ಮಹಸೀರ್ ಮೀನು ಸಂರಕ್ಷಣೆಗೆ ಟಾಟಾ 'ಪವರ್'ನಿಂದ "ACT FOR MAHSEER" ಯೋಜನೆ


ಬೆಂಗಳೂರು, ಮೇ.17: ಅಳಿವಿನಂಚಿನಲ್ಲಿರುವ
ಮಹಸೀರ್ ಪ್ರಭೇದದ ಮೀನುಗಳನ್ನು
ಸಂರಕ್ಷಿಸಲು ದೇಶದ ಅತಿ ದೊಡ್ಡ ಪವರ್
ಕಂಪನಿಯಾದ ಟಾಟಾ ಪವರ್ ದೇಶಾದ್ಯಂತ 'ಆಕ್ಟ್ ಫಾರ್
ಮಹಸೀರ್' ಎಂಬ ಸುಸ್ಥಿರ ಸಂರಕ್ಷಣಾ
ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. 'ಆಕ್ಟ್
ಫಾರ್ ಮಹಸೀರ್' ಯೋಜನೆ ಬಗ್ಗೆ ಸಂಪೂರ್ಣ ವಿವರ
ಇಲ್ಲಿದೆ. ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ
ಕ್ರಾಸ್ ಕಾದಂಬರಿ ಓದಿದವರಿಗೆ ಮಹಸೀರ್
ಮೀನುಗಳು ಬಗ್ಗೆ ನೆನಪಿರುತ್ತದೆ. ಈ ವಿಶಿಷ್ಟ ಪ್ರಬೇಧ
ಉಳಿಸಲು ಟಾಟಾ ಕಳೆದ 6 ದಶಕಗಳಿಂದ ಯೋಜನೆ
ರೂಪಿಸಿಕೊಂಡು ಬಂದಿದೆ.
ಈಗ ಇದು ರಾಷ್ಟ್ರವ್ಯಾಪ್ತಿ ಆಂದೋಲನವಾಗಿ ಬೆಳೆಯುತ್ತಿದೆ.
'ಪರಿಸರ ಕಾಳಜಿ' ಮತ್ತು 'ಸಮುದಾಯ ಕಾಳಜಿ' ಯಲ್ಲಿ
ನಂಬಿಕೆಯಿರಿಸಿರುವ ಕಂಪೆನಿಯು ಮಹಸೀರ್
ಪ್ರಭೇದವನ್ನು ಸಂರಕ್ಷಿಸಲು ಮುಂದಾಗಿದೆ. 'ಆಕ್ಟ್ ಫಾರ್
ಮಹಸೀರ್' ಉದ್ದೇಶ: ಈ ಯೋಜನೆಯ ಮೂಲಕ ಈ
ಪ್ರಭೇದದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ದೇಶಾದ್ಯಂತ
ದೊಡ್ಡ ಪ್ರಮಾಣದಲ್ಲಿ ಸಂರಕ್ಷಣಾ
ಕಾರ್ಯವನ್ನು ಕೈಗೊಳ್ಳುವುದು ಕಂಪೆನಿ ಉದ್ದೇಶ.
* ಜನರಲ್ಲಿ ಜಾಗೃತಿ ಮೂಡಿಸುವುದು, ಅವರನ್ನು
ತೊಡಗಿಸಿಕೊಳ್ಳುವುದು ಮತ್ತು
ಮಹಸೀರ್ ಪ್ರಿಯರನ್ನು ಸಶಕ್ತಗೊಳಿಸುವುದು
ಎಂಬ ಮೂರು ರೀತಿಯ ಕಾರ್ಯಕ್ರಮಗಳ ಮೂಲಕ ಈ
ಯೋಜನೆಯನ್ನು ಕಾರ್ಯಗತಗೊಳಿಸಲು
ತೀರ್ಮಾನಿಸಲಾಗಿದೆ.
* ಜಾಗೃತಿ ಮೂಡಿಸುವ ಹಂತದಲ್ಲಿ ಮಹಸೀರ್ ಗಳ ಕುರಿತು
ಮೈಕ್ರೋಸೈಟ್ ಆರಂಭಿಸಲಾಗುವುದು ಮತ್ತು ಮಹಸೀರ್
ಪ್ರವಾಸಿ ಕಥನಗಳ ಸರಣಿಯನ್ನು ಯೋಜಿಸಲಾಗಿದೆ.
* ಜನರು ಪಾಲ್ಗೊಳ್ಳುವಂತೆ ಮಾಡಲು
ಇಂಟರಾಕ್ಟಿವ್ ಚಟುವಟಿಕೆಗಳು ಉದಾಹರಣೆಗೆ ಗೇಮಿಂಗ್
ಅಪ್ಲಿಕೇಶನ್ ಮತ್ತು ಮಹಸೀರ್ ಸಂರಕ್ಷಣಾ
ದಿನಾಚರಣೆಯನ್ನು ಆಚರಿಸಲು ಉದ್ದೇಶಿಸಲಾಗಿದೆ.
* ಈ ಕಾರ್ಯದಲ್ಲಿ ಆಸಕ್ತಿ ಇರುವವರನ್ನು ಬಲಪಡಿಸಲು ದೇಣಿಗೆ
ಸಂಗ್ರಹಣೆ, ಆವಾಸಸ್ಥಾನ ದತ್ತು ಪಡೆಯುವುದು ಮತ್ತು ಜಾಗೃತಿ
ಜಾಥಾಗಳನ್ನು ಹಮ್ಮಿಕೊಳ್ಳಲಾಗುವುದು.
* ಅಳಿವಿನಂಚಿನಲ್ಲಿರುವ ಈ ಪ್ರಭೇದವನ್ನು ಸಂರಕ್ಷಿಸುವ
ಈ ಕಾರ್ಯದಲ್ಲಿ ಟಾಟಾ ಪವರ್ ನ ಉದ್ಯೊಗಿಗಳು,
ಗ್ರಾಹಕರು ಮತ್ತು ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
ಮಹಸೀರ್ ಸಂರಕ್ಷಣಾ ಅಭಿಯಾನ
ಆರಂಭಗೊಂಡಿದ್ದು ಹೇಗೆ?:
ಮಹಸೀರ್ ಮೀನುಗಳ ಸಂತತಿಯು ಗಾಬರಿ
ಹುಟ್ಟಿಸುವ ರೀತಿಯಲ್ಲಿ ಕಡಿಮೆಯಾಗುತ್ತಿರುವುದನ್ನು
ಗಮನಿಸಿದ ಟಾಟಾ ಪವರ್ 1975 ರಲ್ಲಿ ಮಹಸೀರ್
ಸಂರಕ್ಷಣಾ ಯೊಜನೆಯನ್ನು ಆರಂಭಿಸಿತು
ತನ್ನ ಕೆರೆ ಪರಿಸರಗಳ ಪುನರುಜ್ಜೀವನ ಮತ್ತು ಅಭಿವೃದ್ಧಿ
ಯೋಜನೆಯ ಭಾಗವಾಗಿ ಲೋನಾವಳದಲ್ಲಿ ಮಹಸೀರ್ ತಳಿ
ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿತು. ಇಲ್ಲಿಯರೆಗೆ
ಕಂಪೆನಿಯು 10 ಮಿಲಿಯನ್ ಗೂ ಹೆಚ್ಚು ಮಹಸೀರ್
ಮೀನುಗಳನ್ನು ಉತ್ಪಾದಿಸಿ ದೇಶಾದ್ಯಂತ ಇರುವ
ನೀರಿನ ಮೂಲಗಳಲ್ಲಿ ಮರುಹಂಚಿಕೆ ಮಾಡಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು