ಅಮೆರಿಕದ ಪ್ರತಿಷ್ಠಿತ ಸ್ಪೆಲ್ಲಿಂಗ್ ಬೀ ಸ್ಪರ್ಧೆ ಮೈಸೂರು ಮೂಲದ ವನ್ಯಾ ವಿಜೇತೆ
:
ವಾಷಿಂಗ್ಟನ್ನಲ್ಲಿ ಶುಕ್ರವಾರ ನಡೆದ ಪ್ರತಿಷ್ಠಿತ
'ಸ್ಪೆಲ್ಲಿಂಗ್ ಬೀ' ಅಂತಿಮ ಸ್ಪರ್ಧೆಯಲ್ಲಿ
ವನ್ಯಾ ಶಿವಶಂಕರ್ ಹಾಗೂ ಗೋಕುಲ್ ವೆಂಕಟಾಚಲಂ
ಅವರು 2015ರ ಸ್ಕ್ರಿಪ್ಪ್ಸ್ ರಾಷ್ಟ್ರೀಯ
ಸ್ಪೆಲ್ಲಿಂಗ್ ಬೀ ಟ್ರೋಫಿ
ಪಡೆದುಕೊಂಡರು ಎಎಫ್ಪಿ ಚಿತ್ರ
ವಾಷಿಂಗ್ಟನ್ (ಪಿಟಿಐ): ವಾಷಿಂಗ್ಟನ್ನಲ್ಲಿ ನಡೆದ
ವಿಶ್ವದ ಪ್ರತಿಷ್ಠಿತ 'ಸ್ಪೆಲ್ಲಿಂಗ್ ಬೀ'
ಅಂತಿಮ ಸ್ಪರ್ಧೆಯಲ್ಲಿ ಮೈಸೂರು ಮೂಲದ ವಿದ್ಯಾರ್ಥಿನಿ
ಸೇರಿದಂತೆ ಭಾರತ ಮೂಲದ ಇಬ್ಬರು ಅಮೆರಿಕ ವಿದ್ಯಾರ್ಥಿಗಳು
ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಅಂತಿಮ ಸುತ್ತಿನಲ್ಲಿ ಸಮಾನ ಅಂಕ ಗಳಿಸಿದ 13 ವರ್ಷದ
ವನ್ಯಾ ಶಿವಶಂಕರ್, ಹಾಗೂ 14 ವರ್ಷದ ಗೋಕುಲ್
ವೆಂಕಟಾಚಲಂ ಅವರನ್ನು ಸ್ಕ್ರಿಪ್ಪ್ಸ್
ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ
ಜಯಶಾಲಿಗಳೆಂದು ಘೋಷಿಸಲಾಯಿತು.ಚಿನ್ನದ ಟ್ರೋಫಿಯ ಜತೆ
ಇಬ್ಬರಿಗೂ ತಲಾ 37 ಸಾವಿರ ಡಾಲರ್ (₨ 23.34 ಲಕ್ಷ) ನಗದು
ಬಹುಮಾನ, ಪದಕ ನೀಡಿ ಸನ್ಮಾನಿಸಲಾಯಿತು.
ಒಕ್ಲಾಮಾದಲ್ಲಿ ನೆಲೆಸಿರುವ ಭಾರತ ಮೂಲದ ಕೊಲ್
ಶಫೆರ್ ರೇ ಮೂರನೇ ಸ್ಥಾನ ಪಡೆದಿದ್ದಾರೆ.
ಒಟ್ಟು 18 ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳ ಪೈಕಿ
14ರಲ್ಲಿ ಭಾರತ ಮೂಲದ ವಿದ್ಯಾರ್ಥಿಗಳು ಮೇಲುಗೈ ಸಾಧಿಸುವ ಮೂಲಕ
ತಮ್ಮ ಪಾರಮ್ಯ ಮರೆದಿದ್ದಾರೆ.ವನ್ಯಾ ಶಿವಶಂಕರ್
ಮೂಲತಃ ಮೈಸೂರಿನವರಾಗಿದ್ದು, ಅವರ ಅಕ್ಕ ಕಾವ್ಯಾ ಅವರು
2009ರಲ್ಲಿ ನಡೆದ ಸ್ಪೆಲ್ಲಿಂಗ್ ಬೀ
ಸ್ಪರ್ಧೆಯಲ್ಲಿ ಜಯಗಳಿಸಿ, ಬಹುಮಾನ ಪಡೆದಿದ್ದರು.
'ನನ್ನ ಕನಸು ನಿಜವಾಗಿದೆ. ಈ ಕ್ಷಣವನ್ನು ತುಂಬಾ
ದಿನದಿಂದ ಎದುರು ನೋಡುತ್ತಿದ್ದೆ' ಎಂದು ಕಾನ್ಸಾಸ್ನಲ್ಲಿ
ಎಂಟನೇ ತರಗತಿ ಓದುತ್ತಿರುವ ವನ್ಯಾ ಶಿವಶಂಕರ್
ಹೇಳಿದ್ದಾರೆ. ಅಕ್ಟೋಬರ್ನಲ್ಲಿ ವಿಧಿವಶರಾದ ತನ್ನ ಅಜ್ಜಿಗೆ ಈ
ಪ್ರಶಸ್ತಿಯನ್ನು ಸಮರ್ಪಿಸುವುದಾಗಿ ಅವರು ಹೇಳಿದ್ದಾರೆ. ಮೈಸೂರಿನ
ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ
ಅಮೃತಾನಂದಮಯಿ ಪೀಠದ ಬಳಿ ವನ್ಯಾ ಅಜ್ಜಿ
ಲಕ್ಷ್ಮಿಲತಾ ಗೋವಿಂದಪ್ಪ ವಾಸವಾಗಿದ್ದರು. ಅವರ ತಾಯಿ
ಸಂಧ್ಯಾ 1985ರಲ್ಲಿ ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ
ವಿದ್ಯಾರ್ಥಿನಿಯಾಗಿದ್ದರು.
ಅಮೆರಿಕದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾರತ ಮೂಲದ
ವಿದ್ಯಾರ್ಥಿಗಳು ವಿಜೇತರಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ
ಜನಾಂಗೀಯ ದ್ವೇಷದ ಸಂದೇಶ ಮತ್ತು
ಅಭಿಪ್ರಾಯಗಳು ಹರಿದಾಡತೊಡಗಿವೆ. ಅನಿವಾಸಿ
ಭಾರತೀಯರು ಮೇಲುಗೈ ಸಾಧಿಸುತ್ತಿರುವುದಕ್ಕೆ ಅಲ್ಲಿಯ
ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments
Post a Comment