World No Tobacco Day (WNTD) is observed around the world every year on May 31

'ಆಹಾರವಿಲ್ಲದೇ ಬದುಕಲು ಸಾಧ್ಯವಿಲ್ಲ ಆದರೆ ತಂಬಾಕು ಇಲ್ಲದೇ ಬದುಕಬಹುದು'
ಆಹಾರ ಬೆಳೆವ ರೈತ ಇನ್ನು ಜೋಪಡಿಯಲ್ಲೇ ಇದ್ದಾನೆ. ಸಿಗರೇಟ್ ತಯಾರಿಕಾ ಕಂಪನಿ ಮಾಲಿಕ ಬಹುಮಹಡಿ ಕಟ್ಟಡದಲ್ಲಿದ್ದಾನೆ'. ಇದು ವಾಸ್ತವದ ಸತ್ಯ. ತಂಬಾಕು ಕ್ಯಾನ್ಸರ್ ಕಾರಕ,
ಇಂದೇ ತಂಬಾಕು ತ್ಯಜಿಸಿ, ನಾನು ಮುಖೇಶ್ ಗುಟ್ಕಾ ತಿನ್ನುತ್ತಿದೆ... ಶ್ವಾಸಕೋಶದಲ್ಲಿ ಇಷ್ಟೊಂದು ಟಾರ್, ಈ ಬಗೆಯ ಜಾಗೃತಿ ಜಾಹೀರಾತುಗಳನ್ನು ಎಲ್ಲಿಯಾದರೂ ನೋಡಿಯೇ ಇರುತ್ತೀರಿ.

ಮೇ 31 ವಿಶ್ವ ತಂಬಾಕು ದಿನ. ಪ್ರತಿವರ್ಷ ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಳ್ಳುವ ತಂಬಾಕಿಗೆ ಕರುಣೆ ಎಂಬುದೇ ಇಲ್ಲ.
ತಂಬಾಕು ನಿಷೇಧ ದಿನ ಮತ್ತೆ ಬಂದಿದೆ. ಈ ಬಾರಿಯಾದರೂ ವ್ಯಸನಿಗಳು ಧೂಮಪಾನ, ಗುಟ್ಕಾ, ಚೈನಿ, ತಂಬಾಕು ಜಗಿಯುವುದಕ್ಕೆ ಫುಲ್ ಸ್ಟಾಪ್ ಹಾಕಬೇಕಿದೆ.
ವಿಶ್ವ ತಂಬಾಕು ರಹಿತ ದಿನದ ಹಿನ್ನೆಲೆಯಲ್ಲಿ ಕೆಲ ಸಂಗತಿಗಳನ್ನು ಅವಲೋಕಿಸಬೇಕಾಗುತ್ತದೆ. ಇದನ್ನು ಓದುದ ಮೇಲೆ ನೀವು ತಂಬಾಕು ಬಿಡಲು ಮನಸ್ಸು ಮಾಡಿದರೂ ಮಾಡಬಹುದು.
ತಂಬಾಕಿಗೆ ಬಲಿಯಾಗುವವರ ಸಂಖ್ಯೆ ಎಷ್ಟು?
ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳುವಂತೆ ತಂಬಾಕಿನ ಚಟಕ್ಕೆ ಪ್ರತಿವರ್ಷ 6 ಮಿಲಿಯನ್ ಜನ ಬಲಿಯಾಗುತ್ತಿದ್ದಾರೆ. ಇದರಲ್ಲಿನ ಧೂಮಪಾನಿಗಳ ಪಾಲೇ(ಶೇ. 90) ಬಹಳ ದೊಡ್ಡದು.
ತಂಬಾಕು ಸೇವನೆ ಅಥವಾ ಧೂಮಪಾನ ಕಡಿಮೆಯಾಗಿದೆಯೇ? ಹೌದು .. ಇದೊಂದು ಸಕಾರಾತ್ಮಕ ಬೆಳವಣಿಗೆ.
ಜಗತ್ತಿನ 125 ದೇಶಗಳಲ್ಲಿ ಸಿಗರೇಟ್ ಕೊಳ್ಳುವವರ ಸಂಖ್ಯೆ ಕ್ಷೀಣಿಸಿದೆ. ಆದರೆ ಅದರೊಂದಿಗೆ ಜನಸಂಖ್ಯೆಯೂ ಏರಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು.

😌ಎಲ್ಲಿ ಧೂಮಪಾನಿಗಳು ಹೆಚ್ಚಿದ್ದಾರೆ?
ದಕ್ಷಿಣ ಆಫ್ರಿಕಾ ಧೂಮಪಾನಿಗಳ ತವರಾಗಿ ಪರಿಣಮಿಸಿದೆ. ಯುರೋಪ್, ಉತ್ತರ ಅಮೆರಿಕ, ಉಗಾಂಡಾ, ಕೀನ್ಯಾ ಮತ್ತಿತರ ದೇಶಗಳಲ್ಲಿ ಧೂಮಪಾನಿಗಳ ಸಂಖ್ಯೆ ದೊಡ್ಡದಾಗಿಯೇ ಇದೆ.

👳ಧೂಮಪಾನ ನಿಲ್ಲಿಸಿದರೆ ನಿಮ್ಮ ದೇಹಕ್ಕೆ ಏನಾಗುತ್ತದೆ?
* ಧೂಮಪಾನ ನಿಲ್ಲಿಸಿದ 20 ನಿಮಿಷದಲ್ಲಿ ನಿಮ್ಮ ರಕ್ತದೊತ್ತಡ ಕಡಿಮೆಯಾಗುತ್ತದೆ. ಹೃದಯ ಬಡಿತ ಸ್ಥಿಮಿತಕ್ಕೆ ಬರುತ್ತದೆ

* 12 ಗಂಟೆ ನಂತರ ನಿಮ್ಮ ರಕ್ತದ ಕಬ್ಬಿಣದ ಅಂಶ ಸಾಮಾನ್ಯ ಸ್ಥಿತಿಗೆ ಬರುತ್ತದೆ.

* ಮೂರು ವಾರಗಳ ನಂತರ ನಿಮ್ಮ ಶ್ವಾಸಕೋಶ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳತೊಡಗುತ್ತದೆ. * 9 ತಿಂಗಳಲ್ಲಿ ಕೆಮ್ಮು ಮತ್ತು ವೇಗದ ಉಸಿರಾಟ ಹತೋಟಿಗೆ ಬರುತ್ತದೆ.

* ಒಂದು ವರ್ಷದ ನಂತರ ನಿಮಗೆ ಹೃದಯ ಸಂಬಂಧಿ ಕಾಯಿಲೆ ಅಂಟಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ
* ಐದು ವರ್ಷದ ನಂತರ ನೀವು ಕ್ಯಾನ್ಸರ್ ಭಯದಿಂದ ಮುಕ್ತರಾಗುತ್ತೀರಿ.

⚡ಶಾಸನ ವಿಧಿಸಿದೆ ಎಚ್ಚರಿಕೆ! ವಿಶ್ವದೆಲ್ಲೆಡೆ ಸೇರಿದಂತೆ ಭಾರತದಲ್ಲಿ ತಂಬಾಕು ವಸ್ತುಗಳ ಮೇಲೆ ಕ್ಯಾನ್ಸರ್ ಸಂಬಂಧಿತ ಚಿತ್ರವನ್ನು ದೊಡ್ಡದಾಗಿ ಮುದ್ರಿಸಲಾಗುತ್ತಿದೆ. ಈ ಚಿತ್ರ ಚಟಕ್ಕೆ ದಾಸರಾದವರಲ್ಲಿ ಜಾಗೃತಿ ಮೂಡಿಸಲಿ ಎಂಬುದು ಆರೋಗ್ಯ ಇಲಾಖೆಯ ಉದ್ದೇಶ! ಧೂಮಪಾನ ನಿಯಂತ್ರಣಕ್ಕೆ ತರಲು ಸರ್ಕಾರಗಳು ಅನೇಕ ಕಠಿಣ ಕ್ರಮ ತೆಗೆದುಕೊಂಡಿವೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ಗರಿಷ್ಠ ಪ್ರಮಾಣದ ದಂಡ ವಿಧಿಸಲಾಗುತ್ತಿದೆ. ಬಿಡಿ ಬಿಡಿ ಯಾಗಿ ಸಿಗರೇಟ್ ಮಾರುವುದಕ್ಕೂ ನಿಷೇಧ ಹೇರಲು ಚಿಂತನೆ ನಡೆದಿದೆ. ಅಲ್ಲದೇ ಪ್ರತಿಸಾರಿಯ ಬಜೆಟ್ ನಲ್ಲೂ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚು ಮಾಡಲಾಗುತ್ತಿದೆ.

ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಸಿಗರೇಟ್ ಹೊಗೆ ಕಾಣಸಿಗುತ್ತದೆ. ಧೂಮಪಾನಿಗಳು ಮಾತ್ರವಲ್ಲದೇ ಅವರ ಸ್ನೇಹಿತರನ್ನು ಇದು ಬಲಿ ತೆಗೆದುಕೊಳ್ಳುತ್ತಿದೆ. ತಂಬಾಕನ್ನು ಸಂಪೂರ್ಣ ನಿಷೇಧ ಮಾಡಿ ಎಂದರೆ ಹಲವಾರು ಅಡ್ಡಿ ಆತಂಕಗಳು ಎದುರಾಗಬಹುದು. ನಾವೇ ಅದರಿಂದ ದೂರವಿದ್ದರೆ ಯಾವ ತಾಪತ್ರಯ ಆಗಲ್ಲ. ಏನಂತೀರಿ?

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು