 ತುರ್ತು ಪರಿಸ್ಥಿತಿ 1975ರ ಕರಾಳ ನೆನಪು...  25 ಜೂನ್ 1975– 21 ಮಾರ್ಚ್ 1977

ಸ್ವಾತಂತ್ರ್ಯೋತ್ತರ ಭಾರತದ
ರಾಜಕೀಯ ಇತಿಹಾಸದಲ್ಲಿ ತುರ್ತು
ಪರಿಸ್ಥಿತಿ ಎಂದೂ ಮಾಸಲಾರದ
ಕಪ್ಪುಚುಕ್ಕೆ.1975ರ ಜೂನ್ 25ರ
ಮಧ್ಯರಾತ್ರಿ ರಾಷ್ಟ್ರಪತಿ
ಫಕ್ರುದ್ದೀನ್ ಅಲಿ ಅಹ್ಮದ್ ಅಂದಿನ
ಪ್ರಧಾನಿ ಇಂದಿರಾ ಗಾಂಧಿ ಅವರ
ಆಣತಿಯಂತೆ ದೇಶದ ಮೇಲೆ
ತುರ್ತು ಪರಿಸ್ಥಿತಿ ಹೇರುವ
ನಿರ್ಧಾರಕ್ಕೆ ಸಹಿ ಹಾಕಿದಾಗ ದೇಶ
ಕ್ಷಣಮಾತ್ರದಲ್ಲಿ ಜನತಂತ್ರ
ವ್ಯವಸ್ಥೆಯಿಂದ ದೂರ ಸರಿದು
'ಸರ್ವಾಧಿಕಾರಿ' ಮಾದರಿಯ ಆಡಳಿತಕ್ಕೆ
ಒಳಪಟ್ಟಿತು.
ತುರ್ತು ಪರಿಸ್ಥಿತಿಯ ನಾಲ್ಕು ದಶಕಗಳ
ನಂತರ ಅದಕ್ಕೆ ಕಾರಣವಾದ
ಸನ್ನಿವೇಶಗಳನ್ನು ಹುಡುಕುತ್ತ
ಹೋದರೆ 73–75ರ ಸಮಯದಲ್ಲಿ
ಪ್ರಧಾನಿ ಇಂದಿರಾಗಾಂಧಿ ಅವರಿಗೆ
ಕಾಡುತ್ತಿದ್ದ ಅಭದ್ರತೆ ಕಣ್ಣಿಗೆ
ಬೀಳುತ್ತದೆ.
1973–74ರಲ್ಲಿ ಗುಜರಾತ್ನಲ್ಲಿ ನಡೆದ
ವಿದ್ಯಾರ್ಥಿ ಚಳವಳಿ, 1975ರ ಗುಜರಾತ್
ಚುನಾವಣೆಯಲ್ಲಿ ಕಾಂಗ್ರೆಸ್
ಸೋಲು, 1974ರ ಮಾರ್ಚ್–
ಏಪ್ರಿಲ್ನಲ್ಲಿ ಬಿಹಾರ ಸರ್ಕಾರದ ವಿರುದ್ಧ
'ಬಿಹಾರ ಛಾತ್ರ ಸಂಘರ್ಷ ಸಮಿತಿ'
ಜಯಪ್ರಕಾಶ್ ನಾರಾಯಣ ಅವರ
ನೇತೃತ್ವದಲ್ಲಿ ಹಮ್ಮಿಕೊಂಡಿದ್ದ
ಚಳವಳಿ, ಆನಂತರ ನಡೆದ ರೈಲ್ವೆ ನೌಕರರ
ರಾಷ್ಟ್ರವ್ಯಾಪಿ ಮುಷ್ಕರ ಎಲ್ಲವೂ
ಇಂದಿರಾ ಪ್ರಭಾವವನ್ನು
ಕುಗ್ಗಿಸಿತ್ತು.
1971ರ ಚುನಾವಣೆಯಲ್ಲಿ
ರಾಯಬರೇಲಿಯಲ್ಲಿ ಇಂದಿರಾ
ವಿರುದ್ಧ ಸ್ಪರ್ಧಿಸಿ ಸೋತಿದ್ದ ರಾಜ್
ನಾರಾಯಣ್, ಇಂದಿರಾ
ವಾಮಮಾರ್ಗದಿಂದ ಗೆದ್ದಿದ್ದಾರೆ
ಎಂದು ಕೋರ್ಟ್ಗೆ ಹೋದರು.
1975ರ ಜೂನ್ 12ರಂದು
ಅಲಹಾಬಾದ್ ಹೈಕೋರ್ಟ್
ಚುನಾವಣಾ ಅವ್ಯವಹಾರದ ಕಾರಣ
ಪ್ರಧಾನಿ ಇಂದಿರಾರ ಸಂಸತ್
ಸದಸ್ಯತ್ವವನ್ನು ರದ್ದುಗೊಳಿಸಿತು.
ಈ ಆದೇಶ ಪ್ರಶ್ನಿಸಿ ಇಂದಿರಾ
ಸುಪ್ರೀಂಕೋರ್ಟ್
ಮೆಟ್ಟಿಲೇರಿದರು. ಜೂನ್ 24 ರಂದು
ಸುಪ್ರೀಂಕೋರ್ಟ್, ಹೈಕೋರ್ಟ್
ಆದೇಶ ಎತ್ತಿಹಿಡಿಯಿತು. ಜೂನ್ 25
ರಂದು ಜೆ.ಪಿ ಅವರು ದೆಹಲಿಯಲ್ಲಿ
ಬೃಹತ್ ಪ್ರತಿಭಟನೆ ಆಯೋಜಿಸಿದರು.
ಅದೇ ದಿನ ರಾತ್ರಿ ತುರ್ತು ಪರಿಸ್ಥಿತಿ
ಹೇರಲಾಯಿತು.
ಪಶ್ಚಿಮಬಂಗಾಳದ ಆಗಿನ
ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರೆ,
ತುರ್ತು ಪರಿಸ್ಥಿತಿ ಹೇರುವಂತೆ
ಇಂದಿರಾ ಅವರಿಗೆ ಸಲಹೆ ನೀಡಿದ್ದರು.
ಪ್ರಜಾಪ್ರಭುತ್ವದ ನಾಲ್ಕು ಆಧಾರ
ಸ್ತಂಭಗಳಾದ ಸಂಸತ್ತು,
ಕಾರ್ಯಾಂಗ, ನ್ಯಾಯಾಂಗ
ಹಾಗೂ ಮಾಧ್ಯಮಗಳ
ಸ್ವಾತಂತ್ರ್ಯ ಕಸಿಯಲಾಯಿತು.
ಇಂದಿರಾ ಗಾಂಧಿ ಅವರ ಎರಡನೇ
ಪುತ್ರ ಸಂಜಯ್ ಗಾಂಧಿ ತುರ್ತು
ಪರಿಸ್ಥಿತಿಯ 21 ತಿಂಗಳ ಕಾಲ ತಾವೇ
ಪ್ರಧಾನಿಯಂತೆ ವರ್ತಿಸಿದರು.
ಇಂದಿರಾ, ಸಂಜಯ್
ವಿರೋಧಿಗಳನ್ನು
ಬಗ್ಗುಬಡಿಯಲಾಯಿತು.
ಮಾಧ್ಯಮಗಳ ಮೇಲೆ 'ಸೆನ್ಸಾರ್'
ಹೇರಲಾಯಿತು.
ಲೋಕನಾಯಕ ಜಯಪ್ರಕಾಶ್
ನಾರಾಯಣ್ ಸರ್ಕಾರದ ವಿರುದ್ಧ
ಜನಾಂದೋಲನ ನೇತೃತ್ವ
ವಹಿಸಿದ್ದರು. ಸಮಾಜವಾದಿ ನಾಯಕ
ಜಾರ್ಜ್ ಫರ್ನಾಂಡಿಸ್, ಜನಸಂಘದ ಅಟಲ್
ಬಿಹಾರಿ ವಾಜಪೇಯಿ, ಎಲ್.ಕೆ.
ಅಡ್ವಾಣಿ, ಜನತಾ ಪಕ್ಷದ ಮೊರಾರ್ಜಿ
ದೇಸಾಯಿ, ಚರಣ್ ಸಿಂಗ್ ಇವರೆಲ್ಲ
ಇಂದಿರಾ ವಿರೋಧಿ ಹೋರಾಟದ
ಮುಂಚೂಣಿಯಲ್ಲಿ ಇದ್ದರು.
1977ರ ಚುನಾವಣೆಯಲ್ಲಿ ಕಾಂಗ್ರೆಸ್
ನೆಲಕಚ್ಚಿ ಜನತಾಪಕ್ಷ ಅಧಿಕಾರ
ಹಿಡಿಯಿತು. ತುರ್ತು ಪರಿಸ್ಥಿತಿಯು
ಕಾಂಗ್ರೆಸ್ ವಿರೋಧಿ ರಾಜಕಾರಣದ
ಮೊದಲ ಮೆಟ್ಟಿಲಾಯಿತು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು