ಯಶಸ್ವಿನಿ ಯೋಜನೆ ಚಿಕಿತ್ಸಾ ದರಗಳ ಪರಿಷ್ಕರಣೆ

ಉದಯವಾಣಿ, Apr 27, 2015, 3:20 AM IST

ಬೆಂಗಳೂರು : ಸಹಕಾರ ಸಂಘಗಳು, ಸ್ತ್ರೀಶಕ್ತಿ ಗುಂಪುಗಳ ಸದಸ್ಯರ ಪಾಲಿಗೆ 'ಸಂಜೀವಿನಿ'ಯಾಗಿರುವ ಯಶಸ್ವಿನಿ ಸಹಕಾರ ಆರೋಗ್ಯ ಯೋಜನೆ ಫ‌ಲಾನುಭವಿಗಳ ಪಾಲಿಗೆ ಈಗ ಇನ್ನಷ್ಟು "ಅರೋಗ್ಯದಾಯಕ'ವಾಗಿದ್ದು, ಯೋಜನೆಯಡಿ ಬರುವ ಶಸ್ತ್ರಚಿಕಿತ್ಸೆಗಳ ಚಿಕಿತ್ಸಾ ದರಗಳನ್ನು ಪರಿಷ್ಕರಿಸಲಾಗಿದೆ.

ಯಶಸ್ವಿನಿ ಯೋಜನೆಯಡಿ ಬರುವ 525 ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ವಿವಿಧ ಬಗೆಯ 823 ಶಸ್ತ್ರಉಚಿಕಿತ್ಸೆಗಳ ಚಿಕಿತ್ಸಾ ದರಗಳನ್ನು ಸರಾಸರಿ ಶೇ.35ರಿಂದ 45ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರ, ಫೆ.20ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿದೆ. ಈ ಕುರಿತು ಇದೇ ತಿಂಗಳ 23ರ ಗೆಜೆಟ್‌ ಅಧಿಸೂಚನೆ ಪ್ರಕಟಿಸಿದೆ.

ಯಶಸ್ವಿನಿ ಚಿಕಿತ್ಸೆಗೆ ಸಂಬಂಧಿಸಿದಂತೆ 2012ರ ನಂತರ ದರ ಪರಿಷ್ಕರಣೆ ಮಾಡದ ಕಾರಣ ನೆಟ್‌ವರ್ಕ್‌ ಆಸ್ಪತ್ರೆಗಳು ನಿರಂತರವಾಗಿ ಬೇಡಿಕೆ ಇಡುತ್ತಲೇ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ನಿಬಂಧಕರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣಾ ಸಮಿತಿ ರಚಿಸಲಾಗಿತ್ತು.

ಆದರೆ, ಆಸ್ಪತ್ರೆಗಳ ಬೇಡಿಕೆಯಿಂದಾಗಿ ಚಿಕಿತ್ಸಾ ದರಗಳ ಪರಿಷ್ಕರಣೆಯಿಂದ ಹೆಚ್ಚು ಅನುಕೂಲವಾಗುವುದು ಫ‌ಲಾನುಭವಿಗಳಿಗೆ. ಏಕೆಂದರೆ ಫ‌ಲಾನುಭವಿಗಳು ತಮ್ಮ
ಕೈಯಿಂದ ಹಣ ಕೊಡುವುದಿಲ್ಲ. ಸರ್ಕಾರವೇ ಆಸ್ಪತ್ರೆಗಳಿಗೆ ಹಣ ಪಾವತಿಸುತ್ತದೆ. ಈ ಹಿಂದೆ ದರಗಳು ಕಡಿಮೆ ಇದ್ದಿದ್ದರಿಂದ ದುಬಾರಿ ಶಸ್ತ್ರಚಿಕಿತ್ಸೆಗಳಿಗೆ ಕೈಯಿಂದ ಹೆಚ್ಚುವರಿ
ಹಣ ಖರ್ಚು ಮಾಡಬೇಕಾಗುತ್ತಿತ್ತು.

ಚಿಕಿತ್ಸಾ ದರಗಳು ಕಡಿಮೆ ಇದ್ದ ಕಾರಣ ಕೆಲವು ಆಸ್ಪತ್ರೆಗಳು ಹೆಚ್ಚಿನ ಕಾಳಜಿ ತೋರುತ್ತಿರಲಿಲ್ಲ. ಯಶಸ್ವಿನಿ ಯೋಜನೆಯಡಿ ಬರುವ 823 ಶಸ್ತ್ರಚಿಕಿತ್ಸಾಗಳಿಗೆ ಚಿಕಿತ್ಸಾ ದರಗಳನ್ನು ಸರಾಸರಿ ಶೇ.35ರಿಂದ 40ರಷ್ಟು ಹೆಚ್ಚಿಸಲಾಗಿದೆ.

ಈ ಪೈಕಿ ಕೆಲವೊಂದು ಶಸ್ತ್ರಚಿಕಿತ್ಸೆಗಳಿಗೆ ದರಗಳನ್ನು ಶೇ.100ರಷ್ಟು ಹೆಚ್ಚಿಸಲಾಗಿದೆ.
ಇದರಲ್ಲಿ ಪ್ರಮುಖವಾಗಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಬರುವ ಸುಮಾರು
63ಕ್ಕೂ ಹೆಚ್ಚು ವಿವಿಧ ಶಸ್ತ್ರಚಿಕಿತ್ಸೆಗಳಿಗೆ ಕನಿಷ್ಠ 2,500 ರೂ.ಗಳಿಂದ ಗರಿಷ್ಠ 40 ಸಾವಿರ ರೂ.ಗೆ ದರ ಹೆಚ್ಚಿಸಲಾಗಿದೆ. ಅದೇ ರೀತಿ ಪ್ರಸೂತಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಬರುವ ವಿವಿಧ 80 ಬಗೆಯ ಶಸ್ತ್ರ ಚಿಕಿತ್ಸೆಗಳಿಗೆ ಕನಿಷ್ಠ 7,500ರಿಂದ 40
ಸಾವಿರ ರೂ., ಹೃದಯ ಸಂಬಂಧಿ 55 ವಿವಿಧ ಬಗೆಯ ಶಸ್ತ್ರಚಿಕಿತ್ಸೆಗಳಿಗೆ 7,500
ರೂ.ಗಳಿಂದ 1.35 ಲಕ್ಷ ರೂ. ವರೆಗೆ ಮತ್ತು ಮಕ್ಕಳ ಸಂಬಂಧಿ ವಿವಿಧ ಬಗೆಯ 90ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಿಗೆ 6 ಸಾವಿರದಿಂದ 40 ಸಾವಿರ ರೂ.ಗಳವರೆಗೆ ಶಶಸ್ತ್ರಚಿಕಿತ್ಸಾ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ.

38 ಲಕ್ಷ ಸದಸ್ಯರು
2003ರಿಂದ ಜಾರಿಗೆ ಬಂದಿರುವ ಯಶಸ್ವಿನಿ ಯೋಜನೆಯಡಿ ಸಹಕಾರ ಸಂಘಗಳು ಮತ್ತು ಸಿOಉàಶಕ್ತಿ ಗುಂಪುಗಳ ಸದಸ್ಯರು ಫ‌ಲಾನುಭವಿಗಳಾಗಬಹುದು. ವಾರ್ಷಿಕ 250 ರೂ. ವಂತಿಗೆ ಪಾವತಿಸಿದರೆ ವರ್ಷದಲ್ಲಿ ಒಂದು ಬಾರಿ ಗರಿಷ್ಠ ಮಿತಿ 1.25 ಲಕ್ಷ ರೂ.ವರೆಗಿನ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಬಹುದು.

ವರ್ಷದಲ್ಲಿ 2 ಬಾರಿ ಚಿಕಿತ್ಸೆಗೆ ದಾಖಲಾಗುವ ಪ್ರಸಂಗ ಬಂದರೆ ನಗದು ರಹಿತ ಮಿತಿ 2 ಲಕ್ಷ ರೂ.ವರೆಗೆ ಇರುತ್ತದೆ. ಯೋಜನೆಯಲ್ಲಿ 2003ರಿಂದ ಇಲ್ಲಿವರೆಗೆ 38.62 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 7.5 ಲಕ್ಷ ಫ‌ಲಾನುಭವಿಗಳು ವಿವಿಧ ಬಗೆಯ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಾರೆ. 11 ವರ್ಷಗಳಲ್ಲಿ ಸರ್ಕಾರ ಈ ಯೋಜನೆಗೆ ಒಟ್ಟು 695 ಕೋಟಿ ರೂ. ವೆಚ್ಚ ಮಾಡಿದೆ. 2014-15ನೇ ಸಾಲಿನಲ್ಲಿ 65 ಸಾವಿರ ಮಹಿಳೆಯರು ಸೇರಿದಂತೆ 1.32 ಲಕ್ಷ ಫ‌ಲಾನುಭವಿಗಳು ಚಿಕಿತ್ಸೆ ಪಡೆದಿದ್ದು, ಇದಕ್ಕಾಗಿ 149 ಕೋಟಿ ರೂ. ಖರ್ಚು ಮಾಡಲಾಗಿದೆ. 2015-16 ನೇ ಸಾಲಿನಲ್ಲಿ ಸದಸ್ಯರ ಸಂಖ್ಯೆ 50 ಲಕ್ಷ ಮಾಡುವ ಗುರಿ ಸರ್ಕಾರ ಹೊಂದಿದೆ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು