TENNIS :ITALIAN OPEN : SHARPOVA WON WOMEN'S SINGLE TITLE

ಇಟಾಲಿಯನ್‌ ಓಪನ್‌: ಶರಪೋವಾಗೆ ಪ್ರಶಸ್ತಿ

ಉದಯವಾಣಿ, May 18, 2015, 3:45 AM IST
[image][image]
ರೋಮ್‌:ಮೂರನೇ ಶ್ರೇಯಾಂಕದ ಮರಿಯಾ ಶರಪೋವಾ ಅವರು ಇಟಾಲಿಯನ್‌ ಓಪನ್‌ ಟೆನಿಸ್‌ ಕೂಟದ ವನಿತೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಫೈನಲ್‌ ಹೋರಾಟದಲ್ಲಿ ಅವರು ಸ್ಪೇನ್‌ನ ಕಾರ್ಲಾ ಸೂರೆಜ್‌ ನವಾರೊ ಅವರನ್ನು 4-6, 7-5, 6-1 ಸೆಟ್‌ಗಳಿಂದ ಉರುಳಿಸಿದರು. ಶರಪೋವಾ ಈ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಡಾರಿಯಾ ಗ್ಯಾವ್ರಿಲೋವಾ ಅವರನ್ನು 7-5, 6-3 ಸೆಟ್‌ಗಳಿಂದ ಸೋಲಿಸಿದ್ದರೆ ಸೂರೆಜ್‌ ಸೆಮಿಫೈನಲ್‌ ಪಂದ್ಯದಲ್ಲಿ ಸಿಮೋನಾ ಹಾಲೆಪ್‌ ಅವರನ್ನು 2-6, 6-3, 7-5 ಸೆಟ್‌ಗಳಿಂದ ಉರುಳಿಸಿದ್ದರು.

ಫೆಡರರ್‌ ಫೈನಲಿಗೆ

ಸ್ವಿಸ್‌ನ ರೋಜರ್‌ ಫೆಡರರ್‌ ಅವರು ತನ್ನದೇ ದೇಶದ ಸ್ಟಾನ್‌ ವಾವ್ರಿಂಕ ಅವರನ್ನು ನೇರ ಸೆಟ್‌ಗಳಿಂದ ಕೆಡಹಿ ಇಟಾಲಿಯನ್‌ ಓಪನ್‌ ಟೆನಿಸ್‌ ಕೂಟದ ಫೈನಲ್‌ ಹಂತಕ್ಕೇರಿದರು. ಫೈನಲ್‌ನಲ್ಲಿ ಅವರು ಸರ್ಬಿಯಾದ ಎದುರಾಳಿ ನೊವಾಕ್‌ ಜೊಕೋವಿಕ್‌ ಅವರನ್ನು ಎದು ರಿಸಲಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಆವೆ ಅಂಗಣದ ರಾಜ ರಫೆಲ್‌ ನಡಾಲ್‌ ಅವರನ್ನು ಸೋಲಿಸಿ ಅಚ್ಚರಿಗೊಳಿಸಿದ್ದ ವಾವ್ರಿಂಕ ಸೆಮಿಫೈನಲ್‌ನಲ್ಲಿ ಯಾವುದೇ ಹೋರಾಟ ನೀಡದೇ 4-6, 2-6 ಸೆಟ್‌ಗಳಿಂದ ಫೆಡರರ್‌ಗೆ ಶರಣಾದರು. ಇಲ್ಲಿ ಏಳು ಬಾರಿ ಪ್ರಶಸ್ತಿ ಜಯಿಸಿದ್ದ ನಡಾಲ್‌ ವಿರುದ್ಧ ವಾವ್ರಿಂಕ ಆವೆ ಅಂಗಣದಲ್ಲಿ ಮೊದಲ ಗೆಲುವು ಒಲಿಸಿಕೊಂಡಿದ್ದರು.
ಫೈನಲ್‌ನಲ್ಲಿ ಫೆಡರರ್‌ ಅವರ ಎದುರಾಳಿ ಜೊಕೋವಿಕ್‌ ಸೆಮಿಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಡೇವಿಡ್‌ ಫೆರರ್‌ ಅವರನ್ನು ಉರುಳಿಸಿದ್ದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು