ವಿಶ್ವದಾಖಲೆ:31 ಎಸೆತಗಳಲ್ಲಿ ಡಿ’ವಿಲಿಯರ್ಸ್ ಸೆಂಚುರಿ..!
- 44 ಎಸೆತಗಳಲ್ಲಿ 149 ರನ್ ಗಳಿಸಿದ ಡಿ'ವಿಲಿಯರ್ಸ್
- ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆ
ಜೊಹಾನ್ಸ್‍ಬರ್ಗ್: ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ವಿಶ್ವದಾಖಲೆ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವಿಂಡೀಸ್ 2ನೇ ಪಂದ್ಯ ಜೊಹಾನ್ಸ್‍ಬರ್ಗ್‍ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಡಿವಿಲಿಯರ್ಸ್ ಈ ದಾಖಲೆ ಮಾಡಿದ್ದಾರೆ.
ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಡಿವಿಲಿಯರ್ಸ್ ಮುಂದಿನ 17 ಎಸೆತಗಳಲ್ಲಿ ಶತಕ ಪೂರೈಸಿದರು. 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 16 ಸಿಕ್ಸರ್‍ಗಳ ಮೂಲಕ ಡಿವಿಲಿಯರ್ಸ್ 149 ರನ್ ಗಳಿಸಿ ಔಟಾದರು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ವಿಂಡೀಸ್ ತನ್ನ ನಿರ್ಧಾರಕ್ಕೆ ಭಾರಿ ಬೆಲೆ ತೆರಬೇಕಾಯಿತು. ಮೊದಲ 10 ಓವರ್‍ಗಳಲ್ಲಿ ಕೇವಲ 51 ರನ್ ಮಾತ್ರ ಗಳಿಸಲು ಸಾಧ್ಯವಾಗಿತ್ತು. ಆದರೆ ಬಳಿಕ ಆಕ್ರಮಣಕಾರಿ ಆಟಕ್ಕಿಳಿದ ಆಫ್ರಿಕಾ ದಾಂಡಿಗರು ಬೌಲರ್‍ಗಳನ್ನು ಮನಬಂದಂತೆ ಚಚ್ಚಿದರು.
ಆರಂಭಿಕ ಆಟಗಾರನಾಗಿ ಬಂದ ರೋಸೋ 115 ಎಸೆತಗಳಲ್ಲಿ 128 ರನ್ ಗಳಿಸಿ ಔಟಾದರು. ಡಿವಿಲಿಯರ್ಸ್ 149, ಹಶೀಮ್ ಆಮ್ಲ 142 ಎಸೆತಗಳಲ್ಲಿ 153 ಸಿಡಿಸುವ ಮೂಲಕ ಬ್ಯಾಟಿಂಗ್ ಮಾಡಿದ ಮೂವರು ಆಟಗಾರರೂ ಶತಕ ಸಿಡಿಸಿದ ದಾಖಲೆಗೆ ಪಾತ್ರರಾದರು.
ನಿಗದಿತ 50 ಓವರ್ ಮುಗಿದಾಗ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 439 ರನ್ ಗಳಿಸಿತ್ತು.
Comments
Post a Comment