' ಶಿಕ್ಷಕರ ವರ್ಗಾವಣೆ ಶೇ.8ಕ್ಕೆ ಹೆಚ್ಚಳ
ಉದಯವಾಣಿ, Mar 20, 2015, 3:40 AM
ಬೆಂಗಳೂರು: ಶಿಕ್ಷಕ ಸಮುದಾಯದ ಬಹುದಿನ ಗಳ ಬೇಡಿಕೆಗೆ ಸರ್ಕಾರ ಕೊನೆಗೂ ಮನ್ನಣೆ ನೀಡಿದ್ದು, ಶಿಕ್ಷಕರ ವರ್ಗಾವಣೆ ಪ್ರಮಾಣ ಶೇ.5 ರಿಂದ 8ಕ್ಕೆ ಹೆಚ್ಚಿಸಿದೆ.
ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ. ಪತಿ -ಪತ್ನಿ ಪ್ರಕರಣ ಹಾಗೂ ಪರಸ್ಪರ ಒಪ್ಪಿಗೆ ಮೇರೆಗೆ ವರ್ಗಾವಣೆ ಕೋರುವ ಪ್ರಕರಣಗಳಿಗೆ ಆದ್ಯತೆ ನೀಡಲು ಸಂಪುಟ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರದಿಂದ ವರ್ಗಾವಣೆ ಕೋರಿ ಈಗಾಗಲೇ ಸಲ್ಲಿಕೆಯಾಗಿರುವ ಹದಿನೇಳು ಸಾವಿರ ಅರ್ಜಿಗಳಿಗೆ ಮೋಕ್ಷ ಸಿಗುವ ಸಾಧ್ಯತೆಯಿದೆ.
ಕನ್ನಡ ಕಡ್ಡಾಯಕ್ಕೆ ಮಸೂದೆಗೆ ಸಮ್ಮತಿ
ಒಂದರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದು ಕಡ್ಡಾಯ ಗೊಳಿಸುವ ಸಂಬಂಧ ತಿದ್ದುಪಡಿ ವಿಧೇಯಕ ವನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
Comments
Post a Comment