Australia WC2015 CHAMPION ( Its 5th time)
5ನೇ ಬಾರಿ ಆಸೀಸ್ ವಿಶ್ವಚಾಂಪಿಯನ್
ಮೆಲ್ಬೋರ್ನ್: ಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ವಿರುದ್ಧ ಸುಲಭ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ 5 ನೇ ಬಾರಿಗೆ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ.
ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ಆಸ್ಟ್ರೇಲಿಯಾದ ಸವಾಲನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟ್ ಮಾಡಿ ಕೇವಲ 183 ರನ್ ಗಳಿಸಿದ್ದ ನ್ಯೂಜಿಲೆಂಡ್ ಆರಂಭದಲ್ಲೇ ಹಿನ್ನಡೆ ಅನುಭವಿಸಿತ್ತು. 183 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಆಸೀಸ್ 33.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಗುರಿ ತಲುಪಿತು.
ಆಸ್ಟ್ರೇಲಿಯಾ ಪರ ನಾಯಕ ಮೈಕಲ್ ಕ್ಲಾರ್ಕ್ (74), ಡೇವಿಡ್ ವಾರ್ನರ್ (41), ಸ್ಟೀವನ್ ಸ್ಮಿತ್ (56*), ರನ್ ಗಳಿಸಿ ಆಸ್ಟ್ರೇಲಿಯಾಗೆ ಸುಲಭ ಗೆಲುವು ತಂದಿತ್ತರು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 46 ಕ್ಕೆ 2, ಟ್ರೆಂಡ್ ಬೋಲ್ಟ್ 40 ಕ್ಕೆ 1 ವಿಕೆಟ್ ಪಡೆದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 45 ಓವರ್ಗಳಲ್ಲಿ 183 ರನ್ ಗಳಿಗೆ ಆಲೌಟ್ ಆಯಿತು. ಪ್ರಭಾವಿ ಬೌಲಿಂಗ್ ದಾಳಿ ನಡೆಸಿದ ಆಸ್ಟ್ರೇಲಿಯ ಬೌಲರ್ಗಳು ನ್ಯೂಜಿಲೆಂಡ್ ಪ್ರಮುಖ ಬ್ಯಾಟ್ಸ್ಮನ್ಗಳಿಗೆ ರನ್ ಗಳಿಸಲು ಅವಕಾಶ ನೀಡಲಿಲ್ಲ. ನ್ಯೂಜಿಲೆಂಡ್ ಪರ ಗ್ರಾಂಟ್ ಎಲೆಯೋಟ್ (83) ಮತ್ತು ರಾಸ್ ಟೇಲರ್ (40) ಮಾತ್ರ ಆಸ್ಟ್ರೇಲಿಯಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ರನ್ ಗಳಿಸಿದರು. ಉಳಿದಂತೆ ಗುಪ್ಟಿಲ್, ಮೆಕಲಮ್ ಕೋರಿ ಆಂಡರ್ಸನ್, ಕೇನ್ ವಿಲಿಯಮ್ಸ್ ಸಂಪೂರ್ಣ ವೈಫಲ್ಯ ಅನುಭವಿಸಿದರು.
ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಮಿಷಲ್ ಜಾನ್ಸನ್ 30 ಕ್ಕೆ 3, ಜೇಮ್ಸ್ ಫಾಲ್ಕನರ್ 36 ಕ್ಕೆ 3, ಮಿಷೆಲ್ ಸ್ಟಾರ್ಕ್ 20 ಕ್ಕೆ 2, ಮ್ಯಾಕ್ಸವೆಲ್ 37 ಕ್ಕೆ 1 ವಿಕೆಟ್ ಪಡೆದರು.
ಸಂಕ್ಷಪ್ತ ಸ್ಕೋರ್: ನ್ಯೂಜಿಲೆಂಡ್ 45 ಓವರ್ 183 ಆಲೌಟ್ (ಗ್ರಾಂಟ್ ಎಲೆಯೋಟ್ 83, ರಾಸ್ ಟೇಲರ್ 40, ಮಿಷಲ್ ಜಾನ್ಸನ್ 30 ಕ್ಕೆ 3, ಜೇಮ್್ಸ ಫಾಲ್ಕನರ್ 36 ಕ್ಕೆ 3, ಮಿಷೆಲ್ ಸ್ಟಾರ್ಕ್ 20 ಕ್ಕೆ 2)
ಆಸ್ಟ್ರೇಲಿಯಾ 33.1 ಓವರ್ 3 ವಿಕೆಟ್ ನಷ್ಟಕ್ಕೆ 186 (ಮೈಕಲ್ ಕ್ಲಾರ್ಕ್ 74, ಸ್ಟೀವನ್ ಸ್ಮಿತ್ 56*, ಡೇವಿಡ್ ವಾರ್ನರ್ 41, ಮ್ಯಾಟ್ ಹೆನ್ರಿ 46 ಕ್ಕೆ 2, ಟ್ರೆಂಡ್ ಬೋಲ್ಟ್ 40 ಕ್ಕೆ 1)
Comments
Post a Comment