ಪಾವಗಡಕ್ಕೆ ಬಂತು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್
Posted by: Gururaj
| Sat, May 30, 2015, 15:45 [IST]
ತುಮಕೂರು, ಮೇ 30 : ಏಷ್ಯಾದ ಅತಿ ದೊಡ್ಡ ಸೋಲಾರ್
ಪಾರ್ಕ್ ತುಮಕೂರು ಜಿಲ್ಲೆ ಪಾವಗಡದಲ್ಲಿ ನಿರ್ಮಾಣ ವಾಗಲಿದೆ. ಸುಮಾರು
10 ಸಾವಿರ ಎಕರೆ ಜಾಗದಲ್ಲಿ ಈ ಪಾರ್ಕ್ ತಲೆ ಎತ್ತಲಿದ್ದು, 2 ಸಾವಿರ
ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ
ಹೊಂದಿದೆ.
ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಪಿ.ರವಿಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ
ಸರ್ಕಾರದ ನೆರವಿನೊಂದಿಗೆ ದೇಶದಾದ್ಯಂತ
25 ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಗಾಗಿ
ಕರ್ನಾಟಕದಲ್ಲಿ ಅತಿಹೆಚ್ಚು ಉಷ್ಣಾಂಶವಿರುವ ಪಾವಗಡ
ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು
ಅವರು ಹೇಳಿದ್ದಾರೆ.
ಈ ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಈಗಾಗಲೇ 10 ಸಾವಿರ ಎಕರೆ
ಪ್ರದೇಶವನ್ನು ಗುರುತಿಸಲಾಗಿದೆ. ಒಟ್ಟು 2 ಸಾವಿರ ಮೆಗಾವ್ಯಾಟ್ ಸೋಲಾರ್
ವಿದ್ಯುತ್ ಉತ್ಪಾದಿಸುವ ಗುರಿಯನ್ನು
ಹೊಂದಲಾಗಿದೆ. ಏಷ್ಯಾದಲ್ಲೇ ಇದು
ದೊಡ್ಡ ಸೌರ ವಿದ್ಯುತ್ ಪಾರ್ಕ್ ಆಗಲಿದೆ ಎಂದು
ರವಿ ಕುಮಾರ್ ವಿವರಣೆ ನೀಡದರು.
ಮಧ್ಯಪ್ರದೇಶದಲ್ಲಿ 750 ಮೆ.ವ್ಯಾ,
ಆಂಧ್ರಪ್ರದೇಶದಲ್ಲಿ 1 ಸಾವಿರ ಮೆ.ವ್ಯಾ. ಸೋಲಾರ್ ಪಾರ್ಕ್ಗಳಿವೆ.
ಇವುಗಳನ್ನು ಹೊರತುಪಡಿಸಿದರೆ ಪಾವಗಡದ 2 ಸಾವಿರ
ಮೆ.ವ್ಯಾ. ಸಾಮರ್ಥ್ಯದ ಪಾರ್ಕ್ ಏಷ್ಯಾಕ್ಕೇ ಪ್ರಥಮವಾಗಲಿದೆ
ಎಂದು ತಿಳಿಸಿದರು.
ಸೌರ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಪ್ರಸ್ತುತ 4ನೇ
ಸ್ಥಾನದಲ್ಲಿದೆ. ರಾಜ್ಯದಲ್ಲಿ ಈಗಾಗಲೇ ನೂತನ ಸೋಲಾರ್
ನೀತಿ ಜಾರಿ ಮಾಡಲಾಗಿದ್ದು, 2 ಸಾವಿರ ಸೌರ ವಿದ್ಯುತ್
ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ
ಎಂದು ಅವರು ಹೇಳಿದರು.
Comments
Post a Comment