ಜಾರಿದ ಶಿರ ಜೋಡಿಸಿದ ಡಾ|| ಅನಂತ ಕಾಮತ್
ಲಂಡನ್: ಬೆನ್ನಹುರಿಯಿಂದ ಶಿರ (ತಲೆಬುರುಡೆ) ಜಾರಿ
ಸಂಪರ್ಕ ಕಳೆದುಕೊಂಡರೆ ವ್ಯಕ್ತಿ ಬದುಕಿ
ಉಳಿಯಲು ಸಾಧ್ಯವೇ? ಆದರೆ ಜಾರಿದ ಶಿರವನ್ನು ಮತ್ತೆ
ಸ್ವಸ್ಥಾನದಲ್ಲಿ ಕೂರಿಸಿ ವ್ಯಕ್ತಿಯನ್ನು ಬದುಕಿಸಿದ ಅಪರೂಪದ
ಸಾಧನೆಯನ್ನು ಭಾರತೀಯ ವೈದ್ಯರೊಬ್ಬರು
ಮಾಡಿದ್ದಾರೆ.
ಕಾರು ಅಪಘಾತದಲ್ಲಿ ಬೆನ್ನ ಹುರಿಯ ತುದಿಯಿಂದ ಜಾರಿದ
ಬ್ರಿಟಿಷ್ ವ್ಯಕ್ತಿಯೊಬ್ಬನ ಶಿರವನ್ನು ಮತ್ತೆ
ಸ್ವಸ್ಥಾನದಲ್ಲಿ ಕೂರಿಸಿ ಬದುಕಿಸಿದ ಸಾಧನೆಯನ್ನು ಮಿರರ್ ಆನ್ಲೈನ್
ವರದಿ ಭಾನುವಾರ ಮಾಡಿದೆ.
ಭಾರತೀಯ ಮೂಲದ ನರ ಶಸ್ತ್ರಚಿಕಿತ್ಸಕ
(ನ್ಯೂರೋ ಸರ್ಜನ್) ಡಾ. ಅನಂತ ಕಾಮತ್
ಅವರು ಟೋನಿ ಕೋವನ್ ಅವರ
ತಲೆಬುರುಡೆಯನ್ನು ಲೋಹದ ತಟ್ಟೆ ಮತ್ತು
ಬೋಲ್ಟ್ ಬಳಸಿ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ
ಬೆನ್ನ ಹುರಿ ಮೇಲಿನ ಸ್ವಸ್ಥಾನದಲ್ಲಿ ಕೂರಿಸಿದ್ದಾರೆ.
ಗುಣಮುಖರಾಗುತ್ತಿರುವ ಕೋವನ್ ಶೀಘ್ರ
ಮನೆಗೆ ತೆರಳುವ ಭರವಸೆಯಿಂದಿದ್ದಾರೆ.
ನ್ಯೂಕ್ಯಾಸಲ್ ನಗರದ ನಿವಾಸಿ ಟೋನಿ
ಕೋವನ್ ಕಳೆದ ವರ್ಷ ಸೆಪ್ಟೆಂಬರ್
9ರಂದು ಅಪಘಾತಕ್ಕೆ ಈಡಾಗಿದ್ದರು. ಅವರ ಕಾರು ಸ್ಪೀಡ್
ಬಂಪ್ಗೆ ಡಿಕ್ಕಿ ಹೊಡೆದು ನಿಯಂತ್ರಣ
ಕಳೆದುಕೊಂಡು ಟೆಲಿಫೋನ್
ಕಂಬವೊಂದಕ್ಕೆ ಗುದ್ದಿತ್ತು.
ಅಪಘಾತದಲ್ಲಿ ಗಾಯಗೊಂಡ
ಟೋನಿ ಅವರ ಹೃದಯ ಬಡಿತ ನಿಂತು
ಹೋಗಿತ್ತು. ಆಸ್ಪತ್ರೆಗೆ ಒಯ್ಯುವ
ಮೊದಲು ಅವರಿಗೆ ಕೃತಕ
ಶ್ವಾಸೋಚ್ಛಾಸ ಮಾಡಿಸಲಾಗಿತ್ತು.
ಟೋವನ್ ಅವರಿಗೆ ಕತ್ತಿನ ಮೂಳೆ ಮುರಿತದ
ಜೊತೆಗೆ ಬೆನ್ನಹುರಿಯಲ್ಲೂ ತೀವ್ರ ಜಖಂ
ಆಗಿತ್ತು. ವೈದ್ಯರ ಪ್ರಕಾರ ಈ ಮಾದರಿಯ ಏಟು ಬಿದ್ದವರು
ಬದುಕುವುದೇ ಕಷ್ಟ.
ಅದೃಷ್ಟವೆಂದರೆ ಅಪಘಾತದಲ್ಲಿ ಟೋನಿ
ಕೋವನ್ ಅವರ ಮೆದುಳಿಗೆ ಕಿಂಚಿತ್ತೂ
ಹಾನಿಯಾಗಿರಲಿಲ್ಲ. ಶಿರ ಮಾತ್ರ ಬೆನ್ನಹುರಿಯ ತುದಿ ಸಂಪರ್ಕ
ಕಳೆದುಕೊಂಡಿತ್ತು. ಅಪಘಾತದ ವೇಳೆಯಲ್ಲಿ
ಅಂಗಾಂಶ ಹಾಗೂ ಸ್ನಾಯುಗಳಿಂದಾಗಿ ಮಾತ್ರ ಶಿರ ದೇಹದ
ಸಂಪರ್ಕದಲ್ಲಿತ್ತು.
ನ್ಯೂರೋಸರ್ಜನ್ ಅನಂತ ಕಾಮತ್ ತಮ್ಮ
'ತಲೆ' ಓಡಿಸಿ, ಟೋವನ್ 'ತಲೆಬುರುಡೆ'ಯನ್ನು
ಸ್ವಸ್ಥಾನಕ್ಕೆ ಜೋಡಿಸುವ ಆಪರೇಷನ್ ಮಾಡಿದರು.
Comments
Post a Comment