Adhiti Arts : Crowned MISS INDIA 2015
ಮುಂಬಯಿ: ಪ್ರಸಕ್ತ ಸಾಲಿನ ಮಿಸ್ ಇಂಡಿಯಾ ಸೌಂದರ‌್ಯ ಸ್ಪರ್ಧೆಯಲ್ಲಿ ದಿಲ್ಲಿಯ ಗುರ್‌ಗಾಂವ್ ಮೂಲದ ಅದಿತಿ ಆರ‌್ಯ ವಿಜೇತರಾಗುವ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮುಂಬಯಿಯಲ್ಲಿ ನಡೆದ 52ನೇ ಮಿಸ್ ಇಂಡಿಯಾ ಸೌಂದರ‌್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅದಿತಿ ಅವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಅದಿತಿ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಫ್ರೀನ್ ರಾಚೆಲ್ ವಾಜ್ ಮತ್ತು ಋತಿಕಾ ಸಿಂಗ್ ಅವರು ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡರು.
ಈ ಮೂವರೂ ಸೇರಿದಂತೆ ತಾನ್ಯಾ ಮತ್ತು ದೀಕ್ಷಾ ಕುಶಾಲ್ ಅವರು ಅಂತಿಮ ಸುತ್ತಿನಲ್ಲಿದ್ದರು. ತಾನ್ಯಾ ಅವರು ಗೆಲುವು ಸಾಧಿಸಬಹುದೆಂದು ನಿರೀಕ್ಷಿಸಲಾಗಿತ್ತು. ಈ ವರ್ಷ 21 ಸ್ಪರ್ಧೆಗಳು ಕಣದಲ್ಲಿದ್ದರು. ಜಡ್ಜ್‌ಗಳು ನೀಡಿದ ಅಂಕಗಳ ಆಧಾರದ ಮೇಲೆ ಐವರನ್ನು ಮಾತ್ರ ಫೈನಲ್ಸ್‌ಗೆ ಆಯ್ಕೆ ಮಾಡಲಾಗಿತ್ತು.
ನಟಿ ಕರೀನಾಕಪೂರ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನಟ ಶಾಹಿದ್ ಕಪೂರ್ ಅವರು ಪಾಲ್ಗೊಂಡಿದ್ದರು.
ವಾಣಿಜ್ಯ ನಗರಿಯ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಸೌಂದರ್ಯ ಸ್ಪರ್ಧೆ ಸಮಾರಂಭದಲ್ಲಿ ಖ್ಯಾತ ನಟರಾದ ಜಾನ್ ಅಬ್ರಹಾಂ, ಅನಿಲ್ ಕಪೂರ್, ಮನೀಶಾ ಕೊಯಿರಾಲಾ, ಅಬು ಜಾನಿ, ಸಂದೀಪ್ ಖೋಸ್ಲಾ ಹಾಜರಿದ್ದರು. ನಟಿಯರಾದ ಶಿಲ್ಪಾ ಶೆಟ್ಟಿ ಹಾಗೂ ಸೋನಾಲಿ ಬೇಂದ್ರೆ ತೀರ್ಪುಗಾರರಾಗಿದ್ದರು.
Comments
Post a Comment