ಆದಿಲ್‌ಗೆ ಸಿಂಗಲ್ಸ್ ಗರಿ
ಆದಿಲ್‌ಗೆ ಸಿಂಗಲ್ಸ್ ಗರಿ
ಬೆಂಗಳೂರು: ಕರ್ನಾಟಕದ ಆದಿಲ್ ಕಲ್ಯಾಣಪುರ ಹೈದರಾಬಾದ್‌ನಲ್ಲಿ ನಡೆದ 16 ವರ್ಷದ ಒಳಗಿನವರ ಎಐಟಿಎ ರಾಷ್ಟ್ರೀಯ ಸರಣಿ ಜೂನಿಯರ್ ಟೆನಿಸ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಶನಿವಾರ ನಡೆದ ಫೈನಲ್ ಹೋರಾಟದಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಆದಿಲ್ 7–5, 6–2ರ ನೇರ ಸೆಟ್‌ಗಳಿಂದ ಅಗ್ರಶ್ರೇಯಾಂಕ ಹೊಂದಿದ್ದ ಆಂಧ್ರಪ್ರದೇಶದ ಶಿವದೀಪ್ ಕೋಸರಾಜು ಅವರನ್ನು ಸೋಲಿಸಿದರು.
ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ ಆಡಿದ ಆದಿಲ್ ಮೊದಲ ಸೆಟ್‌ನಲ್ಲಿ 4–5ರ ಹಿನ್ನಡೆ ಅನುಭವಿಸಿದ್ದರು. ಬಳಿಕ ಚೇತರಿಕೆಯ ಆಟ ಆಡಿದ ಅವರು 10 ಮತ್ತು 12ನೇ ಗೇಮ್‌ಗಳಲ್ಲಿ ಜಯ ಸಾಧಿಸಿ ಸೆಟ್ ತಮ್ಮದಾಗಿಸಿಕೊಂಡರು.
ಎರಡನೇ ಸೆಟ್‌ನಲ್ಲಿ ಮತ್ತಷ್ಟು ವಿಶ್ವಾಸದಿಂದ ಆಡಿದ ರಾಜ್ಯದ ಆಟಗಾರ ಎದುರಾಳಿಯನ್ನು ಸುಲಭವಾಗಿ ಮಣಿಸಿ ಸಂಭ್ರಮಿಸಿದರು.
ಈ ಋತುವಿನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗ ಸೇರಿದಂತೆ ಆದಿಲ್ ಗೆದ್ದ ಎಂಟನೇ ಪ್ರಶಸ್ತಿ ಇದಾಗಿದೆ.
Comments
Post a Comment