CET 2015: VERIFICATION ON 3rd JUNE , SEAT MATRIX ON 13th JUNE
ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿಯಲ್ಲೂ ಬದಲಾವಣೆ
ವಿಕ ಸುದ್ದಿಲೋಕ | May 28, 2015, 04.08AM IST
ಜೂನ್ 3ರಿಂದ ದಾಖಲಾತಿ ಪರಿಶೀಲನೆ ಆರಂಭ,
13ರಂದು ಸೀಟ್ ಮ್ಯಾಟ್ರಿಕ್ಸ್ ಪ್ರಕಟ
ಬೆಂಗಳೂರು: ಜೂನ್ 1ಕ್ಕೆ ಸಿಇಟಿ ಫಲಿತಾಂಶ
ಮುಂದೂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ
ಪರೀಕ್ಷಾ ಪ್ರಾಧಿಕಾರ ಇತರೆ ಕೌನ್ಸೆಲಿಂಗ್
ಪ್ರಕ್ರಿಯೆಗಳ ವೇಳಾಪಟ್ಟಿಯಲ್ಲೂ ಬದಲಾವಣೆ
ಮಾಡಿದೆ.
ಜೂನ್ 3ರಂದು ವಿಶೇಷಚೇತನ ಅಭ್ಯರ್ಥಿಗಳ
ವೈದ್ಯ ಪರೀಕ್ಷೆ, ಎನ್ಸಿಸಿ ಅಭ್ಯರ್ಥಿಗಳ ಹಾಗೂ
ಕ್ರೀಡಾ ಕೋಟಾ ದಾಖಲಾತಿ ಪರಿಶೀಲನೆ
ಜೂನ್ 4ರಂದು ಬೆಳಗ್ಗೆ 11 ಗಂಟೆ ನಂತರ
ಪ್ರಾಧಿಕಾರದ ಕಚೇರಿ ಆವರಣದಲ್ಲಿ ನಡೆಯಲಿದೆ.
ಹೊರನಾಡು/ ಗಡಿನಾಡು, ಜಮ್ಮು ಮತ್ತು
ಕಾಶ್ಮೀರದ ವಲಸಗರು, ಸೈನಿಕರು/ಮಾಜಿ
ಸೈನಿಕರ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ಸ್,
ಕೇಂದ್ರ ಸಶಸ್ತ್ರ ಪೊಲೀಸ್ ದಳ/ ದಳದ ಮಾಜಿ
ಸಿಬ್ಬಂದಿ, ಎನ್ಸಿಸಿ (ಪ್ರಿಫರೆನ್ಸ್-80) ಮತ್ತು ಕ್ರೀಡೆ
(ಪ್ರಿಫರೆನ್ಸ್-5) ಅಭ್ಯರ್ಥಿಗಳು ಬೆಂಗಳೂರು
ಕೇಂದ್ರದಲ್ಲಿಯೇ ದಾಖಲಾತಿ ಪರಿಶೀಲನೆಗೆ
ಹಾಜರಾಗಬೇಕು. ಉಳಿದವರು ಈಗಾಗಲೇ
ಪ್ರಕಟಿಸಿರುವ 13 ಸಹಾಯ ಕೇಂದ್ರಗಳಲ್ಲಿ ಜೂನ್
5ರಿಂದ 20ರವರೆಗೆ ನಡೆಯುವ ದಾಖಲಾತಿ
ಪರಿಶೀಲನೆಗೆ ಹಾಜರಾಗಬಹುದು ಎಂದು
ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲ ಸುತ್ತಿನ ಆಪ್ಷನ್ ಎಂಟ್ರಿ ವೇಳಾಪಟ್ಟಿ:
ಜೂನ್ 13ರಂದು ಸಂಜೆ 4 ಗಂಟೆ ನಂತರ ಸೀಟ್
ಮ್ಯಾಟ್ರಿಕ್ಸ್ ಹಾಗೂ ಶುಲ್ಕ ವಿವರ
ಪ್ರಕಟಿಸಲಾಗುತ್ತದೆ. ಜೂನ್ 17ರಂದು ಬೆಳಗ್ಗೆ
10ರಿಂದ 22ರಂದು ಬೆಳಗ್ಗೆ 10 ಗಂಟೆವರೆಗೆ ಅರ್ಹ
ಅಭ್ಯರ್ಥಿಗಳಿಗೆ ಆಪ್ಷನ್ ಎಂಟ್ರಿಗೆ ಅವಕಾಶ ಇರುತ್ತದೆ.
ಜೂನ್ 23ರಂದು ಸಂಜೆ 5 ಗಂಟೆಗೆ ಮಾಕ್
ಅಲಾಟ್ಮೆಂಟ್ ಫಲಿತಾಂಶ ಪ್ರಕಟಿಸಲಾಗುತ್ತದೆ.
ಅಭ್ಯರ್ಥಿಗಳ ಆಪ್ಸನ್ ಬದಲಾವಣೆಗೆ ಜೂನ್ 23ರಂದು
ರಾತ್ರಿ 8ರಿಂದ 25ರಂದು ಬೆಳಗ್ಗೆ 9 ಗಂಟೆವರೆಗೆ
ಅವಕಾಶ ಇರುತ್ತದೆ. ನೈಜ ಅಲಾಟ್ಮೆಂಟ್
ಫಲಿತಾಂಶ ಜೂನ್ 26ರಂದು ಸಂಜೆ 5 ಗಂಟೆ
ನಂತರ ಪ್ರಕಟವಾಗಲಿದೆ. ಖಚಿತ ಅಲಾಟ್ಮೆಂಟ್,
ಪೇಮೆಂಟ್ ಶುಲ್ಕ ಹಾಗೂ ಪ್ರವೇಶಾತಿ
ನೋಂದಣಿ ವಿವರಗಳನ್ನು ಪಡೆಯಲು ಜೂನ್
27ರಿಂದ 30ರವರೆಗೆ ಅವಕಾಶ ಇರುತ್ತದೆ.
ಕಾಲೇಜುಗಳಲ್ಲಿ ದಾಖಲಾತಿ
ಮಾಡಿಕೊಳ್ಳಲು ಜೂನ್ 30 ಸಂಜೆ 5.30ರವರೆಗೆ
ಅವಕಾಶ ಇರಲಿದೆ.
ಎರಡನೇ ಸುತ್ತಿನ ಆಪ್ಷನ್ನಲ್ಲಿ ಯಾವುದೇ
ಬದಲಾವಣೆ ಇರುವುದಿಲ್ಲ. ಅಭ್ಯರ್ಥಿಗಳು ಹೆಚ್ಚಿನ
ವಿವರಗಳಿಗೆ ಬ್ರೋಚರ್ ನೋಡಬಹುದು.
ಸಂಪರ್ಕಿಸಬಹುದಾದ ಪ್ರಾಧಿಕಾರದ ವೆಬ್ಸೈಟ್
ವಿಳಾಸ: http://kea.kar.nic.in
Comments
Post a Comment