ಮೊರಾರ್ಜಿ ಶಾಲೆ ನೇಮಕಾತಿ: ದಾಖಲೆಗಳ ಪರಿಶೀಲನೆ ಕಾಟ ಶಿಕ್ಷಕರಿಗೆ ಕೃಪಾಂಕ ಭಾಗ್ಯ ಇಲ್ಲ!

ಮೊರಾರ್ಜಿ ಶಾಲೆ ನೇಮಕಾತಿ: ದಾಖಲೆಗಳ ಪರಿಶೀಲನೆ ಕಾಟ

ಶಿಕ್ಷಕರಿಗೆ ಕೃಪಾಂಕ ಭಾಗ್ಯ ಇಲ್ಲ! (PSGadyal Teacher)

ಬೆಂಗಳೂರು: ಗುತ್ತಿಗೆ ಆಧಾರದ ಶಿಕ್ಷಕರಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನೇಮಕಾತಿಯಲ್ಲಿ ಕೃಪಾಂಕ ಕೊಡುವಂತೆ  ರಾಜ್ಯ ಹೈಕೋರ್ಟ್‌ 2013ರಲ್ಲೇ ಆದೇಶ ನೀಡಿದ್ದರೂ, ಶಿಕ್ಷಕರಿಗೆ ಇನ್ನೂ 'ನೇಮಕ ಭಾಗ್ಯ' ದೊರೆತಿಲ್ಲ.
ಈಗ ನಡೆಯುತ್ತಿರುವ ದಾಖಲೆಗಳ ಪರಿಶೀಲನೆ ವೇಳೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಧಿಕಾರಿಗಳು, 'ನಮ್ಮಿಂದ ಒದಗಿ
ಸಲು ಸಾಧ್ಯವಾಗದ ದಾಖಲೆಗಳನ್ನು ಕೇಳುತ್ತಿದ್ದಾರೆ' ಎಂದು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕೆಲವು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಮೊರಾರ್ಜಿ ದೇಸಾಯಿ ಶಾಲೆಗಳು ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿವೆ. ಈ ಸಂಸ್ಥೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಸೇರಿದೆ. 'ಹೈಕೋರ್ಟ್‌ ಆದೇಶವನ್ನು ಸಂಸ್ಥೆ ಈಗ ಅನುಷ್ಠಾನಕ್ಕೆ ತರುತ್ತಿದೆ. ದಾಖಲೆಗಳ ಪರಿಶೀಲನೆ ಆರಂಭಿಸಿದೆ. ಆದರೆ ಹೈಕೋರ್ಟ್‌ ಆದೇಶ ಪಾಲಿಸಿದಂತೆಯೂ ಆಗಬೇಕು, ನಮಗೆ ಕಾಯಂ ಕೆಲಸ ಸಿಗದಂತೆಯೂ ಆಗಬೇಕು ಎಂಬಂತಿದೆ ಅಧಿಕಾರಿಗಳ ಧೋರಣೆ' ಎಂದು ಶಿಕ್ಷಕರೊಬ್ಬರು ದೂರಿದರು.
'ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಇಡಿ ಮತ್ತಿತರ ಅಂಕಪಟ್ಟಿಗಳನ್ನು ಗುತ್ತಿಗೆ ಆಧಾರದಲ್ಲಿರುವ ಶಿಕ್ಷಕರು ಹಾಜರುಪಡಿಸಬಹುದು. ಆದರೆ ನಮ್ಮನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಸಂದರ್ಭದಲ್ಲಿ ಹೊರಡಿಸಿದ ಟೆಂಡರ್‌ ಆದೇಶದ ಪ್ರತಿ ಕೇಳುತ್ತಿದ್ದಾರೆ. ಅದನ್ನು ಎಲ್ಲಿಂದ ತರುವುದು?' ಎಂದು ಅವರು ಪ್ರಶ್ನಿಸಿದರು.

'ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನೀಡಿದ ನೇಮಕಾತಿ ಆದೇಶದ ಪ್ರತಿ ಬೇಡ, ಹೊರಗುತ್ತಿಗೆ ಏಜೆನ್ಸಿ ನೀಡಿದ ಆದೇಶವೇ ಬೇಕು ಎನ್ನುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಡಬಹುದಾದ ಕೆಲಸವನ್ನು ನಾವು ಮಾಡಲು ಸಾಧ್ಯವೇ?' ಎಂದು ಇನ್ನೊಬ್ಬರು ಅಭ್ಯರ್ಥಿ ಕೇಳಿದರು.
'ನಾವು ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುವಾಗ ಇದ್ದ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ವರ್ಗವಾಗಿರುವ ನಿದರ್ಶನವೂ ಇದೆ. ಹೊಸದಾಗಿ ಬಂದಿರುವ ಅಧಿಕಾರಿಗಳಿಗೆ ಈ ದಾಖಲೆಗಳು ಎಲ್ಲಿವೆ ಎಂಬುದು ಗೊತ್ತಿಲ್ಲ. ನ್ಯಾಯಾಲಯ ನಮ್ಮ ಪರ ಆದೇಶ ನೀಡಿದ್ದರೂ ಕಾಯಂ ಕೆಲಸ ದೊರೆಯುವುದಿಲ್ಲ ಎಂಬ ಆತಂಕ ಕಾಡುತ್ತಿದೆ' ಎಂದರು.

ಕಿರುಕುಳ ಅಲ್ಲ: 'ಶಿಕ್ಷಕರು ಗುತ್ತಿಗೆ ಆಧಾರದಲ್ಲಿ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಕೆಲಸ ಮಾಡಿದ್ದಾರೆ ಎಂಬುದನ್ನು ಖಚಿತ
ಪಡಿಸಿಕೊಳ್ಳಲು ಕೆಲವು ದಾಖಲೆಗಳನ್ನು ಕೇಳಲಾಗುತ್ತಿದೆ. ಇದಲ್ಲದೆ ಬೇರೆ ಉದ್ದೇಶ ಇಲ್ಲ' ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೋರ್ಟ್‌ ಹೇಳಿದ್ದೇನು?

ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕ ಮತ್ತು ಪ್ರಾಂಶುಪಾಲರ ಹುದ್ದೆಗಳಿಗೆ 2011ರ ಜುಲೈನಲ್ಲಿ ಪರೀಕ್ಷೆ ನಡೆಯಿತು. ಆದರೆ ಆ ಸಂದರ್ಭದಲ್ಲಿ ಅಲ್ಲಿ ಗುತ್ತಿಗೆ ಆಧಾರದಲ್ಲಿ ಶಿಕ್ಷಕ ಮತ್ತು ಪ್ರಾಂಶುಪಾಲರ ಹುದ್ದೆಯಲ್ಲಿದ್ದವರಿಗೆ ಕೃಪಾಂಕ ನೀಡಿರಲಿಲ್ಲ.

ಇದನ್ನು ಪ್ರಶ್ನಿಸಿ ಕೆಲವು ಶಿಕ್ಷಕರು ಹೈಕೋರ್ಟ್‌ ಮೆಟ್ಟಿಲೇರಿದರು. ಗುತ್ತಿಗೆ ಆಧಾರದಲ್ಲಿ ಅದಾಗಲೇ ಕೆಲಸ ಮಾಡುತ್ತಿರುವವರಿಗೆ ಕೃಪಾಂಕ ನೀಡುವಂತೆ ಏಕಸದಸ್ಯ ಪೀಠ ಆದೇಶಿಸಿತು. ಇದನ್ನು ಪ್ರಶ್ನಿಸಿ ಸಂಸ್ಥೆ ಮೇಲ್ಮನವಿ ಸಲ್ಲಿಸಿತು. ಮೇಲ್ಮನವಿ ಆಲಿಸಿದ ವಿಭಾಗೀಯ ಪೀಠವು, ಗುತ್ತಿಗೆ ಆಧಾರದವರಿಗೆ ವರ್ಷಕ್ಕೆ ಶೇಕಡ 5ರ ಲೆಕ್ಕದಲ್ಲಿ ಕೃಪಾಂಕ ನೀಡುವಂತೆ ಆದೇಶಿಸಿತು. ಸಂಸ್ಥೆ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. ಸಂಸ್ಥೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿ, ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಪಾಲಿಸುವಂತೆ 2013ರಲ್ಲಿ ಸೂಚಿಸಿದೆ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು