10 ನೇ ತರಗತಿ ಪಾಸ್ ಮಾಡಿದ 9 ವರ್ಷದ ಬಾಲಕ..!(PSG)
10 ನೇ ತರಗತಿ ಪಾಸ್ ಮಾಡಿದ 9 ವರ್ಷದ ಬಾಲಕ..!(PSG)
ಹೈದರಾಬಾದ್: 9 ವರ್ಷದ ಪ್ರತಿಭಾವಂತ ಬಾಲಕನೊಬ್ಬ 10 ನೇ ತರಗತಿ ಪರೀಕ್ಷೆಯನ್ನು 10 ಕ್ಕೆ 7.5 ಗ್ರೇಡ್ ಪಡೆಯುವ ಮೂಲಕ ಪಾಸ್ ಮಾಡಿದ್ದು, ದಾಖಲೆ ನಿರ್ಮಿಸಿದ್ದಾನೆ. ತೆಲಂಗಾಣ ಪರೀಕ್ಷಾ ಮಂಡಳಿ ನಡೆಸಿದ್ದ ಪರೀಕ್ಷಾ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಬಾಲಕನ ಈ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.
ಹೈದರಾಬಾದ್ ನ ಅಗಸ್ತ್ಯಾ ಜೈಸ್ವಾಲ್ ಈ ಸಾಧನೆ ಮಾಡಿರುವ ಪುಟ್ಟ ಬಾಲಕನಾಗಿದ್ದು, 2005 ಆಗಸ್ಟ್ 13 ರಂದು ಜನಿಸಿರುವ ಈತ ಬಾಲ್ಯದಿಂದಲೂ ತನ್ನ ಪ್ರತಿಭೆ ಕಾರಣಕ್ಕಾಗಿ ಎಲ್ಲರ ಗಮನ ಸೆಳೆದಿದ್ದ. ಈತನ ಬುದ್ದಿಮತ್ತೆಯನ್ನು ಗಮನಿಸಿದ್ದ ಪೋಷಕರು ಹೈದರಾಬಾದಿನ ಚಂದ್ರಯಾನಗುತ್ತದಲ್ಲಿರುವ ಸೇಂಟ್ ಹಿಲ್ಸ್ ಹೈಸ್ಕೂಲಿನಲ್ಲಿ ಈ ಬಾರಿಯ 10 ನೇ ತರಗತಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು.
ಈತನ ಪ್ರತಿಭೆಯನ್ನು ಗಮನಿಸಿದ ಶಿಕ್ಷಣ ಮಂಡಳಿಯೂ ಇದಕ್ಕೆ ಅವಕಾಶ ನೀಡಿದ್ದು, ಇದೀಗ ಈ ಪುಟ್ಟ ಬಾಲಕ ತನ್ನ 9 ನೇ ವಯಸ್ಸಿನಲ್ಲಿಯೇ 10 ನೇ ತರಗತಿ ಪರೀಕ್ಷೆಯನ್ನು ಪಾಸ್ ಮಾಡುವ ಮೂಲಕ ಅದ್ವೀತಿಯ ಸಾಧನೆ ಮಾಡಿದ್ದಾನೆ. ಗಣಿತ ಹಾಗೂ ಭಾಷಾ ಶಾಸ್ತ್ರದಲ್ಲಿ ಅತೀವ ಆಸಕ್ತಿ ಹೊಂದಿರುವ ಬಾಲಕನಿಗೆ ಒತ್ತಾಸೆಯಾಗಿ ನಿಂತಿರುವ ಪೋಷಕರು ಅದಕ್ಕಾಗಿ ಮನೆಯಲ್ಲಿಯೇ ಸೂಕ್ತ ತರಬೇತಿ ನೀಡುತ್ತಿದ್ದಾರೆ.
Comments
Post a Comment