ಹಿಮಪಾತದಲ್ಲಿ ಮರೆಯಾದ ಗೂಗಲ್ ಸಾಹಸಿ ಫ್ರೆಡಿನ್‍ಬರ್ಗ್

Published: 27 Apr 2015 10:08 AM IST | Updated: 27 Apr 2015 10:09 AM IST

ಗೂಗಲ್ ಎಂಜಿನಿಯರ್ ಡ್ಯಾನ್ ಫ್ರೆಡಿನ್‍ಬರ್ಗ್

ನವದೆಹಲಿ: ನೇಪಾಳ ಭೂಕಂಪದ ಅಡ್ಡಪರಿಣಾಮಕ್ಕೆ ಸಿಲುಕಿರುವ ಮೌಂಟ್ ಎವರೆಸ್ಟ್ ನಲ್ಲಿ ಹಿಮಪಾತ ಮುಂದುವರೆದಿದೆ. 22 ಬಲಿತೆಗೆದುಕೊಂಡರೂ ಇನ್ನೂ ತಣ್ಣಗಾಗದ ಹಿಮಾಲಯ ತನ್ನ ಒಡಲಲ್ಲಿ ಇನ್ನೂ ಕನಿಷ್ಠ ನೂರು ಮೃತದೇಹಗಳನ್ನು ಹುದುಗಿಸಿಟ್ಟುಕೊಂಡಿರುವ ಗುಮಾನಿಯಿದೆ.

ವಿಪರ್ಯಾಸವೆಂದರೆ ಜಗತ್ತಿಗೆ ದಿಕ್ಕು ತೋರಿಸುವ ಗೂಗಲ್ ನ ಸಾಹಸಿಯೊಬ್ಬ ಮರೆಯಾಗಿ ಹೋಗಿದ್ದಾನೆ. ಜಗತ್ತಿನ ಅತ್ಯಂತ ಎತ್ತರದ ಪರ್ವತಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ದುಡಿಯುತ್ತಿದ್ದ ಗೂಗಲ್ ಎಂಜಿನಿಯರ್ ಡ್ಯಾನ್ ಫ್ರೆಡಿನ್‍ಬರ್ಗ್ ಎವರೆಸ್ಟ್ ನ ಬೇಸ್ ಕ್ಯಾಂಪ್‍ನಲ್ಲಿ ಕೊನೆಯುಸಿರೆಳೆದಿದ್ದಾನೆ. ಆತನ ಸಾವಿನ ಸುದ್ದಿ ಕೂಡ ಗೂಗಲ್ ನಿಂದಲೇ ತಿಳಿದುಕೊಳ್ಳುವಂತಾಗಿದ್ದು ದುರಂತದ ಪರಮಾವಧಿ. ಆತನ ಸೋದರಿ ಮೇಗನ್ ಇನ್‍ಸ್ಟಾಗ್ರಾಮ್ ನಲ್ಲಿ ಫೋಟೋ ಸಮೇತವಾಗಿ ಸುದ್ದಿ ಪೋಸ್ಟ್  ಮಾಡಿ ಅಣ್ಣನ ಸಾವನ್ನು ದೃಢಪಡಿಸಿದ್ದಾರೆ.

ತೀವ್ರರಕ್ತಸ್ರಾವಕ್ಕೊಳಗಾಗಿ ಪ್ರಾಣಬಿಟ್ಟ ಅಣ್ಣನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆ ಹೇಳಿ ಪ್ರಾರ್ಥನೆ ಫಲಿಸದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾಳೆ. 2007ರಿಂದ ಗೂಗ ಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಫ್ರೆಡಿನ್‍ಬರ್ಗ್ ತನ್ನನ್ನು ಗೂಗಲ್ ಸಾಹಸಿ ಎಂದೇ ಕರೆದುಕೊಳ್ಳುತ್ತಿದ್ದ. 2013ರಿಂದ ಪರ್ವತಗಳಿಗೆ ಸಂಬಂಧಿಸಿದ ಸಾಹಸ ಅಧ್ಯಯನಗಳಲ್ಲಿ ಫ್ರೆಡಿನ್‍ಬರ್ಗ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದ. ಇನ್‍ಸ್ಟಾದಲ್ಲಿ ಸಾಹಸಿಯ ಮರಣಕ್ಕೆ ಸಾವಿರಾರು ಶ್ರದ್ಧಾಂಜಲಿ ಸಂದೇಶಗಳು ಹರಿದುಬರುತ್ತಿವೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು