ಗದಗದಲ್ಲೊಂದು ಮಾದರಿ ಗ್ರಾಮ(ಹುಲಕೋಟಿ) : 40
ವರ್ಷದಿಂದ ಚುನಾವಣೆಯನ್ನೇ ಕಂಡಿಲ್ಲ ಈ
ಗ್ರಾಮ ಪಂಚಾಯತ್..
ಗದಗ (ಮೇ 26) : ನಾಲ್ಕು ದಶಕಗಳಿಂದ ಆ
ಗ್ರಾಮ ಚುನಾವಣೆಯನ್ನೇ ಕಂಡಿಲ್ಲ.. ಅಲ್ಲಿ
ಈಗಲೂ ಪ್ರಭಾವಿಗಳ ಮಾತೇ ವೇದವಾಕ್ಯ..
ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಗ್ರಾಮ
ಈಗ ರಾಜ್ಯದಲ್ಲೇ ಮಾದರಿ ಗ್ರಾಮವಾಗ್ತಾ
ಇದೆ.. ಅದ್ಯಾವ ಗ್ರಾಮ ಅಂತಿರಾ..? ಹಾಗಾದ್ರೆ
ಈ ಸ್ಟೋರಿ ನೋಡಿ...
ಇದು ಗದಗ ತಾಲೂಕಿನ ಹುಲಕೋಟಿ ಗ್ರಾಮ..
ಇಲ್ಲಿ ಮಂಡಲ ಪಂಚಾಯತ್'ನಿಂದ ಹಿಡಿದು ಇಂದಿನ
ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆವರೆಗೂ
ಯಾವುದೇ ಚುನಾವಣೆ ನಡೆದಿಲ್ಲ. ಈ ಗ್ರಾಮ
ಪಂಚಾಯತ್ 28 ಸದಸ್ಯರನ್ನ ಒಳಗೊಂಡಿದೆ. 26
ಜನ ಸದಸ್ಯರು ಈಗಾಗಲೇ ಅವಿರೋಧವಾಗಿ
ಆಯ್ಕೆಯಾಗಿದ್ದು, ಈ ಬಾರಿ ಕೇವಲ ಎರಡು
ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದೆ. ಅದು
ರಾಜಿ ಸಂಧಾನ ಮಾಡುವ ಮೂಲಕ ಅವಿರೋಧ
ಆಯ್ಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ.
ಹುಲಕೋಟಿ ಹುಲಿ ಎಂದು ಹೆಸರು
ವಾಸಿಯಾದ ದಿವಂಗತ ಕೆ.ಹೆಚ್. ಪಾಟೀಲರಿಂದ
ಈಗಿನ ಸಚಿವ ಹೆಚ್.ಕೆ. ಪಾಟೀಲ ಹಾಗೂ ಡಿ.ಆರ್.
ಪಾಟೀಲರ ಮಾತು ಈ ಗ್ರಾಮದಲ್ಲಿ
ವೇದವಾಕ್ಯ.. ಅವರ ಮಾತನ್ನ ಯಾರು ತಳ್ಳಿ
ಹಾಕುವಂತಿಲ್ಲ. ಯಾರ ಹೆಸರನ್ನ
ಸೂಚಿಸ್ತಾರೋ ಅವರೇ ಅಧ್ಯಕ್ಷ ಹಾಗೂ
ಸದಸ್ಯರಾಗಬೇಕು. ಜೊತೆಗೆ ಯಾರಿಗೂ
ಅನ್ಯಾಯವಾಗದಂತೆ ಎಲ್ಲಾ ಜಾತಿ
ಧರ್ಮದಿಂದಲೂ ಒಬ್ಬೊಬ್ಬ ಸದಸ್ಯರನ್ನ ಆಯ್ಕೆ
ಮಾಡಿ ಸರಿಸಮಾನವಾದ ಅವಕಾಶ ನೀಡ್ತಾ
ಬಂದಿದ್ದಾರೆ.
ಈ ಗ್ರಾಮದಲ್ಲಿ ಬಹುತೇಕ ಎಮ್.ಎಲ್.ಎ ಹಾಗೂ
ಎಂಪಿ ಚುನಾವಣೆ ಬಿಟ್ಟರೆ ಮತ್ಯಾವ ಚುನಾವಣೆ
ಈ ಗ್ರಾಮದವರಿಗೆ ಗೊತ್ತಿಲ್ಲ. ಚುನಾವಣೆಗೆ
ಸಂಬಂಧಿಸಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್
ಪ್ರದರ್ಶನಕ್ಕೆ ಈ ಗ್ರಾಮದಲ್ಲಿ ಅವಕಾಶವಿಲ್ಲ.
ಒಟ್ಟಿನಲ್ಲಿ ರಾಜ್ಯದಲ್ಲೇ ಈ ಗ್ರಾಮಸ್ಥರು
ವಿಭಿನ್ನವಾದ ಹೊಸ ದಾಖಲೆ ಬರೆಯಲು
ಮುಂದಾಗಿದ್ದಾರೆ.
Comments
Post a Comment