' ಸಿಇಟಿ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ (ಮೇ 12ಮತ್ತು 13)
ಮಂಗಳವಾರ - ಏಪ್ರಿಲ್ -28-2015
ಬೆಂಗಳೂರು, ಎ.27: ಸಾಮಾನ್ಯ ಪ್ರವೇಶ (ಸಿಇಟಿ)ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇ 12 ಮತ್ತು ಮೇ 13ಕ್ಕೆ ಮುಂದೂಡಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಪ್ರಕಟಿಸಲಾಗಿದೆ.
ಮೇ 12ರ ಮಂಗಳವಾರ ಬೆಳಗ್ಗೆ 10:30ರಿಂದ 11:50ರ ವರೆಗೆ ಜೀವಶಾಸ್ತ್ರ, ಮೇ 12ರ ಮಧ್ಯಾಹ್ನ 2:30ರಿಂದ 3:50ರ ರವರೆಗೆ ಗಣಿತ. ಮೇ 13ರ ಬುಧವಾರ ಬೆಳಗ್ಗೆ 10:30ರಿಂದ 11:50ರ ವರೆಗೆ ಭೌತಶಾಸ್ತ್ರ, ಮೇ. 13ರ ಮಧ್ಯಾಹ್ನ 2:30ರಿಂದ 3:50ರ ವರೆಗೆ ರಾಸಾಯನ ಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿವೆ.
ಕನ್ನಡ ಭಾಷಾ ಪರೀಕ್ಷೆ:
ಆಯಾ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿಯೇ ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಮೇ 13ರ ಬುಧವಾರ ಸಂಜೆ 4:45ರಿಂದ 5:45ರ ವರೆಗೆ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಕೃಷಿ ಕೋಟಾ ಅಭ್ಯರ್ಥಿಗಳಿಗೆ ಮೇ 16ರ ಶನಿವಾರ ಬೆಳಗ್ಗೆ 9 ಗಂಟೆಯ ನಂತರ ಕೃಷಿ ಸಂಬಂಧಿತ ವಸ್ತು/ಉಪಕರಣಗಳನ್ನು ಗುರುತಿಸುವ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಪರೀಕ್ಷಾ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.
ಪರೀಕ್ಷಾ ದಿನಾಂಕ ಬದ ಲಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಎ.29ರಿಂದ ಪ್ರವೇಶ ಪತ್ರಗಳನ್ನು ಮತ್ತೊಮ್ಮೆ ಪ್ರಾಧಿಕಾರದ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊ ಳ್ಳುವಂತೆ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿನ ಕಾರ್ಮಿಕ ಸಂಘಗಳ ಒಕ್ಕೂಟ ಮತ್ತು ಸೆಂಟ್ರಲ್ ಟ್ರೇಡ್ ಯೂನಿಯನ್ ಎ. 30ರಂದು ಒಂದು ದಿನದ ದೇಶ ವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಾಧಿಕಾರವು ಎ. 29 ಮತ್ತು ಎ.30 ಹಾಗೂ ಮೇ 1ರಂದು ನಡೆಯಬೇಕಾಗಿದ್ದ ಸಿಇಟಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮೇ 12 ಮತ್ತು 13ಕ್ಕೆ ಮುಂದೂಡಲಾಗಿರುವ ಸಿಇಟಿ ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಿದ ವೆಬ್‌ಸೈಟ್ಗೆ ಭೇಟಿ ನೀಡಬಹುದು ಎಂದು ಪರೀಕ್ಷಾ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.
Comments
Post a Comment