ಫೇಸ್‌ಬುಕ್ ಮೆಸೆಂಜರ್ ಆ್ಯಪ್ ಮೂಲಕ ವೀಡಿಯೋ ಕಾಲಿಂಗ್
Published: 28 Apr 2015 04:48 PM IST
ಫೇಸ್‌ಬುಕ್
ಜನಪ್ರಿಯ ಸಾಮಾಜಿಕ ತಾಣ ಫೇಸ್‌ಬುಕ್ ತನ್ನ ಮೆಸೆಂಜರ್ ಆ್ಯಪ್‌ನಲ್ಲಿ ವೀಡಿಯೋ ಕಾಲಿಂಗ್ ಸೌಲಭ್ಯವನ್ನು ಆರಂಭಿಸಿದೆ. ಮೆಸೆಂಜರ್ ಆ್ಯಪ್‌ನಲ್ಲಿರುವ ಸ್ನೇಹಿತರ ಜತೆ ಇನ್ಮುಂದೆ ವೀಡಿಯೋ ಚಾಟ್ ಮಾಡಲು ಒಂದೇ ಒಂದು ಬಟನ್ ಕ್ಲಿಕ್ ಮಾಡಿದರೆ ಸಾಕು.
ಮೈಕ್ರೋಸಾಫ್ಟ್ ಸ್ಕೈಪ್, ಗೂಗಲ್ ಹ್ಯಾಂಗ್‌ಔಟ್ ಮತ್ತು ಆ್ಯಪಲ್ ಫೇಸ್‌ಟೈಮ್ ಮೊದಲಾದ ವಿಡಿಯೋ ಚಾಟಿಂಗ್ ಆ್ಯಪ್ ಗಳ ಜತೆ ಇದೀಗ ಫೇಸ್ ಬುಕ್ ಕೂಡಾ ಸೇರಿಕೊಂಡಿದೆ.
ಮೊಬೈಲ್‌ನ ಕಡಿಮೆ ಬ್ಯಾಂಡ್‌ವಿಡ್ತ್ ನೆಟ್‌ವರ್ಕ್‌ನಲ್ಲಿಯೂ ವೀಡಿಯೋ ಚೆನ್ನಾಗಿರಬೇಕೆಂದು ಫೇಸ್‌ಬುಕ್ ಡೆವೆಲಪರ್‌ಗಳು ಪ್ರಯತ್ನ ಪಟ್ಟಿದ್ದಾರೆ. ಆದ್ದರಿಂದ ಇವು ಎಲ್‌ಟಿಇ ಮತ್ತು ವೈಫೈ ಕನೆಕ್ಷನ್‌ಗಳಲ್ಲಿ ಅಡೆತಡೆಯಿಲ್ಲದೆ ಕಾರ್ಯವೆಸಗುತ್ತದೆ ಎಂದು ಫೇಸ್‌ಬುಕ್ ಉಪಾಧ್ಯಕ್ಷ ಸ್ಟಾನ್ ಚುಡ್‌ನೋವಸ್ಕಿ ಹೇಳಿದ್ದಾರೆ.
ವೀಡಿಯೋ ಕರೆ ಮಾಡಬೇಕಾದರೆ ಫೇಸ್‌ಬುಕ್ ಬಳಕೆದಾರರು ಕ್ಯಾಮೆರಾ ಐಕಾವ್ ಮೇಲೆ ಒತ್ತಿದರೆ ಅದು ತನ್ನಿಂದತಾನೇ ಫ್ರೆಂಟ್ ಫೇಸಿಂಗ್ ಕ್ಯಾಮೆರಾ ಮತ್ತು ಹಿಂದಿರುವ ಕ್ಯಾಮೆರಾಕ್ಕೆ ಬದಲಾಗುತ್ತದೆ. ಈ ಆ್ಯಪ್ ಈಗ ಅಮೆರಿಕ, ಬ್ರಿಟನ್, ಕೆನಡಾ, ಫ್ರಾನ್ಸ್ ನಲ್ಲಿ ಆ್ಯಂಡ್ರಾಯಿಡ್ ಮತ್ತು ಐಒಎಸ್‌ನಲ್ಲಿ ಲಭ್ಯವಾಗಿದೆ.
Comments
Post a Comment