ವಿಶ್ವದಲ್ಲಿ ಹೆಚ್ಚು ಖುಷಿ ಪಡೋರಲ್ಲಿ ಸ್ವಿಸ್ ನಂ-1ಸ್ಥಾನ, ಭಾರತಕ್ಕೆ ? -->117
ಉದಯವಾಣಿ, Apr 24, 2015, 1:10 PM IST
ನ್ಯೂಯಾರ್ಕ್: ವಿಶ್ವದಲ್ಲಿ ಸ್ವಿಜರ್ ಲ್ಯಾಂಡ್ ಜನರು ಅತ್ಯಂತ ಖುಷಿಯಲ್ಲಿರುವವರು ಎಂದು ಗುರುವಾರ ಬಿಡುಗಡೆಗೊಂಡಿರುವ ಸಂಶೋಧನಾ ವರದಿ ತಿಳಿಸಿದೆ.
ವಾರ್ಷಿಕ ವಿಶ್ವ ಸಂತೋಷದ ವರದಿ ಪ್ರಕಾರ, 158 ದೇಶಗಳ ಪೈಕಿ ಐಸ್ ಲ್ಯಾಂಡ್, ಡೆನ್ಮಾರ್ಕ್, ನಾರ್ವೆ ಮತ್ತು ಕೆನಡಾ ಕ್ರಮವಾಗಿ ಸ್ಥಾನ ಪಡೆದಿವೆ ಎಂದು ವರದಿ ವಿವರಿಸಿದೆ. ವಿಶೇಷ ಏನಪ್ಪಾ ಅಂದರೆ ಇದರಲ್ಲಿ ಭಾರತೀಯರಿಗೆ 117ನೇ ಸ್ಥಾನ ದೊರಕಿದೆ.
ಸಸ್ಟೈನೇಬಲ್ ಡೆವಲಪ್ ಮೆಂಟ್ ಸೊಲೂಷನ್ಸ್ ನೆಟ್ ವರ್ಕ್ ನಡೆಸಿದ ಸಂಶೋಧನೆಯ ವರದಿ ಪ್ರಕಾರ, ವಿಶ್ವದಲ್ಲಿ ಹೆಚ್ಚು ಸಂತೋಷ ಹೊಂದಿರದ ಜನರು ಯಾವ ದೇಶದವರೆಂದರೆ, ಅದು ಟೋಗೊ, ಬುರುಂಡಿ, ಸಿರಿಯಾ, ಬೇನಿನ್ ಹಾಗೂ ರುವಾಂಡವಂತೆ!
ಸಮಾಜದಲ್ಲಿ ಹೇಗೆ ಉತ್ತಮವಾಗಿ ಸಾಧನೆ ಮಾಡಬಹುದು ಎಂಬುದಕ್ಕೆ ಈ ವರದಿ ಪುರಾವೆ ಒದಗಿಸಿದೆ. ಕೇವಲ ಹಣದಿಂದ ಮಾತ್ರ ಸಾಧ್ಯವಿಲ್ಲ. ಆದರೆ ನಮ್ಮ ಪ್ರಾಮಾಣಿಕತೆ, ನಂಬಿಕೆ, ಪಾರದರ್ಶಕತೆ ಹಾಗೂ ಉತ್ತಮ ಆರೋಗ್ಯವೂ ಸೇರಿಕೊಂಡಾಗ ಸಾಧ್ಯ ಎಂದು ಹೇಳಿದೆ.
ಜನರ ಸಂತೋಷದ ಕುರಿತು ನಾವು ಹೆಚ್ಚಾಗಿ ಗಮನಹರಿಸಿದ್ದೇವು. ಅದರಲ್ಲಿ ನಮಗೆ ಸ್ವಿಜರ್ ಲ್ಯಾಂಡ್ ಜನರೇ ಹೆಚ್ಚು ಸಂತೋಷಿಗಳು ಎಂಬುದು ದೃಢವಾಗಿದೆ ಎಂದು ಎಸ್ ಡಿಎಸ್ಎನ್ ತಿಳಿಸಿದೆ.
Comments
Post a Comment