ಮಹಸೀರ್ ಮೀನು ಸಂರಕ್ಷಣೆಗೆ ಟಾಟಾದಿಂದ "ACT FOR MAHSEER" ಯೋಜನೆ
On May 17, 2015 4:24 PM, wrote:
>
>
> ಬೆಂಗಳೂರು, ಮೇ.17: ಅಳಿವಿನಂಚಿನಲ್ಲಿರುವ
> ಮಹಸೀರ್ ಪ್ರಭೇದದ ಮೀನುಗಳನ್ನು
> ಸಂರಕ್ಷಿಸಲು ದೇಶದ ಅತಿ ದೊಡ್ಡ ಪವರ್
> ಕಂಪನಿಯಾದ ಟಾಟಾ ಪವರ್ ದೇಶಾದ್ಯಂತ 'ಆಕ್ಟ್ ಫಾರ್
> ಮಹಸೀರ್' ಎಂಬ ಸುಸ್ಥಿರ ಸಂರಕ್ಷಣಾ
> ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. 'ಆಕ್ಟ್
> ಫಾರ್ ಮಹಸೀರ್' ಯೋಜನೆ ಬಗ್ಗೆ ಸಂಪೂರ್ಣ ವಿವರ
> ಇಲ್ಲಿದೆ. ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ
> ಕ್ರಾಸ್ ಕಾದಂಬರಿ ಓದಿದವರಿಗೆ ಮಹಸೀರ್
> ಮೀನುಗಳು ಬಗ್ಗೆ ನೆನಪಿರುತ್ತದೆ. ಈ ವಿಶಿಷ್ಟ ಪ್ರಬೇಧ
> ಉಳಿಸಲು ಟಾಟಾ ಕಳೆದ 6 ದಶಕಗಳಿಂದ ಯೋಜನೆ
> ರೂಪಿಸಿಕೊಂಡು ಬಂದಿದೆ.
> ಈಗ ಇದು ರಾಷ್ಟ್ರವ್ಯಾಪ್ತಿ ಆಂದೋಲನವಾಗಿ ಬೆಳೆಯುತ್ತಿದೆ.
> 'ಪರಿಸರ ಕಾಳಜಿ' ಮತ್ತು 'ಸಮುದಾಯ ಕಾಳಜಿ' ಯಲ್ಲಿ
> ನಂಬಿಕೆಯಿರಿಸಿರುವ ಕಂಪೆನಿಯು ಮಹಸೀರ್
> ಪ್ರಭೇದವನ್ನು ಸಂರಕ್ಷಿಸಲು ಮುಂದಾಗಿದೆ. 'ಆಕ್ಟ್ ಫಾರ್
> ಮಹಸೀರ್' ಉದ್ದೇಶ: ಈ ಯೋಜನೆಯ ಮೂಲಕ ಈ
> ಪ್ರಭೇದದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ದೇಶಾದ್ಯಂತ
> ದೊಡ್ಡ ಪ್ರಮಾಣದಲ್ಲಿ ಸಂರಕ್ಷಣಾ
> ಕಾರ್ಯವನ್ನು ಕೈಗೊಳ್ಳುವುದು ಕಂಪೆನಿ ಉದ್ದೇಶ.
> * ಜನರಲ್ಲಿ ಜಾಗೃತಿ ಮೂಡಿಸುವುದು, ಅವರನ್ನು
> ತೊಡಗಿಸಿಕೊಳ್ಳುವುದು ಮತ್ತು
> ಮಹಸೀರ್ ಪ್ರಿಯರನ್ನು ಸಶಕ್ತಗೊಳಿಸುವುದು
> ಎಂಬ ಮೂರು ರೀತಿಯ ಕಾರ್ಯಕ್ರಮಗಳ ಮೂಲಕ ಈ
> ಯೋಜನೆಯನ್ನು ಕಾರ್ಯಗತಗೊಳಿಸಲು
> ತೀರ್ಮಾನಿಸಲಾಗಿದೆ.
> * ಜಾಗೃತಿ ಮೂಡಿಸುವ ಹಂತದಲ್ಲಿ ಮಹಸೀರ್ ಗಳ ಕುರಿತು
> ಮೈಕ್ರೋಸೈಟ್ ಆರಂಭಿಸಲಾಗುವುದು ಮತ್ತು ಮಹಸೀರ್
> ಪ್ರವಾಸಿ ಕಥನಗಳ ಸರಣಿಯನ್ನು ಯೋಜಿಸಲಾಗಿದೆ.
> * ಜನರು ಪಾಲ್ಗೊಳ್ಳುವಂತೆ ಮಾಡಲು
> ಇಂಟರಾಕ್ಟಿವ್ ಚಟುವಟಿಕೆಗಳು ಉದಾಹರಣೆಗೆ ಗೇಮಿಂಗ್
> ಅಪ್ಲಿಕೇಶನ್ ಮತ್ತು ಮಹಸೀರ್ ಸಂರಕ್ಷಣಾ
> ದಿನಾಚರಣೆಯನ್ನು ಆಚರಿಸಲು ಉದ್ದೇಶಿಸಲಾಗಿದೆ.
> * ಈ ಕಾರ್ಯದಲ್ಲಿ ಆಸಕ್ತಿ ಇರುವವರನ್ನು ಬಲಪಡಿಸಲು ದೇಣಿಗೆ
> ಸಂಗ್ರಹಣೆ, ಆವಾಸಸ್ಥಾನ ದತ್ತು ಪಡೆಯುವುದು ಮತ್ತು ಜಾಗೃತಿ
> ಜಾಥಾಗಳನ್ನು ಹಮ್ಮಿಕೊಳ್ಳಲಾಗುವುದು.
> * ಅಳಿವಿನಂಚಿನಲ್ಲಿರುವ ಈ ಪ್ರಭೇದವನ್ನು ಸಂರಕ್ಷಿಸುವ
> ಈ ಕಾರ್ಯದಲ್ಲಿ ಟಾಟಾ ಪವರ್ ನ ಉದ್ಯೊಗಿಗಳು,
> ಗ್ರಾಹಕರು ಮತ್ತು ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
> ಮಹಸೀರ್ ಸಂರಕ್ಷಣಾ ಅಭಿಯಾನ
> ಆರಂಭಗೊಂಡಿದ್ದು ಹೇಗೆ?:
> ಮಹಸೀರ್ ಮೀನುಗಳ ಸಂತತಿಯು ಗಾಬರಿ
> ಹುಟ್ಟಿಸುವ ರೀತಿಯಲ್ಲಿ ಕಡಿಮೆಯಾಗುತ್ತಿರುವುದನ್ನು
> ಗಮನಿಸಿದ ಟಾಟಾ ಪವರ್ 1975 ರಲ್ಲಿ ಮಹಸೀರ್
> ಸಂರಕ್ಷಣಾ ಯೊಜನೆಯನ್ನು ಆರಂಭಿಸಿತು
> ತನ್ನ ಕೆರೆ ಪರಿಸರಗಳ ಪುನರುಜ್ಜೀವನ ಮತ್ತು ಅಭಿವೃದ್ಧಿ
> ಯೋಜನೆಯ ಭಾಗವಾಗಿ ಲೋನಾವಳದಲ್ಲಿ ಮಹಸೀರ್ ತಳಿ
> ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿತು. ಇಲ್ಲಿಯರೆಗೆ
> ಕಂಪೆನಿಯು 10 ಮಿಲಿಯನ್ ಗೂ ಹೆಚ್ಚು ಮಹಸೀರ್
> ಮೀನುಗಳನ್ನು ಉತ್ಪಾದಿಸಿ ದೇಶಾದ್ಯಂತ ಇರುವ
> ನೀರಿನ ಮೂಲಗಳಲ್ಲಿ ಮರುಹಂಚಿಕೆ ಮಾಡಿದೆ.
Comments
Post a Comment