ಬ್ಯಾಡ್ಮಿಂಟನ್: ಅಗ್ರಸ್ಥಾನಕ್ಕೆ ಮರಳಿದ ಸೈನಾ
ಹೈದರಾಬಾದ್ (ಪಿಟಿಐ): ಭಾರತದ ಭರವಸೆಯ ಆಟಗಾರ್ತಿ
ಸೈನಾ ನೆಹ್ವಾಲ್ ಅವರು ವಿಶ್ವ ಬ್ಯಾಡ್ಮಿಂಟನ್
ಫೆಡರೇಷನ್ ಗುರುವಾರ
ಬಿಡುಗಡೆಗೊಳಿಸಿರುವ
ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೆ ಅಗ್ರ
ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಹೈದರಾಬಾದ್ನ ಈ ಆಟಗಾರ್ತಿ ಕಳೆದ ತಿಂಗಳು
ಮೊದಲ ಬಾರಿಗೆ ಅಗ್ರ
ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ
ಅವರ ರ್ಯಾಂಕ್ನಲ್ಲಿ ಕುಸಿತ ಕಂಡಿತ್ತು.
ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ, ಗುರುವಾರ
ಮತ್ತೆ ಮೊದಲ ಸ್ಥಾನಕ್ಕೆ
ಮರಳಿದ್ದಾರೆ. ಕಳೆದ ವಾರ ನಡೆದ
ಸುದೀರಮನ್ ಕಪ್ನಲ್ಲಿ ತೋರಿದ ಉತ್ತಮ ಪ್ರದರ್ಶನ
ಅಗ್ರಸ್ಥಾನಕ್ಕೆ ಮರಳುವಲ್ಲಿ ಸೈನಾ ಅವರಿಗೆ
ನೆರವಾಗಿದೆ. ಇದೇ ತಿಂಗಳ 26ರಿಂದ
ಆಸ್ಟ್ರೇಲಿಯಾ ಓಪನ್ ಟೂರ್ನಿ
ಆರಂಭಗೊಳ್ಳಲಿದ್ದು, ಅಗ್ರಪಟ್ಟವು ಸೈನಾ
ಅವರ ವಿಶ್ವಾಸ ಹೆಚ್ಚಿಸಿದೆ.
ಈ ನಡುವೆ, ಉದಯೋನ್ಮುಖ ಆಟಗಾರ್ತಿ
ಪಿ.ವಿ.ಸಿಂಧು ಅವರು ಒಂದು ಸ್ಥಾನ ಕುಸಿದು 12ನೇ
ಸ್ಥಾನದಲ್ಲಿದ್ದಾರೆ.
ಇನ್ನು, ಪುರುಷರ ವಿಭಾಗದಲ್ಲಿ ಭಾರತದ ಕಿದಂಬಿ
ಶ್ರೀಕಾಂತ್ ನಾಲ್ಕನೇ ಸ್ಥಾನದಲ್ಲಿ
ಮುಂದುವರಿದಿದ್ದಾರೆ.
Comments
Post a Comment