ISRO ದಿಂದ ದೇಶಿ GPS ಗೆ ಅನುಕೂಲಿಸುವ IRNSS -1 D ಯಶಸ್ವಿ ಉಡಾವಣೆ:

ಚೆನ್ನೈ, ಮಾ.29: ಮಂಗಳಯಾನದ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ಮತ್ತೊಂದು ಮೈಲಿಗಲ್ಲು ದಾಟಿದೆ. ಅಮೆರಿಕದ ಜಿಪಿಎಸ್ ಗೆ ಸೆಡ್ಡು ಹೊಡೆಯಬಲ್ಲ ದೇಶಿ ತಂತ್ರಜ್ಞಾನದ ದಿಕ್ಸೂಚಿ ಉಪಗ್ರಹವನ್ನು ಸುರಕ್ಷಿತವಾಗಿ ಕಕ್ಷೆಗೆ ಸೇರಿಸಲಾಗಿದೆ. ಅಮೆರಿಕದ ಜಿಪಿಎಸ್ ಜೊತೆಗೆ ಭಾರತದ ಐಆರ್ ಎನ್ ಎಸ್ಎಸ್ 1-ಡಿ ಹೋಲಿಕೆ ಮಾಡಿ ಪ್ರಶ್ನೆ ಕೇಳಿದಾಗ ಇಸ್ರೋ ಅಧ್ಯಕ್ಷ ಕನ್ನಡಿಗ ಕೆಎಸ್ ಕಿರಣ್ ಕುಮಾರ್ ಅವರು ಉತ್ತರಿಸಿದ್ದು ಹೀಗೆ: The globe comes later, the country comes first. [ಜಿಪಿಎಸ್ ತಂತ್ರಜ್ಞಾನದಲ್ಲಿ ಭಾರತ ಆಗಲಿದೆ ಸಾರ್ವಭೌಮ] ಐಆರ್ ಎನ್ ಎಸ್ಎಸ್ 1-ಡಿ ಯನ್ನು ಪಿಎಸ್ ಎಲ್ ವಿ ಸಿ -27 ಮೂಲಕ ಕಕ್ಷೆಗೆ ತಲುಪಿಸುವ ಮೂಲಕ ದೇಶಿ ತಂತ್ರಜ್ಞರು ಹೆಮ್ಮೆಯಿಂದ ಸಂಭ್ರಮಪಟ್ಟಿದ್ದಾರೆ. ಅದರೆ, ಈ ದಿಕ್ಸೂಚಿ ಯೋಜನೆ ಪೂರ್ಣಗೊಳ್ಳಲು ಈ ಸರಣಿಯ ಇನ್ನೂ ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಬೇಕಿದೆ. ಸುಮಾರು 1,420 ಕೋಟಿ ರು ವೆಚ್ಚದ ಐಆರ್ ಎನ್ ಎಸ್ಎಸ್ ಯೋಜನೆ ಈ ವರ್ಷಾಂತ್ಯಕ್ಕೆ ಪೂರ್ಣಗೊಳಿಸಲಾಗುವುದು. ಶನಿವಾರ(ಮಾ.28, 2015) ಉಡಾವಣೆಗೂ ಮುನ್ನ ಜುಲೈ1, 2013, ಏ.4 2014 ಹಾಗೂ ಅ.16, 2014ರಂದು ಯಶಸ್ವಿಯಾಗಿ ಉಪಗ್ರಹಗಳು ಕಕ್ಷೆ ಸೇರಿವೆ. ವೆಹಿಕಲ್ ಟ್ರಾಫಿಕಿಂಗ್, ನೌಕೆಗಳ ಪಥ ನಿರ್ವಹಣೆ, ಪ್ರಯಾಣಿಕರಿಗೆ ಮಾರ್ಗ ಸೂಚಿ, ಚಾಲಕರಿಗೆ ದಿಕ್ಸೂಚಿ, ಗಡಿ ಮತ್ತು ಸಾಗರ ದಿಕ್ಸೂಚಿ ಹೀಗೆ ಅಮೆರಿಕದ ಜಿಪಿಎಸ್ ತಂತ್ರಜ್ಞಾನ ನೀಡುವ ಎಲ್ಲಾ ಸೌಲಭ್ಯಗಳನ್ನು ನಮ್ಮ ಉಪಗ್ರಹದ ಮೂಲಕ ಪಡೆದುಕೊಳ್ಳಬಹುದು. ಈ ಮೂಲಕ ಅಮೆರಿಕದ ತಂತ್ರಜ್ಞಾನದ ಮೇಲೆ ಅವಲಂಬನೆ ತಪ್ಪಿಸಬಹುದು ಎಂದು ಇಸ್ರೋ ಪ್ರಕಟಿಸಿದೆ. ಇಸ್ರೋ ವಿಜ್ಞಾನಿಗಳ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಶುಭ ಹಾರೈಸಿದ್ದಾರೆ. Story first published: Sunday, March 29, 2015, 08:18 [IST] English Summary India on Saturday demonstrated its ability to establish an independent regional navigation satellite system, as ISRO's PSLV C-27 successfully launched Indian Regional Navigation Satellite System (IRNSS) 1-D satellite into the intended orbit. Read more about: isro 

Read more at: http://kannada.oneindia.com/news/chennai/isro-navigation-satellite-irnss-1-d-in-orbit-092737.html

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು