ಫೋಬ್ಸ್‌ ಪಟ್ಟಿ ಪ್ರಕಟ: ಎರಡನೇ ಸ್ಥಾನಕ್ಕೆ ಕುಸಿದ ಸಾಂಘ್ವಿ ಮೊದಲ ಸ್ಥಾನಕ್ಕೇರಿದ ಅಂಬಾನಿ

ನ್ಯೂಯಾರ್ಕ್‌/ಮುಂಬೈ (ಪಿಟಿಐ): ಫೋಬ್ಸ್‌ ನಿಯತಕಾಲಿಕ ಬಿಡುಗಡೆ ಮಾಡಿರುವ ವಿಶ್ವದ ಸಿರಿವಂತ ಭಾರತೀ ಯರ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನ ಪಡೆದುಕೊಳ್ಳುವಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಯಶಸ್ವಿಯಾಗಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಒಡೆಯ ಮುಖೇಶ್‌ ಅಂಬಾನಿ ಬಳಿ ಸದ್ಯ  ರೂ. 1.22 ಲಕ್ಷ ಕೋಟಿ ಮೌಲ್ಯದ ಸಂಪತ್ತಿದೆ.
ಏಳು ವಾರಗಳವರೆಗೆ ಮೊದಲ ಸ್ಥಾನದಲ್ಲಿದ್ದ ಉದ್ಯಮಿ ದಿಲೀಪ್‌ ಸಾಂಘ್ವಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

ನಂತರದ ಸ್ಥಾನದಲ್ಲಿ ವಿಪ್ರೊ ಕಂಪೆನಿ ಸಂಸ್ಥಾಪಕ ಅಜೀಂ ಪ್ರೇಮ್‌ಜೀ, ಲಕ್ಷ್ಮಿ ಮಿತ್ತಲ್‌, ಶಿವನಾಡರ್, ಕುಮಾರ ಮಂಗಲಂ ಬಿರ್ಲಾ, ಉದಯ್‌ ಕೋಟಕ್‌, ಸುನಿಲ್‌ ಮಿತ್ತಲ್‌, ಸೈರಸ್‌ ಪೂನಾವಾಲಾ ಮತ್ತು ಗೌತಮ್‌ ಅದಾನಿ ಇದ್ದಾರೆ ಎಂದು  ಫೋಬ್ಸ್‌ ವರದಿ ಪ್ರಕಟಿಸಿದೆ.

ದಿಲೀಪ್‌ ಸಾಂಘ್ವಿ ಒಡೆತನದ ಸನ್‌ ಫಾರ್ಮಾ ಕಂಪೆನಿ ಷೇರುಗಳು ದಿನದ ವಹಿವಾಟಿನಲ್ಲಿ ಶೇ 2ರಷ್ಟು ಕುಸಿತ ಕಂಡಿವೆ. ಇದರಿಂದ  ರೂ. 2.81 ಲಕ್ಷದಷ್ಟು ನಷ್ಟವಾಗಿ. ಅವರ ಒಟ್ಟು ಸಂಪತ್ತು ರೂ. 1.20 ಲಕ್ಷ ಕೋಟಿಗಳಿಗೆ ಕುಸಿಯಿತು. ಹೀಗಾಗಿ ಅಂಬಾನಿ ಸಹಜವಾಗಿಯೇ ಮೊದಲ ಸ್ಥಾನಕ್ಕೇರಿದರು.

ವಿಶ್ವದ ಭಾರಿ ಸಿರಿವಂತ ಬಿಲ್‌ ಗೇಟ್ಸ್: ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಬಿಲ್‌ ಗೇಟ್ಸ್‌ ರೂ. 5.01 ಲಕ್ಷ ಕೋಟಿ ಸಂಪತ್ತು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಭಾರತದ ಇಬ್ಬರಿಗೆ ಸ್ಥಾನ: ವಿಶ್ವದ 50 ಭಾರಿ ಸಿರಿವಂತರಲ್ಲಿ ಇಬ್ಬರು ಭಾರತೀ ಯರು ಮಾತ್ರ ಸ್ಥಾನ ಪಡೆದಿ ದ್ದಾರೆ. ಮುಖೇಶ್‌ ಅಂಬಾನಿ 46ನೇ ಸ್ಥಾನದ ಲ್ಲಿದ್ದರೆ, ಸಾಂಘ್ವಿ 48ನೇ ಸ್ಥಾನ ಪಡೆದು ಕೊಂಡಿದ್ದಾರೆ. ಮಾರ್ಚ್‌ 2ರಂದು ಫೋಬ್ಸ್‌ ಬಿಡುಗಡೆ ಮಾಡಿದ್ದ ವಾರ್ಷಿಕ ಪಟ್ಟಿಯಲ್ಲಿ ಅಂಬಾನಿ 39 ಮತ್ತು ಸಿಂಘ್ವಿ 44ನೇ ಸ್ಥಾನದಲ್ಲಿದ್ದರು.

ಮಾರ್ಚ್‌ 4ರಂದು ಸನ್‌ಫಾರ್ಮಾ ಷೇರುಗಳ ಮೌಲ್ಯ ಏರಿಕೆಯಾಗಿದ್ದರಿಂದ   ಸ್ವಾಂಘ್ವಿ ಅವರ ಒಟ್ಟು ಸಂಪತ್ತಿನಲ್ಲಿ ಏರಿಕೆಯಾಗಿ, ವಿಶ್ವದ ಸಿರಿವಂತ ಭಾರತೀಯರ ಪಟ್ಟಿಯಲ್ಲಿ ಮುಖೇಶ್‌ ಅವರನ್ನು ಹಿಂದಿಕ್ಕಿ ಸಾಂಘ್ವಿ ಮೊದಲ ಸ್ಥಾನಕ್ಕೆ ಏರಿದ್ದರು.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

INCOME TAX CALCULATION 2025-26 for JAMAKHANDI BLOCK