Six Cities's name of West Bengal changed by Mamata...
ಪಶ್ಚಿಮಬಂಗಾಳದ 6 ಪ್ರಮುಖ ನಗರಗಳ ಹೆಸರು
ಬದಲಾಯಿಸಿದ ಮಮತಾ
ಕೊಲ್ಕತ್ತಾ, ಏ.24- ಪಶ್ಚಿಮ ಬಂಗಾಳದಲ್ಲಿ 6
ಪ್ರಮುಖ ನಗರಗಳ ಹೆಸರನ್ನು ಬದಲಾಯಿಸಿ ಅಲ್ಲಿನ ಸರ್ಕಾರ ಅಧಿಕೃತ
ಆದೇಶ ಹೊರಡಿಸಿದೆ. ಒಂದು ಕಾಲದಲ್ಲಿ ರೈತರ
ಪ್ರತಿಭಟನೆಯಿಂದಾಗಿ ದೇಶದ ಗಮನ ಸೆಳೆದಿದ್ದ ಸಿಲಿಗುರಿ
ಜಿಲ್ಲೆಗೆ ತೀಸ್ತಾ ಎಂದು ಪುನರ್ ನಾಮಕರಣ
ಮಾಡಲಾಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ
ರವೀಂದ್ರನಾಥ ಠಾಗೂರ್ ಅವರ ಗೀತ ರಚನೆಗೆ
ಮೂಲ ಕಾರಣಕರ್ತವಾಗಿದ್ದ ತೀಸ್ತಾ ನದಿ ಉತ್ತರ
ಬಂಗಾಳದಲ್ಲಿ ರೈತ ಜೀವನಾಡಿಯೆಂದೇ
ಖ್ಯಾತಿಯಾಗಿದೆ. ಇನ್ನು ಅವಳಿ ಕೈಗಾರಿಕಾ ಜಿಲ್ಲೆಗಳಾದ
ಅಸನ್ಸೋಲ್-ದುರ್ಗಾಪುರಕ್ಕೆ ಅಗ್ನಿ ಬಿನಾ ಎಂದು ಹೆಸರಿಡಲಾಗಿದೆ.
ಖ್ಯಾತ ಕವಿ ಖಾಜಿ ನಸ್ರುಲ್ ಇಸ್ಲಾಂ ಅವರ ಕವನಗಳಿಗೆ ಈ
ಪ್ರದೇಶವೇ ಭೂಮಿಕೆಯಾಗಿತ್ತು. ಮಾಲ್ಡಾ ಜಿಲ್ಲೆಯ ಗಜಲ್ ದೋಬಾ
ಪ್ರದೇಶಕ್ಕೆ ಮುಕ್ತಿ ತೀರ್ಥ , ಉತ್ತಮ್ ಸಿಟಿ ಎಂದು
ಕರೆಯಲ್ಪಡುತ್ತಿದ್ದ ನಗರಕ್ಕೆ ಉತ್ತಮ್ ಕುಮಾರ್ ಎಂದು
ನಾಮಕರಣ ಮಾಡಲಾಗಿದೆ. ನದಿಯಾ ಜಿಲ್ಲೆಗೆ ಕಲ್ಯಾಣಿ ಸಪ್ತ
ನಗರಗಳ ಉಪಗ್ರಹ ನಗರಿ ಸಮೃದ್ಧಿಗೆ ವಿಶ್ವ ಬಂಗಾಳ
ಎಂದು ಹೆಸರಿಡಲಾಗಿದೆ.(
Comments
Post a Comment