ಪೇಸ್ಗೆ 700ನೇ ಜಯದ ಮಾಲೆ, ಫೆಡರರ್ 100ನೇ ಜತೆಗಾರ?
Published: 29 May 2015 11:13 AM IST
ಲಿಯಾಂಡರ್ ಪೇಸ್
ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈಗ
ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಅಲ್ಲದೆ
ಮತ್ತೊಂದು ಸಾಧನೆಯತ್ತ ಗಮನ ಹರಿಸಿದ್ದಾರೆ.
ಸುದೀರ್ಘ 25 ವರ್ಷಗಳ ವೃತ್ತಿ ಜೀವನದಲ್ಲಿ
ಪೇಸ್ 700ನೇ ಜಯ ಸಂಪಾದಿಸಿದ್ದಾರೆ. ಈವರೆಗೆ 99
ಜತೆಗಾರರೊಂದಿಗೆ ಆಡಿರುವ ಪೇಸ್ಗೆ 100ನೇ
ಜತೆಗಾರ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಿಸಿದೆ.
ಬುಧವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ
ಡಬಲ್ಸ್ ವಿಭಾದ ಮೊದಲ ಸುತ್ತಿನ
ಪಂದ್ಯದಲ್ಲಿ ಪೇಸ್ ತಮ್ಮ 99ನೇ ಜತೆಗಾರ ಡೇನಿಯಲ್
ನೆಸ್ಟರ್ ಜತೆಗೆ, ಗೆಲವು ದಾಖಲಿಸಿದ್ದು ಅವರ ಡಬಲ್ಸ್
ವೃತ್ತಿಜೀವನದ 700ನೇ ಗೆಲುವಾಗಿತ್ತು.
ಇದೀಗ 100ನೇ ಜತೆಗಾರ ಯಾರಾಗುವರು ಎಂಬ ಚರ್ಚೆ
ಆರಂಭವಾಗಿದೆ. ಇದೇ ವೇಳೆ, ಪೇಸ್ ಅವರು ರೋಜರ್ ಫೆಡರರ್ 100ನೇ
ಜತೆಗಾರನಾಗಲಿದ್ದಾರೆ ಎಂಬ ಗಾಳಿಸುದ್ದಿಯಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೇಸ್, ಸದ್ಯಕ್ಕೆ
ಡೇನಿಯಲ್ ಜತೆಗಾರ. ಇನ್ನಷ್ಟು ದಿನಗಳ ಕಾಲ ಅವರ ಜತೆಯಲ್ಲಿರುವ
ಎಂದಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ. 100 ಹಾಗೂ 101ನೇ
ಸಂಖ್ಯೆ ವಿಶೇಷವಾಗಿರುವುದರಿಂದ ಸೂಕ್ತ
ಜೊತೆಗಾರ ಯಾರು ಎಂಬುದನ್ನು ಇನ್ನೂ
ನಿರ್ಧರಿಸಿಲ್ಲ ಎಂದು ಪೇಸ್ ತಿಳಿಸಿದ್ದಾರೆ.
Posted by: Vishwanath S | Source: Online Desk
Comments
Post a Comment