ಯೂರೋಪಿನ ಪ್ರತಿಷ್ಠಿತ ಫ‌ುಟ್‌ಬಾಲ್‌ ಕ್ಲಬ್‌ನಲ್ಲಿ ಆಡಿದ ಮೊದಲ ಭಾರತೀಯ ಗುರುಪ್ರೀತಸಿಂಗ ಸಂಧು

ಉದಯವಾಣಿ, Apr 24, 2015, 2:00 PM IST

ನಾರ್ವೆ: ಭಾರತ ಫ‌ುಟ್‌ಬಾಲ್‌ಗೆ ಸಂತಸದ ಸುದ್ದಿಯೊಂದು ದೂರದ ನಾರ್ವೆ ದೇಶದಿಂದ ಬಂದಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಆಟಗಾರನೊಬ್ಬ ಯೂರೋಪಿನ ಪ್ರತಿಷ್ಠಿತ ಕ್ಲಬ್‌ ತಂಡದ ಪರ ಆಡಿ ಇತಿಹಾಸ ಸೃಷ್ಟಿಸಿದ್ದಾರೆ. ಗುರುಪ್ರೀತ್‌ ಸಿಂಗ್‌ ಸಂಧು ನಾರ್ವೆಯ ಟಿಪ್ಪಾಲೆಗಾನ್‌ನ ಸ್ಟೆಬಾಕ್‌ ತಂಡದ ಪರ ಬುಧವಾರ ಕಣಕ್ಕಿಳಿದಿದ್ದಾರೆ. ಅಷ್ಟುಮಾತ್ರವಲ್ಲ ಎದುರಾಳಿ ರೂನಾರ್‌ ತಂಡದ ವಿರುದ್ಧ 6-0 ಗೋಲುಗಳಿಂದ ಸ್ಟೆಬಾಕ್‌ ಗೆಲುವು ಸಾಧಿಸಿದೆ. ಈ ಹಿಂದೆ ಭಾರತದ ಬೈಚುಂಗ್‌ ಭುಟಿಯಾ, ಸುನಿಲ್‌ ಚೆಟ್ರಿ, ಸುಬ್ರತಾ ಪೌಲ್‌ ಯೂರೋಪಿಯನ್‌ ಕ್ಲಬ್‌ಗಳಲ್ಲಿ ಆಡಿದ್ದರು. ಆದರೆ ಅಗ್ರ ಕ್ಲಬ್‌ಗಳಲ್ಲಿ ಸ್ಥಾನಪಡೆಯಲು ವಿಫ‌ಲರಾಗಿದ್ದರು. 1936ರಲ್ಲಿ ಮೊಹಮ್ಮದ್‌ ಸಲೀಂ ಪ್ರತಿಷ್ಠಿತ ಐರಿಷ್‌ ಸೆಲ್ಟಿಕ್‌ ಪರ ಆಡುವ ಅವಕಾಶ ಪಡೆದರೂ ಅವರಿಗೆ ಯಾವುದೇ ಪಂದ್ಯವಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಗುರುಪ್ರೀತ್‌ರದ್ದು ಐತಿಹಾಸಿಕ ಸಾಧನೆ.

ಗುರುಪ್ರೀತ್‌ ಸಿಂಗ್‌ ಹಿಂದೆ ಐಲೀಗ್‌ನಲ್ಲಿ ಈಸ್ಟ್‌ಬೆಂಗಾಲ್‌ ತಂಡದ ಸದಸ್ಯರಾಗಿದ್ದರು. 2014ರ ಆಗಸ್ಟ್‌ನಲ್ಲಿ ಸ್ಟೆಬಾಕ್‌ ತಂಡದಲ್ಲಿ ಸ್ಥಾನ ಪಡೆದರು. ಆದರೆ ಇತ್ತೀಚೆಗಿನವರೆಗೆ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಕಾರಣ ಐವರಿಕೋಸ್ಟ್‌ ಸಾಯೋಬಾ ಮಂಡೆ ಅವರಿಗೆ ಪೈಪೋಟಿಯಾಗಿ ಗೋಲ್‌ಕೀಪಿಂಗ್‌ ನಡೆಸುತ್ತಿದ್ದರು. ಕಡೆಗೂ ಗುರುಪ್ರೀತ್‌ಗೆ ಗೋಲ್‌ಕೀಪರ್‌ ಆಗಿ ಆಡುವ ಅವಕಾಶ ಲಭಿಸಿದೆ.
ತಮ್ಮ ಈ ಸಾಧನೆಯನ್ನು ಟ್ವೀಟರ್‌ ಮೂಲಕ ಗುರುಪ್ರೀತ್‌ ಪ್ರಕಟಿಸಿದ್ದಾರೆ.
ಇದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. "ಈಗ ಏನಾಗಿದೆಯೋ ಅದರಿಂದ ಭಾರೀ
ಸಂತಸವಾಗಿದೆ. ಇಂತಹದೊಂದು ಅವಕಾಶಕ್ಕೆ ಕಾಯುತ್ತಿದ್ದೆ. ತಂಡ ಬೇರೆ ಗೆದ್ದಿದೆ.
ನನಗೆ ಅವಕಾಶ ನೀಡಿರುವುದಕ್ಕೆ ತಂಡಕ್ಕೆ ಧನ್ಯವಾದಗಳು' ಎಂದು ಗುರುಪ್ರೀತ್‌
ಟ್ವೀಟ್‌ ಮಾಡಿದ್ದಾರೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು