಡಿ) ಇಂಚಿಯಾನ್ (ದಕ್ಷಿಣ ಕೊರಿಯಾ)
88. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರವರ ಕಾವ್ಯನಾಮ ಯಾವುದು?
ಬಿ) ಕುವೆಂಪು
89. ಈ ಕೆಳಗೆ ಹೆಸರಿಸಿರುವ ಯಾರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿದೆ?
ಎ) ಡಾ. ರಾಜ್ ಕುಮಾರ್
90. ಈ ಕೆಳಕಂಡ ಯಾವ ದೇಶಗಳಲ್ಲಿ 2015 ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ನಡೆಯಲಿದೆ?
ಸಿ) ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
91. ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?
ಎ) ಎಸ್. ನಿಜಲಿಂಗಪ್ಪ
92. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏನೆಂದು ಮರುನಾಂಕರಣ ಮಾಡಲಾಗಿದೆ?
ಡಿ) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
93. ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
ಎ) ಜಿನೆವಾ (ಸ್ವಿಡ್ಜರ್ ಲ್ಯಾಂಡ್)
94. ರಕ್ತದ ಒತ್ತಡವನ್ನ ಅಳೆಯುವ ಉಪಕರಣ ಯಾವುದು?
ಡಿ) ಸಿಗ್ಮೋಮಾನೋಮೀಟರ್
95. 1843 ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಪತ್ರಿಕೆ ಯಾವುದು?
ಸಿ) ಮಂಗಳೂರು ಸಮಾಚಾರ
96. ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?
ಸಿ) ಇಮ್ಮಡಿ ಪುಲಕೇಶಿ
97. 'ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?
ಡಿ) ವಿಶ್ವನಾಥನ್ ಆನಂದ್
98. ಟಿಪ್ಪು ಸುಲ್ತಾನನು ಬ್ರಿಟಿಷರೊಂದಿಗೆ ಯುದ್ಧದಲ್ಲಿ ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
ಬಿ) 1799
99. 'ಮೈಸೂರು ಸಂಸ್ಥಾನ'ವನ್ನು 'ಕರ್ನಾಟಕ' ಎಂದು ಮರುನಾಮಕರಣ ಮಾಡಲ್ಪಟ್ಟ ವರ್ಷ ಯಾವುದು?
ಎ) 1973
100. 'ಗೋಲ್ಡನ್ ಚಾರಿಯೇಟ್' ಎಂದು ______________ ನ್ನು ಹೆಸರಿಸಲಾಗಿದೆ.
ಸಿ) ರೈಲು
****************************************************************************************************************************************
This Key Answers Prepared By 'Team Sadhana' For Sadhana Think Tank.
Comments
Post a Comment