ಮೇ1ರಿಂದ ಹೊಸ ರೇಷನ್ ಕಾರ್ಡ್ಗೆ ಅರ್ಜಿ
ಬೆಂಗಳೂರು: ರಾಜ್ಯಾದ್ಯಂತ ಹೊಸ ಪಡಿತರ ಚೀಟಿಗೆ ಮೇ 1 ರಿಂದ ಸರ್ಕಾರ ಅರ್ಜಿ ಆಹ್ವಾನಿಸಲಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಮೇಲ್ಮನೆಗೆ ಈ ಕುರಿತು ಮಾಹಿತಿ ನೀಡಿದರು. ರಾಜ್ಯದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿಗಾಗಿ 39,23,607 ಅರ್ಜಿ ಸ್ವೀಕರಿಸಲಾಗಿದೆ. ಇದರಲ್ಲಿ 18,87,870 ಪಡಿತರ ಚೀಟಿ ವಿತರಿಸಲಾಗಿದೆ. ಬಾಕಿ ಇರುವ 5,05,340 ಅರ್ಜಿದಾರರು ಮಾತ್ರ ತಮ್ಮ ಕುಟುಂಬದ ಅರ್ಹ ಸದಸ್ಯರ ಎಪಿಕ್ ಸಲ್ಲಿಸಿದ್ದು ಈ ಅರ್ಜಿಗಳನ್ನು ಅದ್ಯತೆ ಮೇಲೆ ವಿತರಿಸಲಾಗುವುದು ಎಂದರು.
ಅಧಿವೇಶನದ ಪ್ರಮುಖಾಂಶಗಳು
* ಸರ್ಕಾರಿ ಆಸ್ಪತೆಗಳಲ್ಲಿ ಪರಿಶಿಷ್ಟ ರೋಗಿಗಳಿಗೆ
ಚಿಕಿತ್ಸಾ ವಿವರ ಫಲಕ ಅಳವಡಿಕೆ
* ದರಪಟ್ಟಿ ಪ್ರಕಟಿಸಲು ಖಾಸಗಿ ಆಸ್ಪತ್ರೆಗಳಿಗೆ
3 ತಿಂಗಳ ಗಡುವು: ಸಚಿವ ಖಾದರ್
* ಕುಣಬಿ ಜನಾಂಗ ಎಸ್ಟಿ ಪಟ್ಟಿ ಸೇರ್ಪಡೆಗೆ
ವರದಿ ಬಂದ ನಂತರ ಕ್ರಮ: ಸಚಿವ ಆಂಜನೇಯ
* ಕೊಳವೆ ಬಾವಿಗಳಿಗೆ 6 ತಿಂಗಳಲ್ಲಿ ವಿದ್ಯುತ್ ಸಂಪರ್ಕ
* ರಾಜ್ಯದ ಎಲ್ಲ ನಗರಗಳಲ್ಲೂ ನಗರಸಾರಿಗೆ
* ಹಳೆ ಭೂ ಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ
* ಹನ್ನೊಂದು ಹೊಸ ಉಪ ವಿಭಾಗಾಧಿಕಾರಿ ಕಚೇರಿಗಳ ಆರಂಭಕ್ಕೆ ನಿರ್ಧಾರ
Comments
Post a Comment