ಪರಿಸರ ಪ್ರಜಾಪ್ರಭುತ್ವ ಸೂಚ್ಯಂಕ: ಭಾರತಕ್ಕೆ 24ನೇ ಸ್ಥಾನ
ವಾಷಿಂಗ್ಟನ್ (ಪಿಟಿಐ): ಪರಿಸರ ಪ್ರಜಾಪ್ರಭುತ್ವ
ಸೂಚ್ಯಂಕದಲ್ಲಿ 70 ರಾಷ್ಟ್ರಗಳ ಪೈಕಿ ಭಾರತ 24ನೇ ಸ್ಥಾನ
ಪಡೆದಿದೆ. ಲಿಥುವಿನಿಯಾ
ಅಗ್ರಸ್ಥಾನದಲ್ಲಿದೆ.
ಪರಿಸರ ಸಂಬಂಧಿತ ನಿರ್ಧಾರಕ ವಿಷಯಗಳಲ್ಲಿ
ಪಾದರ್ಶಕತೆ, ಉತ್ತರದಾಯಿತ್ವ ಹಾಗೂ ನಾಗರಿಕರ
ಪಾಲ್ಗೊಳ್ಳುವಿಕೆ ಉತ್ತೇಜಿಸುವ
ಕಾಯ್ದೆಗಳ ಅನುಷ್ಠಾನದಲ್ಲಿನ ರಾಷ್ಟ್ರಗಳ
ಪ್ರಗತಿಯನ್ನು ಮೌಲ್ಯಮಾಪನ ಮಾಡಿದೆ.
ವಾಷಿಂಗ್ಟನ್ ಮೂಲದ ವರ್ಲ್ಡ್ ರಿಸೋರ್ಸಿಸ್ ಇನ್ಸ್ಟಿಟ್ಯೂಟ್
(ಡಬ್ಲ್ಯುಆರ್ಐ) ಹಾಗೂ ಎಕ್ಸೆಸ್ ಇನಿಶಿಯೇಷಿಟಿವ್ ಈ
ಪಟ್ಟಿ ಬಿಡುಗಡೆಗೊಳಿಸಿದೆ.
ಅಮೆರಿಕ, ದಕ್ಷಿಣ ಆಫ್ರಿಕಾ ಹಾಗು
ಇಂಗ್ಲೆಂಡ್ ಮೊದಲ
ಹತ್ತರಲ್ಲಿ ಸ್ಥಾನ ಪಡೆದಿವೆ.
70 ರಾಷ್ಟ್ರಗಳಲ್ಲಿ ಪರಿಸರ ಪ್ರಜಾಪ್ರಭುತ್ವವು 75 ಕಾನೂನು ಬದ್ಧ
ಹಾಗೂ 24 ಅಭ್ಯಾಸ ಸೂಚನೆಗಳು ಸೇರಿದಂತೆ
ಅಂತರರಾಷ್ಟ್ರೀಯ ಗುಣಮಟ್ಟಗಳಿಗೆ
ಅನುಗುಣವಾಗಿದೆ ಎಂದು ವರದಿ ತಿಳಿಸಿದೆ.
ಅಲ್ಲದೇ, ಶೇಕಡ 93ರಷ್ಟು ರಾಷ್ಟ್ರಗಳು ಪರಿಸರ ಮಾಹಿತಿ ಹಕ್ಕಿನ
ಅವಕಾಶ ಕಲ್ಪಿಸಿವೆ
Comments
Post a Comment