ಭಾರತೀಯ ಮೂಲದ ಯೋಧನಿಗೆ ಇಸ್ರೇಲ್ ಪದಕ
Sat, 04/25/2015 - 01:00
ಜೆರುಸಲೇಂ (ಪಿಟಿಐ): ಸೇನೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಭಾರತ ಮೂಲದ ಯೋಧನಿಗೆ ಶುಕ್ರವಾರ ಇಸ್ರೇಲ್‌ನ ಅಧ್ಯಕ್ಷರ ಪದಕ
ದೊರೆತಿದೆ.
ಆದಿಲ್ ಯೊಸೆಫ್ ಅಧ್ಯಕ್ಷರ ಪದಕ ಪಡೆದ ಭಾರತ ಮೂಲದ ಯೋಧ. ನಾಲ್ಕು ವರ್ಷದ ಹಿಂದೆ ಮುಂಬೈನಿಂದ ಇಸ್ರೇಲ್‌ಗೆ ವಲಸೆ ಹೋಗಿದ್ದ ಆದಿಲ್, ಸದ್ಯ 'ಇಸ್ರೇಲ್ ರಕ್ಷಣಾ ಪಡೆ'ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
'ಇಸ್ರೇಲ್ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ನನ್ನ ಆಸೆಗೆ ತಂದೆ–ತಾಯಿಆರಂಭದಲ್ಲಿ ಒಪ್ಪಿಗೆ ಸೂಚಿಸಲಿಲ್ಲ. ಆದರೆ, ನನ್ನ ಒತ್ತಾಯಕ್ಕೆ ಮಣಿದು ಕೊನೆಗೂ ಒಪ್ಪಿದರು. ಅಂತೆಯೇ ನಾನೂ ಕೂಡ ಇಸ್ರೇಲ್ ಸೇನೆ ಸೇರಿ ಯುದ್ಧ ವಿಭಾಗದಲ್ಲಿ ಸೇವೆ ಸಲ್ಲಿಸಿದೆ' ಎಂದು ಆದಿಲ್ ಅವರು ಹೇಳುತ್ತಾರೆ.
'153 ಕೆ.ಜಿ ಇದ್ದ ನನ್ನನ್ನು ಆರಂಭದಲ್ಲಿ ತಪಾಸಣಾ ಶಿಬಿರದಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಇದರಿಂದ ಧೃತಿಗೆಡದೆ ಸತತ ಪರಿಶ್ರಮದಿಂದ ನನ್ನ ತೂಕವನ್ನು 40 ಕೆ.ಜಿ ಇಳಿಸಿಕೊಂಡೆ. ಆಗ ನನ್ನಿಚ್ಛೆಯಂತೆ ಯುದ್ಧ ವಿಭಾಗಕ್ಕೆ ನಿಯೋಜಿಸಿದರು' ಎಂದು ಆದಿಲ್ ಸ್ಮರಿಸುತ್ತಾರೆ.
Comments
Post a Comment