ಐಸಿಎಸ್‌ಇ 10, 12ನೇ ತರಗತಿ ಫಲಿತಾಂಶವೂ ಇಂದು ಪ್ರಕಟ.
ಐಸಿಎಸ್‌ಇ 10, 12ನೇ ತರಗತಿ ಫಲಿತಾಂಶವೂ ಇಂದು ಪ್ರಕಟ.(PSG)
ಬೆಂಗಳೂರು: ಐಸಿಎಸ್‌ಇ ಪಠ್ಯಕ್ರಮದ 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶಗಳೂ ಕೂಡ ಸೋಮವಾರ ಪ್ರಕಟವಾಗಲಿದೆ. ಬೆಳಗ್ಗೆ 11.30ಕ್ಕೆ ಎರಡೂ ಫಲಿತಾಂಶಗಳು ಐಸಿಎಸ್‌ಇ ವೆಬ್‌ಸೈಟ್ www.cisce.org ನಲ್ಲಿ ಸಿಗಲಿವೆ.
ಪ್ರಾಂಶುಪಾಲರುಗಳು ತಮ್ಮ ಕರಿಯರ್ ಪೋರ್ಟಲ್‌ನಲ್ಲಿ ಲಾಗಿನ್ ಆಗುವ ಮೂಲಕ ತಮ್ಮ ಶಾಲೆ ಅಥವಾ ಕಾಲೇಜಿನ ಒಟ್ಟಾರೆ ಫಲಿತಾಂಶವನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಐಸಿಎಸ್‌ಇ ವೆಬ್‌ಸೈಟ್‌ನಲ್ಲಿ ಲಾಗ್‌ಇನ್ ಆಗಿ ತಮ್ಮ ಫಲಿತಾಂಶವನ್ನು ಪ್ರತ್ಯೇಕವಾಗಿ ಪಡೆದುಕೊಳ್ಳಬಹುದು.
10ನೇ ತರಗತಿ ವಿದ್ಯಾರ್ಥಿಗಳಾದರೆ ವೆಬ್‌ಸೈಟ್‌ನಲ್ಲಿ ಲಾಗ್‌ಇನ್ ಆಗಿ "ರಿಸಲ್ಟ್ 2015' ಆಯ್ಕೆ ಕ್ಲಿಕ್ ಮಾಡಿ, ನಂತರ ಐಸಿಎಸ್‌ಇ ಆಯ್ಕೆಯನ್ನು ಕ್ಲಿಕ್ ಮಾಡಬೇಕು. 12ನೇ ತರಗತಿ ವಿದ್ಯಾರ್ಥಿಗಳು "ಐಎಸ್‌ಇ' ಕ್ಲಿಕ್ ಮಾಡಿ ತಮ್ಮ ಯೂನಿಕ್ ಐಡಿ ಸಂಖ್ಯೆಯನ್ನು ನಮೂದಿಸಿ ಫಲಿತಾಂಶ ಪಡೆಯಬಹುದು. ಹೆಚ್ಚಿನ ವಿವರಗಳನ್ನು ವೆಬ್‌ಪೇಜ್‌ನಲ್ಲಿ ವೀಕ್ಷಿಸಬಹುದು ಎಂದು ಕೌನ್ಸಿಲ್ ಫಾರ್ ದ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್(ಐಸಿಎಸ್‌ಇ) ಘೋಷಿಸಿದೆ.
Comments
Post a Comment