ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ವಿರೋಧಿಸಿ ಸಾರಿಗೆ ಸಂಚಾರ ಬಂದ್
..
ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 2014ರ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ವಿರೋಧಿಸಿ ಅಖಿಲ ಭಾರತ
ಸಾರಿಗೆ ನೌಕರರ ಒಕ್ಕೂಟ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. .
ಸಾರ್ವಜನಿಕ ಸಾರಿಗೆ ಸಿಬ್ಬಂದಿ, ಖಾಸಗಿ ಬಸ್ ಚಾಲಕರು, ಆಟೋ ರಿಕ್ಷಾ, ಟ್ಯಾಕ್ಸಿ, ಮಿನಿ ಬಸ್, ಲಾರಿ, ಟ್ರಕ್, ಸ್ಕೂಲ್ ಬಸ್ ಸೇರಿದಂತೆ ಎಲ್ಲ ಸಾರಿಗೆ ನೌಕರರ
ಒಕ್ಕೂಟಗಳು ಮುಷ್ಕರಕ್ಕೆ ಕರೆನೀಡಿವೆ. ದೇಶಾದ್ಯಂತ 7.5 ಲಕ್ಷ ನೌಕರರು ಬಂದ್'ಗೆ ಬೆಂಬಲ ನೀಡಿದ್ದಾರೆ.
ಏನಿದು ಮಸೂದೆ..? ಯಾಕೆ ಬಂದ್..?
-----------------
- ಕೇಂದ್ರ ಸರ್ಕಾರ, ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆಗೆ ತಿದ್ದುಪಡಿ ತರಲು ಮುಂದಾಗಿದೆ
- ತಿದ್ದುಪಡಿಯಾದರೆ, 1ನೇ ಬಾರಿ ಸಿಗ್ನಲ್ ಜಂಪ್ಮಾಡಿದರೆ 500 ರೂ. ದಂಡ
- 2ನೇ ಬಾರಿ ಸಿಗ್ನಲ್ ಜಂಪ್ ಮಾಡಿದರೆ ಸಾವಿರ ರೂ. ದಂಡ
- 3ನೇ ಬಾರಿ ಸಿಗ್ನಲ್ ಜಂಪ್ ಮಾಡಿದರೆ 1,500 ರೂ. ದಂಡ ತೆರಬೇಕು
- 3ನೇ ಬಾರಿ ಮಾಡಿದ ಮೇಲೆ, ಒಂದು ತಿಂಗಳು ಡಿಎಲ್ ರದ್ದಾಗುತ್ತೆ
- ಌಕ್ಸಿಡೆಂಟ್ನಲ್ಲಿ, ಗಾಯಾಳುವಿಗೆ ಚಾಲಕನೇ ಚಿಕಿತ್ಸಾ ವೆಚ್ಚ ಭರಿಸಬೇಕು,ಪರಿಹಾರ ಕೊಡಬೇಕು
- ಸಾವನ್ನಪ್ಪಿದ್ದರೆ, ಕಾರಣನಾದ ಚಾಲಕನಿಗೆ 1 ಲಕ್ಷ ದಂಡ & 4 ವರ್ಷ ಜೈಲು
- ಲಘು ವಾಹನ ಮತ್ತು ತ್ರಿಚಕ್ರ ವಾಹನ ಸವಾರರ ಬಳಿ ಇನ್ಷೂರೆನ್ಸ್ ಇರಲೇಬೇಕು
- ಇನ್ಷೂರೆನ್ಸ್ ಇಲ್ಲದಿದ್ದರೆ, 20 ಸಾವಿರ ರೂ. ದಂಡ, 6 ತಿಂಗಳು ಜೈಲು ಶಿಕ್ಷೆ
ಮತ್ತು 6 ತಿಂಗಳು ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು
- ಮಧ್ಯಮ ಮತ್ತು ಭಾರಿ ವಾಹನಗಳಿಗೆ ಇನ್ಷೂರೆನ್ಸ್ ಇಲ್ಲದಿದ್ದರೆ, 25 ಸಾವಿರ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ . 6 ತಿಂಗಳು ವಾಹನ
ಮುಟ್ಟುಗೋಲು
ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸವಾರಿ..?
ಸರ್ಕಾರಿ ಸಾರಿಗೆಗೆ ಕುತ್ತು...
--------------------------
- ಸಾರಿಗೆ ಸಂಸ್ಥೆಗಳ ಮೇಲಿನ ರಾಜ್ಯ ಸರ್ಕಾರಗಳ ಅಧಿಕಾರ ಮೊಟಕು
- ಕೇಂದ್ರ ಸರ್ಕಾರದಿಂದ ಬಿಗಿ ನಿಯಂತ್ರಣದ ಹುನ್ನಾರ
- ಸರ್ಕಾರಿ ಸಾರಿಗೆಯನ್ನು ಖಾಸಗೀಕರಣ ಮಾಡುವ ಯತ್ನ
- ಬಿಲ್ ಪಾಸ್ ಆದರೆ ಸಾವಿರಾರು ಚಾಲಕರ ಕೆಲಸಕ್ಕೆ ಕುತ್ತು
- ಹಲವು ಸಾರಿಗೆ ಸಂಸ್ಥೆಗಳಿಗೆ ಬೀಳಲಿದೆ ಬೀಗ
ಸಾರಿಗೆಯ ಖಾಸಗೀಕರಣ..
-----------------------
- ರಾಜ್ಯ ಸಾರಿಗೆ ಸಂಸ್ಥೆಗಳ ಮೇಲೆ ಕೇಂದ್ರ ಹಿಡಿತ ಸಾಧಿಸಲಿದೆ
- ಹರಾಜಿನ ಮೂಲಕ ಸಾರಿಗೆ ಸಂಸ್ಥೆಗಳ ಮಾರಾಟ
- ಸಾರಿಗೆ ಕ್ಷೇತ್ರದಲ್ಲಿ ಹೆಚ್ಚಾಗಲಿದೆ ಖಾಸಗಿಯವರ ದರ್ಬಾರು
- ಸಿಬ್ಬಂದಿ ಸೌಲಭ್ಯಗಳಿಗೆ ಕತ್ತರಿ ಬೀಳುವ ಸಂಭವ
- ಚಾಲನಾ ಪರವಾನಗಿ, ವಿಮೆಯೂ ಖಾಸಗಿಯವರ ಪಾಲು
ಡೇಂಜರ್ ಸಾರಿಗೆ ಮಸೂದೆ?
---------------------------
- 1988ರ ಮೋಟಾರು ವಾಹನ ಕಾಯಿದೆ ಸಂಪೂರ್ಣ ರದ್ದು
- ರಾಜ್ಯ ವ್ಯಾಪ್ತಿಯ ಸಾರಿಗೆ ನಿಗಮಗಳ ಮೇಲೆ ಹಿಡಿತಕ್ಕೆ ಕೇಂದ್ರದ ಪ್ಲಾನ್
- ಸಾರಿಗೆ ವ್ಯವಸ್ಥೆಯಲ್ಲಿದ್ದ ವಿಕೇಂದ್ರಿಕರಣ ನೀತಿಗೆ ಎಳ್ಳು ನೀರು
- ಕೇಂದ್ರೀಕರಣದ ಮೂಲಕ ಬಿಗಿ ಹಿಡಿತ ಸಾಧಿಸಲು ಹೊರಟಿರುವ ಕೇಂದ್ರ
- ಮಸೂದೆ ಜಾರಿಯಾದರೆ ಸರ್ಕಾರಿ ನಿಗಮಗಳ ನೌಕರರಿಗೆ ಭಾರೀ ಅಪಾಯ
ಹೊಸ ಕಾಯಿದೆ ಬಂದರೆ..
-------------------------
- ವಾಹನದ ಎಲ್ಲ ವಿವರಗಳೂ ಒಂದೇ ಕಡೆ ಸಿಗಲಿವೆ
- ಡಿಎಲ್, ಇನ್ಷೂರೆನ್ಸ್, ದಂಡ ಕಟ್ಟಿದ್ದ ವಿವರಗಳೂ ಸಿಗಲಿವೆ
- ನಕಲಿ ಡಿಎಲ್, ಸಮಯ ಮೀರಿದ ಡಿಎಲ್ಗಳು ರದ್ದಾಗಲಿವೆ
- ನಿಯಮ ಉಲ್ಲಂಘಿಸಿದ ಪ್ರತಿ ಅಂಶವೂ ದಾಖಲಾಗುತ್ತಿರುತ್ತದೆ
- ಕಾನೂನು ಉಲ್ಲಂಘಿಸಿದರೆ ದಂಡ ತಪ್ಪಿದ್ದಲ್ಲ, ಜೈಲು ಶಿಕ್ಷೆಯೂ ಆಗಬಹುದು
Comments
Post a Comment