1129 posts callformed by UPSC
ಕೇಂದ್ರ ಲೋಕಸೇವಾ
ಆಯೋಗ (ಯುಪಿಎಸ್ಸಿ) 2015ನೇ ಸಾಲಿನ ಸಿವಿಲ್
ಸರ್ವೀಸ್ ಮತ್ತು ಭಾರತೀಯ ಅರಣ್ಯ ಸೇವೆ(ಐಎಫ್ಎಸ್)
ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 1129
ಸ್ಥಾನಗಳ ಭರ್ತಿಗಾಗಿ ಪರೀಕ್ಷೆ ನಡೆಸಲಾಗುತ್ತದೆ.
ನಾಗರಿಕ ಸೇವಾ ಪ್ರಿಲಿಮ್ಸ ಪರೀಕ್ಷೆಯಲ್ಲಿ ಸಿವಿಲ್
ಸರ್ವೀಸ್ ಆಪ್ಟಿಟ್ಯೂಡ್ ಟೆಸ್ಟ್(ಸಿಸ್ಯಾಟ್)
ಮುಂದುವರಿಸಲಾಗುವುದು ಹಾಗೂ ಉತ್ತೀರ್ಣವಾಗಲು ಶೇ.33
ಅಂಕಗಳನ್ನು ಪಡೆಯಬೇಕೆಂದು ಸರ್ಕಾರ ಮೇ
13ರಂದು ಪ್ರಕಟಣೆ ಹೊರಡಿಸಿತ್ತು.
2011ರಲ್ಲಿ ಪ್ರಿಲಿಮ್ಸ್ ಪರೀಕ್ಷೆ ಬರೆದಿದ್ದವರಿಗೆ
ಮತ್ತೊಂದು ಅವಕಾಶ ನೀಡಲಾಗಿದೆ.
ಸಿಸ್ಯಾಟ್ಗೆ ಸಂಬಂಧಿಸಿದಂತೆ ಉಂಟಾದ
ಗೊಂದಲಗಳ ಕಾರಣದಿಂದಾಗಿ ಮೇ
16ರಂದು ಪ್ರಕಟವಾಗಬೇಕಿದ್ದ ಪರೀಕ್ಷಾ
ಪ್ರಕಟಣೆಯನ್ನು ಕೊನೆಯ ಕ್ಷಣದಲ್ಲಿ
ಮುಂದೂಡಲಾಗಿತ್ತು.
ಮೂರು ಹಂತಗಳಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ
ನಡೆಸಲಾಗುತ್ತದೆ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ
ಸಂದರ್ಶನಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ
ಆಧಾರದ ಮೇಲೆ ರ್ಯಾಂಕಿಂಗ್ ಪಟ್ಟಿ
ಸಿದ್ಧಪಡಿಸಲಾಗುತ್ತದೆ. ಈ ಮೂಲಕ ಐಎಎಸ್, ಐಪಿಎಸ್, ಐಎಫ್ಎಸ್ ಹಾಗೂ
ಇತರೆ ಸೇವೆಗಳ ಸ್ಥಾನಗಳಿಗೆ ನೇಮಕಾತಿ ನಡೆಯುತ್ತದೆ.
***
ಒಟ್ಟು ಸ್ಥಾನ: 1129
ಅರ್ಜಿ ಸಲ್ಲಿಕೆಗೆ ಕೊನೇ ದಿನ: ಜೂನ್ 19
ಪ್ರಿಲಿಮ್ಸ್ ಪರೀಕ್ಷೆ: ಆಗಸ್ಟ್ 23
ವೆಬ್ಸೈಟ್: www.upsc.gov.in
***
ಅರ್ಜಿ ಶುಲ್ಕ
- ಸಾಮಾನ್ಯ ವರ್ಗದ ಪುರುಷ ಅಭ್ಯರ್ಥಿಗಳಿಗೆ 100 ರೂ. ಹಾಗೂ
ಓಬಿಸಿ ವರ್ಗದ ಪುರುಷ ಅಭ್ಯರ್ಥಿಗಳಿಗೆ 200 ರೂ.
- ಮಹಿಳೆಯರು/ ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ
ಶುಲ್ಕ ರಿಯಾಯಿತಿ.
***
ವಯೋಮಿತಿ
- ಕನಿಷ್ಠ 21 ವರ್ಷ ಹಾಗೂ ಗರಿಷ್ಠ 32 ವರ್ಷ (6 ಪ್ರಯತ್ನ)
- ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ
ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ (9 ಪ್ರಯತ್ನ) ಹಾಗೂ
ಅಂಗವಿಕಲರಿಗೆ 10 ವರ್ಷ ಸಡಿಲಿಕೆ
***
ವಿದ್ಯಾರ್ಹತೆ
- ಅಂಗೀಕೃತ ವಿಶ್ವವಿದ್ಯಾಲಯದಿಂದ
ಯಾವುದೇ ವಿಷಯದಲ್ಲಿ ಪದವಿ
- ಕೊನೆಯ ಸೆಮಿಸ್ಟರ್ನಲ್ಲಿರುವ ವಿದ್ಯಾರ್ಥಿಗಳಿಗೂ
ಅರ್ಜಿ ಸಲ್ಲಿಕೆ ಅವಕಾಶ
- ಎಂಬಿಬಿಎಸ್ ಅಭ್ಯರ್ಥಿಗಳು ಸಂದರ್ಶನಕ್ಕೂ ಮುನ್ನ
ಇಂಟರ್ನ್ಶಿಪ್ ಮುಗಿಸಿರಬೇಕು.
***
ಅರ್ಜಿ ಸಲ್ಲಿಕೆ
ಅರ್ಹ ಅಭ್ಯರ್ಥಿಗಳು www.upsconline.nic.in
ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
***
ಪ್ರಿಲಿಮ್ಸ್ ಪರೀಕ್ಷೆ (400 ಅಂಕ)
ಆಗಸ್ಟ್ 23ರಂದು ಪೂರ್ವಭಾವಿ ಪರೀಕ್ಷೆಗಳು
ನಡೆಯಲಿವೆ. 200 ಅಂಕಗಳ ಬಹು ಆಯ್ಕೆ ಮಾದರಿಯ
ಎರಡು ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳಿರುತ್ತವೆ (ಸಾಮಾನ್ಯ
ಅಧ್ಯಯನ ಮತ್ತು ಸಿಸ್ಯಾಟ್). ತಪ್ಪು ಉತ್ತರಕ್ಕೆ ಶೇ.0.33
ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
***
ಮುಖ್ಯ ಪರೀಕ್ಷೆ (2025 ಅಂಕ)
250 ಅಂಕಗಳಿಗೆ ಇಂಗ್ಲಿಷ್ ಪತ್ರಿಕೆಯಿದ್ದು, ತೇರ್ಗಡೆಗೆ
ಶೇ.25 ಅಂಕಗಳನ್ನು ಪಡೆಯಬೇಕಿರುತ್ತದೆ. ಆದರೆ ಒಟ್ಟು
ಅಂಕಗಳಲ್ಲಿ ಈ ಪತ್ರಿಕೆಯ ಅಂಕಗಳನ್ನು
ಪರಿಗಣಿಸಲಾಗುವುದಿಲ್ಲ. 250 ಅಂಕಗಳ ನಾಲ್ಕು ಸಾಮಾನ್ಯ
ಅಧ್ಯಯನ ಪತ್ರಿಕೆ ಹಾಗೂ 500 ಅಂಕಗಳಿಗೆ ಐಚ್ಛಿಕ
ವಿಷಯಗಳ ಪರೀಕ್ಷೆ ನಡೆಯುತ್ತದೆ. ಸಂದರ್ಶನ/
ವ್ಯಕ್ತಿತ್ವ ಪರೀಕ್ಷೆಯನ್ನು 275 ಅಂಕಗಳಿಗೆ
ನಡೆಸಲಾಗುತ್ತದೆ. ಒಟ್ಟು 2025 ಅಂಕಗಳಲ್ಲಿ ಗಳಿಸುವ
ಅಂಕಗಳ ಆಧಾರದ ಮೇಲೆ ಅಂತಿಮ
ರ್ಯಾಂಕಿಂಗ್ ಪ್ರಕಟಿಸಲಾಗುತ್ತದೆ.
Comments
Post a Comment