ಸೈನಾಗೆ ಒಲಿಯಿತು ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ
ಸೈನಾಗೆ ಒಲಿಯಿತು ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ (Sender PSG)
ನವದೆಹಲಿ: ವಿಶ್ವದ ನಂಬರ್ ಒನ್ ಆಟಗಾರ್ತಿ ಸೈನಾ ನೆಹ್ವಾಲ್ ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದಿದ್ದಾರೆ. ಭಾನುವಾರ ಸಿರಿ ಫೋರ್ಟ್ ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಫೈನಲ್‍ನಲ್ಲಿ 8ನೇ ಶ್ರೇಯಾಂಕದಲ್ಲಿರುವ ಥೈಲೆಂಡ್‍ನ ರಾಚನೋಕ್ ಇನ್ತಾನನ್ ಅವರನ್ನು 21-16, 21-14 ನೇರ ಸೆಟ್‍ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು.
ಒಟ್ಟು 14 ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗೆದ್ದಿದ್ದ ಸೈನಾ ನೆಹ್ವಾಲ್, 15ನೇ ಪ್ರಶಸ್ತಿಯಾಗಿ ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಒಲಿದಿದೆ.
ಶನಿವಾರ ಇಂಡಿಯನ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್‌ನಲ್ಲಿ ಮೊದಲ ಸೆಮಿಫೈನಲ್‌ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ಅವರನ್ನು ಥಾಯ್ಲೆಂಡ್‌ನ ರಾಚೋನೊಕ್ ಇನ್ತಾನಾನ್ ಸೋಲಿಸಿದರು. ಇದರೊಂದಿಗೆ ನಂ. 1 ಸ್ಥಾನಕ್ಕೆ ಏರುವ ಮರಿನ್ ಅವರ ಕನಸು ಭಗ್ನಗೊಂಡಿತು. ಹೀಗಾಗಿ ವಿಶ್ವ ಬ್ಯಾಡ್ಮಿಂಟನ್ ನಲ್ಲಿ 74381 ಶ್ರೇಯಾಂಕದಲ್ಲಿದ್ದ 25 ವರ್ಷದ ಸೈನಾ ಮೊದಲ ಸ್ಥಾನಕ್ಕೆ ಏರಿದರು.
ಮುಂದಿನ ಗುರುವಾರ ಸೈನಾ ನಂ.1 ಸ್ಥಾನಕ್ಕೇರಿದ ಅಧಿಕೃತ ಘೋಷಣೆ ನಡೆಯಲಿದೆ. ಈ ಹಿಂದೆ ಪುರುಷರ ವಿಭಾಗದಲ್ಲಿ ಪ್ರಕಾಶ್ ಪಡುಕೋಣೆನಂ.1 ಪಟ್ಟ ಪಡೆದುಕೊಂಡಿದ್ದರು.
Comments
Post a Comment