ದೀಪಾ ಕುಮಾರಿ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿಯಾಗಿ ಬಡ್ತಿ
ಅಂತರರಾಷ್ಟ್ರೀಯ ಹಾಕಿ
ಅಂಪೈರ್
ನವದೆಹಲಿ (ಐಎಎನ್ಎಸ್): ಭಾರತದ ಹಾಕಿ ಅಂಪೈರ್
ದೀಪಾ ಕುಮಾರಿ ಅವರಿಗೆ
ಅಂತರರಾಷ್ಟ್ರೀಯ ಹಾಕಿ
ತೀರ್ಪುಗಾರ್ತಿಯಾಗಿ ಅಂತರರಾಷ್ಟ್ರೀಯ
ಹಾಕಿ ಫೆಡರೇಷನ್ (ಎಫ್ಐಎಚ್) ಅಂಪೈರ್ ಸಮಿತಿ ಬಡ್ತಿ
ನೀಡಿದೆ. ಈ ಬೆನ್ನಲ್ಲೇ ದೀಪಾ ಅವರಿಗೆ ಹಾಕಿ
ಇಂಡಿಯಾ ಅಭಿನಂದನೆ ತಿಳಿಸಿದೆ.
'ಭಾರತದ ಹಾಕಿಗೆ ಇದೊಂದು ಹೆಮ್ಮೆಯ
ದಿನವಾಗಿದೆ. ದೀಪಾ ಅವರ ಈ ಸಾಧನೆಗೆ ಹಾಕಿ ಇಂಡಿಯಾ
ಅವರನ್ನು ಅಭಿನಂದಿಸಲು ಬಯಸುತ್ತದೆ' ಎಂದು ಹಾಕಿ
ಇಂಡಿಯಾ ಪ್ರಧಾನ ಕಾರ್ಯದರ್ಶಿ
ಮೊಹಮ್ಮದ್ ಮುಷ್ತಾಕ್ ಅವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ಯಾರಿವರು ದೀಪಾ ಕುಮಾರಿ: ದೀಪಾ ಅವರು
ದೆಹಲಿಯವರು. 2010ರಿಂದ ವೃತ್ತಿ ಜೀವನ
ಆರಂಭಿಸಿದ್ದ ದೀಪಾ, ಸಾಕಷ್ಟು ದೇಶಿ ಟೂರ್ನಿಗಳಲ್ಲಿ
ತೀರ್ಪುಗಾರ್ತಿಯಾಗಿ ಕಾರ್ಯನಿರ್ವಹಿಸಿದ ಅನುಭವ
ಹೊಂದಿದ್ದಾರೆ.
Comments
Post a Comment