100 ಸ್ಮಾರ್ಟ್ ಸಿಟಿ ನಿರ್ಮಾಣ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ
Published: 29 Apr 2015 03:02 PM IST | Updated:
29 Apr 2015 03:08 PM IST
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ 100 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುವ
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷಿ
ಯೋಜನೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ
ನೀಡಿದೆ.
ಕಳೆದ ವರ್ಷ ಎನ್ ಡಿ ಎ ಸರ್ಕಾರ ತನ್ನ ಚೊಚ್ಚಲ
ಬಜೆಟ್ ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಘೋಷಿಸಿತ್ತು.
ಸ್ಮಾರ್ಟ್ ಆಗಲಿವೆ ರಾಜ್ಯದ ಆರು ನಗರಗಳು
ಕೇಂದ್ರ ಸರ್ಕಾರದ 100 ಸ್ಮಾರ್ಟ್ ಸಿಟಿಗಳ ಯೋಜನೆಯಲ್ಲಿ
ರಾಜ್ಯಕ್ಕೆ 6 ಸ್ಮಾರ್ಟ್ ಸಿಟಿಗಳ ಪಾಲು ಸಿಕ್ಕಿದೆ. ರಾಜ್ಯಕ್ಕೆ 8
ಸ್ಮಾರ್ಟ್ ಸಿಟಿಗಳನ್ನು ರೂಪಿಸುವ ಅವಕಾಶವಿತ್ತಾದರೂ, ಜನಸಂಖ್ಯೆ
ಆಧಾರಿತವಾಗಿ 6 ನಗರಗಳನ್ನು ಮಾತ್ರ ಸ್ಮಾರ್ಟ್ ಸಿಟಿಗಳನ್ನಾಗಿ
ಮಾಡಲಾಗುತ್ತಿದೆ.
ಸ್ಮಾರ್ಟ್ ಹೇಗೆ?
ಪ್ರತಿಯೊಂದು ಸ್ಮಾರ್ಟ್ ಸಿಟಿಗೂ ರು.500ದ ಕೋಟಿ
ವೆಚ್ಚವಾಗುತ್ತದೆ. ಇದರಲ್ಲಿ ಪಾರ್ಕಿಂಗ್ ವ್ಯವಸ್ಥೆ, 24
ಗಂಟೆ ವಿದ್ಯುತ್, ಅತ್ಯುತ್ತಮ ಒಳಚರಂಡಿ
ವ್ಯವಸ್ಥೆ ಇರುತ್ತದೆ.
Posted by: Lingaraj Badiger | Source: Online Desk
Comments
Post a Comment