QUIZ (23/12/14)
1. ಹೊಯ್ಸಳ ವಂಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿ?
1. ಹೊಯ್ಸಳರು ಕೆಲವು ಕಾಲ ಕಲ್ಯಾಣಿ ಚಾಲುಕ್ಯರ ಸಾಮಂತರಾಗಿದ್ದರು.
2. ವೇಸರ or ಹೇಸರ ಎನ್ನುವ ಶಿಲ್ಪಾಕಲಾ ಶೈಲಿಯನ್ನು ಇವರು ಆರಂಭಿಸಿದರು.
3. ಹೊಯ್ಸಳರ ಅರಸ ವಿಷ್ಣುವರ್ಧನ ಮೂಲತಃ ಜೈನ ಧರ್ಮನವನಾಗಿದ್ದನು.
4. ದೆಹಲಿಯ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಖಾಫರ್ ಹೊಯ್ಸಳರ ಸಾಮ್ರಾಜ್ಯದ ಮೇಲೆ ದಾಳಿ ಮಾಡುವ ಮೂಲಕ ಹೊಯ್ಸಳ ವಂಶ ಪತನ ಹೊಂದಿತು.
A. ಆಯ್ಕೆ 1 ಮತ್ತು 2 ಮತ್ತು 3 ಮಾತ್ರ ಸರಿ.
B. ಆಯ್ಕೆ 2 ಮತ್ತು 3 ಮತ್ತು ಸರಿ.
C. ಆಯ್ಕೆ 1 ಮತ್ತು 3 ಮತ್ತು 4 ಮಾತ್ರ ಸರಿ.◆◇
D. ಆಯ್ಕೆ 2 ಮಾತ್ರ ಸರಿ.
2. ಎರಡನೇ ಕವಿಚಕ್ರವರ್ತಿ ಎಂದು ಯಾರು ಪ್ರಸಿದ್ದಿ ಹೊಂದಿದ್ದಾರೆ?
A. ನಾಗಚಂದ್ರ.
B. ರಾಘವಾಂಕ.
C. ಹರಿಹರ.
D. ಜನ್ನ.◆◇
3. ಹೊಯ್ಸಳರು ಸಾಮಾನ್ಯವಾಗಿ ಈ ಕೆಳಗಿನ ಯಾವ ವಿಧಧ ದೇವಾಲಯಗಳನ್ನು ನಿರ್ಮಿಸಿದ್ದಾರೆ?
A. ಏಕಕೂಟ.
B. ತ್ರಿಕೂಟ.
C. ಪಂಚಕೂಟ.◆◇
D. ಯಾವುದು ಅಲ್ಲ.
4. ವಿಷ್ಣುವರ್ಧನನ ಯಾವ ರಾಣಿಯು ನೃತ್ಯವಿಶಾರದೆ ಎಂಬ ಬಿರುದು ಹೊಂದಿದ್ದಳು?
A. ಚಂದ್ರಲಾದೇವಿ.
B. ಉಮಾದೇವಿ.
C. ಶಾಂತಲಾದೇವಿ.◆◇
D. ಮೇಲಿನ ಯಾರು ಅಲ್ಲ.
5. ಈ ಕೆಳಗಿನ ಯಾವ ಹೊಯ್ಸಳ ಅರಸನಿಗೆ 'ಚಾಲುಕ್ಯಮಹಾಮಂಡಲ' ಎಂಬ ಬಿರುದಿತ್ತು?
A. ಎರಡನೆಯ ನೃಪಕಾಮ.
B. ವಿಷ್ಣುವರ್ಧನ.◆◇
C. ಸಳ.
D. ಮೂರನೇ ಬಲ್ಲಾಳ.
6. ಜೈವಿಕ ಸಂವರ್ಧನೆ ಎಂದರೇನು?
A. ಪೋಷಣಾ ಸಂಬಂಧದಲ್ಲಿನ ಒಂದು ಸ್ತರದಿಂದ ಮತ್ತೊಂದು ಸ್ತರಕ್ಕೆ ಆಹಾರ ವರ್ಗಾವಣೆಯಾಗುವುದು.
B. ಆಹಾರ ಸರಪಳಿಯಲ್ಲಿ ಶಕ್ತಿಯು ಒಂದು ಸ್ತರದಿಂದ ಮತ್ತೊಂದು ಸ್ತರಕ್ಕೆ ಹೆಚ್ಚುತ್ತಾ ಹೋಗುವುದು.
C. ವಿಷಕಾರಿ ವಸ್ತುಗಳು ಒಂದು ಪೋಷಣಾ ಸ್ತರದಿಂದ ಇನ್ನೊಂದು ಪೋಷಣಾ ಸ್ತರಕ್ಕೆ ವರ್ಗಾವಣೆಗೊಳ್ಳುತ್ತಾ ವಿಷಕಾರಿ ವಸ್ತುಗಳ ಸಾರತೆ ಮೇಲಿನ ಸ್ತರಗಳಿಗೆ ಹೆಚ್ಚುತ್ತಾ ಹೋಗುವುದು.◆◇
D. ಮೇಲಿನ ಎಲ್ಲವು.
7. ಈ ಕೆಳಗಿನ ಯಾವ ಜೀವಿಯು ಚತುರ್ಥಕ ಭಕ್ಷಕವಾಗಿದೆ?
A. ಸಿಂಹ.
B. ಹಾವು.
C. ಹದ್ದು.◆◇
D. ಮೀನು.
8. ಮೂಲವಸ್ತುಗಳಿಗೆ (ಧಾತುಗಳಿಗೆ) ಸಂಬಂಧಿಸಿದಂತೆ ಯಾವ ಹೇಳಿಕೆ/ಗಳು ಸರಿಯಾಗಿವೆ?
1. ಪರಿಚಯವಿರುವ ಒಟ್ಟು ಧಾತುಗಳ ಸಂಖ್ಯೆ 118.
2. ಅವುಗಳಲ್ಲಿ 90 ಧಾತುಗಳು ನಮಗೆ ನಿಸರ್ಗದಿಂದ ಲಭ್ಯವಾಗಿವೆ.
3. ಟೆಕ್ನೆಸಿಯಂ ಇದೊಂದು ನೈಸರ್ಗಿಕ ಧಾತು. ಆದರೂ ಇದನ್ನು ಕೃತಕವಾಗಿ ತಯ್ಯಾರಿಸಬಹುದು.
4. ಮೇಲಿನ ಎಲ್ಲವೂ ಸರಿಯಾಗಿವೆ.
A. ಆಯ್ಕೆ 1 ಮತ್ತು 2 ಸರಿ.
B. ಆಯ್ಕೆ 2 ಮತ್ತು 3 ಸರಿ.
C. ಆಯ್ಕೆ 1 ಸರಿ.
D. ಆಯ್ಕೆ 4 ಸರಿ.◆◇
9. ಜೀವಿಗಳ ಕುರಿತಂತೆ 'ಉಳಿವಿಗಾಗಿ ಹೋರಾಟ' (struggle for existence) ಇದು ಯಾರ ಪ್ರಸಿದ್ದ ಹೇಳಿಕೆಯಾಗಿದೆ.
A. ಜಗದೀಶ ಚಂದ್ರ ಬೋಸ್.
B. ವಿಕ್ಟರ್ ಹ್ಯೂಗೋ ಡಿವ್ರಿಸ್.
C. ಚಾರ್ಲ್ಸ ಡಾರ್ವಿನ್.◆◇
D. ಬ್ಯಾಷಿಸ್ಟ್ ಲಾಮಾರ್ಕ್.
(ವಿಶೇಷ ಪ್ರಶ್ನೆ)
10. ಶಕ ಪಂಚಾಂಗದ ಪ್ರಕಾರ ಭಾರತದ ಪ್ರಸ್ತುತ ವರ್ಷ (ಇಸ್ವಿ) ಯಾವುದು?
ಸರಿ ಉತ್ತರ :- 1936
<>¤<>¤<>¤<>¤<><>¤<>¤<>¤<>¤<><>¤<>¤<>¤<>¤<><>¤<>¤<>¤<>¤<>
==>◆◇ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
https://www.facebook.com/groups/freegksms/ ಇದನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರೂ ನಮ್ಮ ಗುಂಪಿಗೆ ಬರಲು ಸುಲಭವಾಗುತ್ತದೆ..
:-ಸಂಗ್ರಹ :ತೀರ್ಥಪ್ಪ ಶ್ರೀಚೆಂದ
Comments
Post a Comment