ಮಂಗೋಲಿಯಾ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್ ನೆರವು: ಪ್ರಧಾನಿ ನರೇಂದ್ರ ಮೋದಿ
ಮಂಗೋಲಿಯಾ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್ ನೆರವು: ಪ್ರಧಾನಿ ನರೇಂದ್ರ ಮೋದಿ
ಉಲಾನ್ ಬಟರ್, ಮೇ 17: ರವಿವಾರದಿಂದ ಮಂಗೋಲಿಯಾಕ್ಕೆ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಭಿವೃದ್ಧಿಗೆ ಸುಮಾರು ಒಂದು ಬಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ.
ಮಂಗೋಲಿಯಾದ ರಾಜಧಾನಿ ಉಲಾನ್ ಬಟರ್ ನಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ ಗಂದಾನ್ ತೆಗ್‌ಚಿನ್‌ಲೆಂಗ್ ಬೌದ್ಧಧಾಮಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಮಂಗೋಲಿಯಾ ಭಾರತದ ಆಧ್ಯಾತ್ಮಿಕ ನೆರೆ ರಾಷ್ಟ್ರವಾಗಿದೆ. ಇಲ್ಲಿಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ತಾವಾಗಿದ್ದು, ದೊರೆತ ಸ್ವಾಗತಕ್ಕೆ ತಾವು ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ.
ಅಲ್ಲದೆ, ಮಂಗೋಲಿಯಾ ಭೇಟಿಯಿಂದ ಭಾರತ-ಮಂಗೋಲಿಯಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Comments
Post a Comment