FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. 31/03/15

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. 31/03/15

01). "ಮೇಕೆದಾಟು" ಎಂತಹ ಯೋಜನೆಯಾಗಿದೆ?

a) ಕೊಳವೆ ಬಾವಿ ಯೋಜನೆ
b) ಮೇಕೆ ಸಾಕಾಣಿಕೆ ಯೋಜನೆ
c) ಕುರಿ ಅಭಿವೃದ್ಧಿ ಯೋಜನೆ
d) ಕುಡಿಯುವ ನೀರಿನ ಯೋಜನೆ■

02). ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಯಾವ ಆಟಗಾರ್ತಿ ಇಂಡಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾನುವಾರ ಚಾಂಪಿಯನ್ ಆಗಿ ಹೊರ ಹೊಮ್ಮಿದರು?

a) ಸೈನಾ ನೆಹ್ವಾಲ್■‌
b) ಸಾನಿಯಾ ಮಿರ್ಜಾ
c) ದಿಪಿಕಾ ಪಲಿಕಲ್ಲ
d) ಮರಿಯಾ ಶರಪೋವಾ

03). 2015 ರ ಮಿಸ್ ಇಂಡಿಯಾ ಆಗಿ ಯಾರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು?

a) ವರ್ತಿಕಾ ಸಿಂಗ್
b) ಅದಿತಿ ಆರ್ಯ●
c) ಆಫ್ರೀನ್ ರಾಚೆಲ್ ವಾಚ್
d) ಯಾರೂ ಅಲ್ಲ

04). 2015 ರ ಮಿಸ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದ ಮಂಗಳೂರಿನ ಯುವತಿ ಯಾರು?

a) ಆಫ್ರೀನ್ ರಾಚೆಲ್ ವಾಚ್●
b) ವರ್ತಿಕಾ ಸಿಂಗ್
c) ಪ್ರೀತಿ ಮೆಹತಾ
d) ಯಾರೂ ಅಲ್ಲ

05).  ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ ಪಕ್ಷ ಯಾವುದು?

a) ಬಿ.ಜೆ.ಪಿ●
b) ಕಾಂಗ್ರೇಸ್
c) ಪಿ.ಡಿ.ಪಿ
d) ಚೀನಾದ ಕಮ್ಯೂನಿಸ್ಟ್‌ ಪಕ್ಷ

06). ಪ್ರಪ್ರಥಮ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಪಡೆದವರು ಯಾರು ?

a) ದೇವಿಕಾರಾಣಿ ರೋರಿಚ್●
b) ಅಕ್ಕಿನೇನಿ ನಾಗೇಶ್ವರರಾವ್
c) ರಾಜ್  ಕಪೂರ
d) ಲತಾ ಮಂಗೇಶ್ಕರ

07). ಸೂರ್ಯನಿಂದ ಭೂಮಿಗೆ ಶಾಖ ಹೇಗೆ ಹರಡುತ್ತೆದೆ ?

a) ಸಂವಹನದಿಂದ
b) ಸಂವಹನ -ವಿಕಿರಣಗಳಿಂದ
c) ಪ್ರಚಲನದಿಂದ
d) ವಿಕಿರಣಗಳಿಂದ ಮಾತ್ರ●

08). ಸೋಪ್ ತಯಾರಿಕೆಯಲ್ಲಿ ಪ್ರಮುಖವಾಗಿ ಉಪಯೋಗಿಸಲ್ಪಡುವ ಕಚ್ಚಾ ವಸ್ತು...

a) ಸೋಪಿನ ಕಲ್ಲು
b) ಎಣ್ಣೆ ●
c) ಲಿಂಬೆರಸ
d) ಸುಗಂಧದ್ರವ

09). ವರದಕ್ಷಿಣೆ ನಿಷೇಧ ಕಾಯಿದೆಯನ್ನು ಎಂದು ಜಾರಿಗೆ ತರಲಾಯಿತು?

a) 1993 ರಲ್ಲಿ
b) 1961 ರಲ್ಲಿ●
c) 1973 ರಲ್ಲಿ
d) 1994 ರಲ್ಲಿ

10). ಚಿತ್ರದುರ್ಗದ ಮುರುಘಾಮಠದಿಂದ ನೀಡುವ ೨೦೧೪ ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಯಾರಿಗೆ ಕೊಡಮಾಡಲಾಯಿತು?

a) ಎನ್ ಆರ್ ನಾರಾಯಣ ಮೂರ್ತಿ
b) ಸುಧಾ ಮೂರ್ತಿ
c) ಜಗದೀಶ್ ಶೆಟ್ಟರ್
d) ಮಲಾಲಾ●

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು