ವಿಶ್ವದ ದೊಡ್ಡ ಹೋಟೆಲ್ ಮೆಕ್ಕಾದಲ್ಲಿ ನಿರ್ಮಾಣವಾಗಲಿರುವ ‘ಅರ್ಬಾಜ್ ಕುದಾಯ್’ ಹೋಟೆಲ್ ರಿಯಾದ್ (ಸೌದಿ ಅರೇಬಿಯಾ):
ಪವಿತ್ರ ಮೆಕ್ಕಾಗೆ ಬರುವ
ಲಕ್ಷಾಂತರ ಪ್ರವಾ ಸಿಗರ ಅನುಕೂಲಕ್ಕಾಗಿ ಸೌದಿ ಅರೇಬಿಯಾ ಸರ್ಕಾರ
₹22, 300 ಕೋಟಿ ವೆಚ್ಚದಲ್ಲಿ ವಿಶ್ವದಲ್ಲಿಯೇ
ಅತಿದೊಡ್ಡ ಹೋಟೆಲ್ ನಿರ್ಮಿಸಲು ಮುಂದಡಿ
ಇಟ್ಟಿದೆ.
4 ಹೆಲಿಪ್ಯಾಡ್, 10 ಸಾವಿರ ಕೊಠಡಿ, 70
ರೆಸ್ಟೋರೆಂಟ್ ಉಳ್ಳ 'ಅರ್ಬಾಜ್ ಕುದಾಯ್' ಹೋಟೆಲ್ ನಿರ್ಮಾಣ
ಕಾರ್ಯವು ಮೆಕ್ಕಾದಲ್ಲಿ ಆರಂಭವಾಗಿದ್ದು, 2017ರ ಸುಮಾರಿಗೆ
ಬಳಕೆಗೆ ಸಿಗುವ ಅಂದಾಜು ಇದೆ. ವಿಶ್ವದ ಅತ್ಯಂತ
ಎತ್ತರದ ಕಟ್ಟಡಗಳ ಪೈಕಿ ಮೊದಲನೇ
ಸ್ಥಾನದಲ್ಲಿರುವ ಬುರ್ಜ್ ಖಲೀಫಾವನ್ನು ಈ ಹೋಟೆಲ್
ಮೀರಿಸಲಿರುವುದು ಇದರ ವಿಶೇಷ.
14 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿ
ನಿರ್ಮಾಣವಾಗಲಿರುವ ಈ ಹೋಟೆಲ್ನಲ್ಲಿ 44 ಅಂತಸ್ತುಗಳು ಇದ್ದು,
12 ಗೋಪುರಗಳನ್ನು ಒಳಗೊಳ್ಳಲಿದೆ. ಸೌದಿಯ
ರಾಜಮನೆತನಕ್ಕಾಗಿಯೇ ವಿಶೇಷ ಕೊಠಡಿಗಳನ್ನು
ವಿನ್ಯಾಸ ಮಾಡಲಾಗುತ್ತಿದ್ದು, ಪ್ರಧಾನ ಗೋಪುರದ ಗುಮ್ಮಟವು
ವಿಶ್ವದಲ್ಲಿಯೇ ದೊಡ್ಡದು ಎನ್ನಲಾಗುತ್ತಿದೆ.
ಇದು ಕೇವಲ ಹೋಟೆಲ್ಗೆ ಮಾತ್ರ ಸೀಮಿತವಾಗಿಲ್ಲ. ವಿಶಾಲ
ವೇದಿಕೆ ಒಳ ಗೊಂಡ ವಾಣಿಜ್ಯ
ಸಂಕೀರ್ಣ, ಬಸ್ ನಿಲ್ದಾಣ, ಶಾಪಿಂಗ್ ಮಾಲ್ ಹಾಗೂ
ಪುಡ್ ಕೋರ್ಟ್ಗಳೂ 'ಅರ್ಬಾಜ್ ಕುದಾಯ್'ನಲ್ಲಿರುತ್ತದೆ. ಲಾಸ್ ವೆಗಾಸ್
ನಲ್ಲಿರುವ ದಿ ವೆನಿಷಿಯನ್ ಹಾಗೂ ದಿ ಪಲಾಝೊ
ಹೋಟೆಲ್ಗಳು ವಿಶ್ವದಲ್ಲೇ ದೊಡ್ಡವು ಎಂದು
ಹೆಗ್ಗಳಿಗೆ ಕಾರಣವಾಗಿದ್ದವು. ಈಗಾಗಲೇ ಸೌದಿ ಸರ್ಕಾರದ ಹಣ ಕಾಸು ಇಲಾಖೆ
ಯೋಜನೆಗೆ ಅನುಮತಿ ನೀಡಿದ್ದು, ಏಳು ಸಾವಿರ
ಟೆಂಡರ್ದಾರರು ನಿರ್ಮಾಣಕ್ಕೆ ಒಲವು ತೋರಿಸಿದ್ದಾರೆ
ಎನ್ನಲಾಗುತ್ತಿದೆ.
ಅಂಕಿ ಅಂಶ
₹22 ಸಾವಿರ ಕೋಟಿ ನಿರ್ಮಾಣ ವೆಚ್ಚ
4 ಹೆಲಿಪ್ಯಾಡ್
10 ಸಾವಿರ ಕೊಠಡಿ
70 ರೆಸ್ಟೊರೆಂಟ್
44 ಅಂತಸ್ತು
12 ಗೋಪುರ
Comments
Post a Comment